ಗೋಪಾಲಗಂಜ್:ಪತಿಯೊಬ್ಬ ಪತ್ನಿಯ ಕುತ್ತಿಗೆಗೆ ನೇಣು ಬಿಗಿದು ಹತ್ಯೆ ಮಾಡಲು ಯತ್ನಿಸಿರುವ ಘಟನೆ ಬಿಹಾರದ ಗೋಪಾಲಗಂಜ್​ನಲ್ಲಿ ನಡೆದಿದೆ.
ವಿವಾಹಿತ ಮಹಿಳೆಯನ್ನು ಸಿವಾನ್ ಜಿಲ್ಲೆಯ ಭಗವಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಘರ್ ಗ್ರಾಮದ ಸಂತು ಪ್ರಸಾದ್ ಅವರ ಪತ್ನಿ ಗುಡ್ಡಿ ದೇವಿ (25) ಎಂದು ಗುರುತಿಸಲಾಗಿದೆ. ವಾಸ್ತವವಾಗಿ, ವಿವಾಹಿತ ಮಹಿಳೆ ಸಂತು ಪ್ರಸಾದ್ ಎಂಬಾತನನ್ನು 2009ರಲ್ಲಿ ಮದುವೆಯಾಗಿದ್ದಳು. ಆ ಬಳಿಕ ಈ ದಂಪತಿಗಳಿಗೆ ಹೆಣ್ಣು ಮಗು ಜನಿಸಿತ್ತು.ಆದರೆ ನಾಲ್ಕು ವರ್ಷಗಳ ಹಿಂದೆ ಅಣ್ಣನ ಪತ್ನಿ ಹಾಗೂ ಸಂತುವಿನ ನಡುವೆ ಅಕ್ರಮ ಸಂಬಂಧ ಏರ್ಪಟ್ಟಿತ್ತು. ಇದು ಗುಡ್ಡಿಗೆ ಗೊತ್ತಾಗಿದ್ದು, ಅತ್ತಿಗೆಯೊಂದಿಗೆ ಪತಿಗೆ ಇರುವ ಸಂಬಂಧದ ಬಗ್ಗೆ ತಿಳಿದು ಆಕೆ ಪ್ರತಿಭಟನೆಗೆ ಮುಂದಾದಳು. ಯಾವಾಗಲೂ ಜಗಳ ನಡೆಯುತ್ತಿತ್ತು. ಈ ನಡುವೆ, ಸಂತು ಆಕೆಯ ಪತ್ನಿಯನ್ನು ಸೈಕಲ್ ಮೇಲೆ ಸವಾರಿ ಹೋಗುವ ನೆಪದಲ್ಲಿ ಕಬ್ಬಿನ ಗದ್ದೆಗೆ ಕರೆದುಕೊಂಡು ಬಂದು ಟವೆಲ್​​ನಿಂದ ನೇಣು ಬಿಗಿದು ಕೊಲ್ಲಲು ಯತ್ನಿಸಿದ್ದು ಆಕೆ ಮೂರ್ಛೆ ಹೋಗಿದ್ದಾಳೆ. ಆಕೆ ಸತ್ತಿದ್ದಾಳೆಂದು ಭಾವಿಸಿದ ಸಂತು ಆಕೆಯನ್ನು ಬಿಟ್ಟು ಓಡಿ ಹೋಗಿದ್ದಾನೆ.ಈ ವೇಳೆ ಆಕೆಯ ತಮ್ಮ ವಿಕ್ಕಿ ತನ್ನ ಅಕ್ಕ ಮನೆಯಲ್ಲಿ ಕಾಣದ ಹಿನ್ನೆಲೆಯಲ್ಲಿ ಹುಡುಕಾಡಿದ್ದು, ಮರದ ಕೆಳಗೆ ಅಕ್ಕನನ್ನು ಕಂಡು ಗಾಬರಿಯಾಗಿ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆಕೆಯ ಚೇತರಿಕೆಗಾಗಿ ಪೊಲೀಸರು ಕಾಯುತ್ತಿದ್ದಾರೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − 8 =
Remember me
