ಮುಂಬೈ:ಮನೆಯಲ್ಲಿದ್ದ ಹಾಲನ್ನೇನಾದರೂ ಮಕ್ಕಳು ಕದ್ದು ಕುಡಿದರೆ ‘ಇಲ್ಲಿದ್ದ ಹಾಲು ಏನು ಬೆಕ್ಕು ಬಂದು ಕುಡಿದು ಹೋಯಿತಾ?’ ಎಂದು ಮಕ್ಕಳನ್ನು ಪರೋಕ್ಷವಾಗಿ ಕೇಳುವುದುಂಟು. ಅಂಥದ್ದೇ ಒಂದು ಪ್ರಯೋಗವನ್ನು ಹೆಂಡತಿ ಮೇಲೆ ಮಾಡಲು ಹೋಗಿ, ಪತ್ನಿಯ ಕೆಂಗಣ್ಣಿಗೆ ಗುರಿಯಾದ ಪತಿ ಮಹಾಶಯನೊಬ್ಬ ಕೊನೆಗೆ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಅಷ್ಟಕ್ಕೂ ಅಂದು ಇವರಿಬ್ಬರ ನಡುವೆ ಗಲಾಟೆ ಶುರುವಾಗಲು ಕಾರಣ ಮೊಸರು. ಪತ್ನಿ ತನ್ನ ತಾಯಿಯ ಮನೆಯಿಂದ ಮೊಸರು ತಂದಿದ್ದಳು, ಬಳಿಕ ಅದನ್ನು ತಿಂದಿದ್ದಳು. ಆದರೆ ನಂತರ ಅಡುಗೆ ಮನೆಗೆ ಹೋಗಿದ್ದ ಗಂಡ ನೇರವಾಗಿ ಹೆಂಡತಿಯನ್ನು ಕೇಳುವ ಬದಲು, ‘ಇಲ್ಲಿದ್ದ ಮೊಸರನ್ನೇನು ಬೆಕ್ಕು ತಿಂದಿತಾ?’ ಎಂದು ವ್ಯಂಗ್ಯವಾಗಿ ಕೇಳಿದ್ದಾನೆ. ಅದರಿಂದ ಹೆಂಡತಿ ಮುನಿಸಿಕೊಂಡು ಕೆಂಗಣ್ಣು ಬೀರಿದ್ದು, ಬಳಿಕ ಇಬ್ಬರ ನಡುವಿನ ವಾಗ್ವಾದ ಗಲಾಟೆಗೆ ತಿರುಗಿ, ನಂತರ ಪತಿ ಆಕೆಗೆ ಚಾಕುವಿನಿಂದ ಇರಿದಿದ್ದ.
ಇದನ್ನೂ ಓದಿ:ಒಬ್ಬನಿಗೆ ಒಂದೇ ಸಲಕ್ಕೆ ಅಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಿಲ್ಲ; ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್​ ಅಭಿಪ್ರಾಯವಿದು…
2019ರ ಸೆಪ್ಟೆಂಬರ್ 9ರಂದು ಮುಂಬೈನ ಅಂಟಾಪ್ ಹಿಲ್ ನಿವಾಸಿ ಸಚಿನ್​ ಮಲೋರ್ ಎಂಬಾತನ ಮನೆಯಲ್ಲಿ ಈ ಗಲಾಟೆ ನಡೆದಿದೆ. ಗಲಾಟೆ ಪ್ರಕರಣ ಬಳಿಕ ಪೊಲೀಸ್ ಕೇಸ್ ಆಗಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಆರೋಪಿ ಸಚಿನ್ ಬಂಧಿತನಾದಾಗಿಂದ ಜೈಲಿನಲ್ಲೇ ಇದ್ದ. ಈ ನಡುವೆ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಬಂದಿದ್ದ ಆರೋಪಿ ಸಚಿನ್, ಹೆಂಡತಿ ಆಯತಪ್ಪಿ ಪಾತ್ರೆಯ ಸ್ಟ್ಯಾಂಡ್​ ಮೇಲೆ ಬಿದ್ದು ಗಾಯಗೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದ. ಆದರೆ ಘಟನೆ ಬಳಿಕ ಧಾವಿಸಿ ಬಂದ ಪ್ರತ್ಯಕ್ಷದರ್ಶಿ, ಸಂತ್ರಸ್ತೆ ಪತ್ನಿ ಸೇರಿ 9 ಸಾಕ್ಷಿಗಳ ಹೇಳಿಕೆಗಳನ್ನು ಪರಿಗಣಿಸಿದ ನ್ಯಾಯಾಲಯ, ಹೆಂಡತಿಯನ್ನು ಬೆಕ್ಕು ಎಂದು ಕರೆದು ಗಲಾಟೆ ಮಾಡಿ ಚಾಕುವಿನಿಂದ ಇರಿದ ಆರೋಪಿ ಸಚಿನ್​ಗೆ 8 ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ.
ಪತಿ ನಿರುದ್ಯೋಗಿ, ಅಲ್ಲದೆ ಮದ್ಯಪಾನ ಮಾಡಿಕೊಂಡು ಬಂದು ಆಗಾಗ ಗಲಾಟೆ ಮಾಡುತ್ತಿರುವುದಾಗಿಯೂ ನ್ಯಾಯಾಲಯದಲ್ಲಿ ಪತ್ನಿ ಹೇಳಿಕೆ ನೀಡಿದ್ದರು. ಆರೋಪಿಯ ಕೃತ್ಯ ಹಾಗೂ ಸಂತ್ರಸ್ತೆಯ ಸಂಕಷ್ಟ ಎರಡನ್ನೂ ಪರಿಗಣಿಸಿ ಈ ಶಿಕ್ಷೆ ನೀಡಲಾಗಿದೆ ಎಂದು ಕೋರ್ಟ್ ತಿಳಿಸಿದೆ.(ಏಜೆನ್ಸೀಸ್)
ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!

ಕೆಟ್ಟಿದ್ದ ಫ್ರಿಡ್ಜ್​ ರಿಪೇರಿಗೆಂದು ಬಂದವ ಮನೆಯೊಡತಿಯನ್ನೇ ಕೆಡಿಸಲು ಯತ್ನಿಸಿದ; ಆಕೆಯ ಪುತ್ರಿಯೊಂದಿಗೂ ಅಸಭ್ಯವಾಗಿ ವರ್ತಿಸಿದ…

8 ವರ್ಷದ ಬಾಲಕಿಯ ಶವ ಪತ್ತೆ: ಕತ್ತು ಸೀಳಲಾಗಿದೆ, ಹಲ್ಲು ಮುರಿಯಲಾಗಿದೆ!; ಅತ್ಯಾಚಾರವೂ ನಡೆದಿತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
