ಕೊಟ್ಟಾಯಂ:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ತನ್ನಿಂದ ಪ್ರತ್ಯೇಕಗೊಂಡು ವಾಸಿಸಲು ಆರಂಭಿಸಿದ್ದರಿಂದ ಸಿಟ್ಟಿಗೆದ್ದ ಪತಿ ಅಮೆರಿಕದ ರಸ್ತೆಯಲ್ಲಿ ಚೂರಿಯಿಂದ ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ಅಲ್ಲದೆ, ಅದೇ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ಕೇರಳ ಮೂಲದ ಮೆರಿನ್​ ಜಾಯ್​ (26) ಹತ್ಯೆಯಾದವಳು. ಈಕೆಯ ಪತಿ ಫಿಲಿಪ್​ ಮ್ಯಾಥ್ಯೂ ಅಲಿಯಾಸ್​ ನೆವಿನ್​ (34) ಹತ್ಯೆ ಮಾಡಿದವನು.
ಕೇರಳದ ಕೊಟ್ಟಾಯಂ ಮೂಲದ ಮೆರಿನ್​ ಜಾಯ್​ ಅಮೆರಿಕದ ಸೌತ್​ ಫ್ಲೋರಿಡಾದಲ್ಲಿರುವ ಬ್ರೊವಾರ್ಡ್​ ಹೆಲ್ತ್​ ಕೋರಲ್​ ಸ್ಪ್ರಿಂಗ್ಸ್​ ಎಂಬ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಈಕೆ ಕೊಟ್ಟಾಯಂನ ವೆಲಿಯನಾಡ್​ ಮೂಲದ ನೆವಿನ್​ನನ್ನು ಮದುವೆಯಾಗಿ ಪತಿಯೊಂದಿಗೆ ಅಮೆರಿಕದಲ್ಲೇ ನೆಲೆಸಿದ್ದಳು.
ಇದನ್ನೂ ಓದಿ:ಕೋವಿಡ್ ಪರೀಕ್ಷೆಗೆಂದು ಬಂದರು.. ಲಕ್ಷಾಂತರ ರೂ.ನಗದು, ಆಭರಣ ದೋಚಿ ಪರಾರಿಯಾದರು
ಇತ್ತೀಚೆಗೆ ದಂಪತಿ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿತ್ತು. ಇದರಿಂದ ಬೇಸರಗೊಂಡಿದ್ದ ಮೆರಿನ್​ ಪತಿಯಿಂದ ದೂರಾಗಿ ಅಮೆರಿಕದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಅಲ್ಲದೆ, ಬ್ರೊವಾರ್ಡ್​ ಹೆಲ್ತ್​ ಕೋರಲ್​ ಸ್ಪ್ರಿಂಗ್ಸ್​ ಆಸ್ಪತ್ರೆಯ ಬದಲು ಬೇರೆ ಆಸ್ಪತ್ರೆಯಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದಳು.
ಆದರೆ, ಕೋವಿಡ್​ ಕೇರ್​ ಕೇಂದ್ರದಲ್ಲಿ ಸೋಮವಾರದ ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ಮಂಗಳವಾರ ಬೆಳಗ್ಗೆ 7.40ರಲ್ಲಿ (ಭಾರತೀಯ ಕಾಲಮಾನ ಸಂಜೆ 5.10) ಆಸ್ಪತ್ರೆಯಿಂದ ಹೊರಬಂದ ಮೆರಿನ್​ಳನ್ನು ರಸ್ತೆಯಲ್ಲೇ ಅಡ್ಡಗಟ್ಟಿದ ನೆವಿನ್​ ಆಕೆಯೊಂದಿಗೆ ಜಗಳ ತೆಗೆದಿದ್ದಾನೆ. ಕೋಪದಲ್ಲಿ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಚೂರಿಯಿಂದ ಹಲವು ಬಾರಿ ಇರಿದಿದ್ದಾನೆ. ಆಕೆ ಕೆಳ ಬೀಳುತ್ತಿದ್ದಂತೆ ಅದೇ ಚೂರಿಯಿಂದ ತನಗೂ ಇರಿದುಕೊಂಡಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಮರಿನ್​ಳನ್ನು ಆಕೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ. ಆದರೆ ಅದೇ ಆಸ್ಪತ್ರೆಗೆ ದಾಖಲಿಸಲಾಗಿದ್ದ ನೆವಿನ್​ ಚೇತರಿಸಿಕೊಳ್ಳುತ್ತಿದ್ದು ಆತನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.
ಕೋವಿಡ್​ ಆಸ್ಪತ್ರೆ ಎದುರಲ್ಲೇ ಒದ್ದಾಡಿ ಪ್ರಾಣಬಿಟ್ಟ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 20 =
Remember me
