ಖಾಂಡ್ವಾ:ಪತಿಯೊಬ್ಬ ಮನೆಯಲ್ಲಿ ಸಿಸಿಟಿವಿ ಅಳವಡಿಸಿ ಪತ್ನಿಯ ಅಶ್ಲೀಲ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಹೇಯ ಕೃತ್ಯ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ATM ಕಾರ್ಡ್ ಗಾತ್ರದಲ್ಲಿ ಮದುವೆ ಆಮಂತ್ರಣ ಪತ್ರಿಕೆ: ಅದರಲ್ಲೂ ಇದೆ ಒಂದು ಟ್ವಿಸ್ಟ್​​..
ಜಿಲ್ಲೆಯ ಮಂಧಾತ ಪೊಲೀಸ್ ಠಾಣೆ ವ್ಯಾಪ್ತಿಯ ಇನ್ಪುನ್ ಗ್ರಾಮಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು. ನೊಂದ ಮಹಿಳೆಯು ತನ್ನ ಪತಿ ಮೊಹಮ್ಮದ್ ಮೆಹ್ತಾಬ್ ಆಕ್ಷೇಪಾರ್ಹ ವಿಡಿಯೋ ಮಾಡಿ ತನ್ನ ಕುಟುಂಬ ಸದಸ್ಯರಿಗೆ ಕಳುಹಿಸಿದ್ದಾನೆ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಹಾಕಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕೆಲ ಸಮಯದ ಹಿಂದೆ ಪತಿ ವಿರುದ್ಧ ಮಹಿಳೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಳು. ಆದರೆ ಎರಡು ಬದಿಯ ಸದಸ್ಯರ ಒಪ್ಪಂದದ ಮೇರೆಗೆ ಇದು ರದ್ದಾಗಿತ್ತು. ಇದಾದ ಬಳಿಕ ಆಕೆ ತನ್ನ ಪತಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದು, ದುರುಳ ಪತಿ ಅದಾಗಲೇ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ. ಹೊಂದಾಣಿಕೆಯಾಗದ ಕಾರಣ ಪತಿ ಮತ್ತೆ ಜಗಳವಾಡಿದ್ದು, ಅವಳು ತನ್ನ ತಾಯಿಯ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಳು.
ಇದನ್ನೂ ಓದಿ:ಪಾರ್ಕ್​ನಲ್ಲಿ ಎಲ್ಲರ ಮುಂದೆಯೇ ಪ್ರಾಣ ಬಿಟ್ಟ ಬಾಲಕಿ..!
ಈ ವೇಳೆ ಪತಿಯ ಸಿಸಿಟಿವಿ ಮೂಲಕ ಸೆರೆ ಹಿಡಿದಿದ್ದ ಆಕೆಯ ಖಾಸಗಿ ವಿಡಿಯೋವನ್ನು ತಂದೆ ಮತ್ತು ಸಹೋದರ ಸೇರಿದಂತೆ ಕುಟುಂಬದ ಇತರ ಸದಸ್ಯರ ಮೊಬೈಲ್‌ಗೆ ವೀಡಿಯೊ ಕಳುಹಿಸಿದ್ದಾನೆ. ಇದರಿಂದ ಮನನೊಂದ ಆತನ ಪತ್ನಿ ಮಾಂಧಾಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಗಂಡ-ಹೆಂಡತಿ ನಡುವೆ ಜಗಳ ನಡೆದಿದೆ. ಇದಾದ ನಂತರ ಪತಿ ಪತ್ನಿಯ ಪೋಷಕರಿಗೆ ಕೆಲವು ಆಕ್ಷೇಪಾರ್ಹ ವಿಡಿಯೋಗಳನ್ನು ಕಳುಹಿಸಿದ್ದು, ಐಟಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಂದು ಖಾಂಡ್ವಾ ಎಸ್​ಪಿ ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 1 =
Remember me
