ಅಲಿಗಢ:ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡ… ನಮ್ಮ ಮಕ್ಕಳ ಮುಖವಾದರೂ ನೋಡಿ ನನ್ನೊಂದಿಗೆ ಇರು.. ಪ್ಲೀಸ್​ ಹೋಗಬೇಡ ಹೆಂಡತಿ ಎಂದು ನಡುರಸ್ತೆಯಲ್ಲಿ ಕಾಲು ಹಿಡಿಕೊಂಡು ಎಷ್ಟೇ ಗೋಗರೆದರು ಕರಗದ ಆತನ ಪತ್ನಿ, ಕೊನೆಗೆ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿರುವ ಮನಕಲಕುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.
ವಿವರಣೆಗೆ ಬರುವುದಾದರೆ, ಅಲಿಗಢದ ತಪ್ಪಲ್​ ಪಟ್ಟಣದ ವ್ಯಕ್ತಿ ತಾನಿದ್ದ ಏರಿಯಾದಲ್ಲೇ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದರು. ಇಬ್ಬರ ವೈವಾಹಿಕ ಜೀವನದ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಇಬ್ಬರ ವೈವಾಹಿಕ ಜೀವನ ನಂತರದ ದಿನಗಳಲ್ಲಿ ಕಿತ್ತಾಟಕ್ಕೆ ತಿರುಗಿದೆ. ಹೀಗೆ ಇಬ್ಬರ ನಡುವೆ ಕೊನೆಯಿಲ್ಲದಂತೆ ಜಗಳ ಮುಂದುವರಿಯಲು ಪತಿಯಿಂದ ದೂರಾಗಲು ಮನಸ್ಸು ಮಾಡಿದ ಮಹಿಳೆ ವಿಚ್ಛೇದನಕ್ಕಾಗಿ ಕೋರ್ಟ್​ ಮೆಟ್ಟಿಲು ಸಹ ಏರಿದ್ದಾಳೆ.
ಸದ್ಯ ಪ್ರಕರಣ ಕೋರ್ಟ್​ನಲ್ಲಿದ್ದು, ವಿಚಾರಣೆಗೆಂದು ಮಹಿಳೆ ನಿನ್ನೆ ನ್ಯಾಯಾಲಯಕ್ಕೆ ಹಾಜರಾಗಿದ್ದಳು. ವಿಚಾರಣೆ ಮುಗಿಸಿಕೊಂಡು ಮಹಿಳೆ ಹೊರಬರುತ್ತಿದ್ದಂತೆ ಆಕೆಯ ಪತಿ, ಇದ್ದಕ್ಕಿದ್ದಂತೆ ಪತ್ನಿಯ ಕಾಲು ಹಿಡಿದುಕೊಂಡು ಗೋಗರೆಯಲು ಆರಂಭಿಸಿದ್ದಾನೆ. ಪ್ಲೀಸ್​ ನನ್ನನ್ನು ಬಿಟ್ಟು ಹೋಗಬೇಡ. ನನ್ನ ಜತೆಯಲ್ಲಿಯೇ ಇರು. ಕನಿಷ್ಠ ಪಕ್ಷ ನಮ್ಮ ಮಕ್ಕಳಿಗಾದರೂ ನನ್ನ ಬಿಡಬೇಡ ಎಂದು ಬೇಡಿಕೊಂಡಿದ್ದಾನೆ.
ಇದನ್ನೂ ಓದಿರಿ:ಅಂಬಾನಿಗೆ ಬಾಂಬ್​ ಬೆದರಿಕೆ: ಎಸ್​ಯುವಿ ಕಾರಿನ ನಂಬರ್​ ಪ್ಲೇಟ್, ನಗದು ತುಂಬಿದ್ದ ಮರ್ಸಿಡೀಸ್​ ಕಾರು ಸೀಜ್​
ಹೀಗೆ ಸುಮಾರು ಅರ್ಧ ಗಂಟೆಯವರೆಗೂ ನಡು ರಸ್ತೆಯಲ್ಲೇ ಪತ್ನಿಯ ಕಾಲು ಹಿಡಿದುಕೊಂಡು ಪತಿ ಕಣ್ಣೀರಿಟ್ಟಿದ್ದಾನೆ. ಈ ವೇಳೆ ಸಾಕಷ್ಟು ಮಂದಿ ಪತಿ-ಪತ್ನಿಯ ಕಲಹವನ್ನು ನೋಡುತ್ತಿದ್ದರು. ಆದಾಗ್ಯ ಪತ್ನಿ ಮಾತ್ರ ಪತಿಯ ಮಾತನ್ನು ಕೇಳುವಷ್ಟು ತಾಳ್ಮೆ ಇರಲಿಲ್ಲ. ಯಾವುದೇ ಕಾರಣಕ್ಕೂ ಪತಿ ಮಾತಿಗೆ ಕಟ್ಟುಬೀಳಲು ಆಕೆ ತಯಾರಿರಲಿಲ್ಲ.
ಪತಿ ಎಷ್ಟೇ ಗೋಗರೆದರು ಆತನನ್ನು ಬಿಟ್ಟು ಬೈಕ್​ನಲ್ಲಿ ಬಂದ ಮತ್ತೊಬ್ಬ ವ್ಯಕ್ತಿಯ ಜತೆ ಆಕೆ ಹೊರಟು ಹೋದಳು. ಇತ್ತ ಪತಿಯ ಮುಖದಲ್ಲಿ ನಿರಾಶೆಯ ಕಾರ್ಮೋಡ ಕವಿದಿತ್ತು. ಎಷ್ಟೇ ಗೋಗರೆದರು ಪತಿಯ ಮನಸ್ಸು ಕರಗಲಿಲ್ಲವಲ್ಲಾ ಎಂಬ ದುಃಖದಿಂದಲೇ ಪತಿ ಮನೆಯತ್ತ ಕಣ್ಣೀರಿಡುತ್ತಾ ಹೋಗಿದ್ದು, ಅಲ್ಲಿ ನೆರೆದಿದ್ದವರ ಮನಕಲಕುವಂತಿತ್ತು.(ಏಜೆನ್ಸೀಸ್​)
ತಾಯಿಯ ಕಪಾಳಕ್ಕೆ ಬಾರಿಸಿದ ಮಗ: ಸ್ಥಳದಲ್ಲೇ ಪ್ರಾಣ ಬಿಟ್ಟ ಜನ್ಮದಾತೆ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಬಡ್ಡಿ ಕ್ರೀಡಾಪಟುಗಳಿದ್ದ ಕಾರು ಅಪಘಾತ: ಆಟಗಾರರಿಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

Web Exclusive | 4 ದಶಕದಿಂದ ಈಕೆಗೆ ಠಾಣೆಯೇ ಮನೆ!; ಪೊಲೀಸರೇ ಬಂಧುಗಳು, ಆಧಾರ್ ಕಾರ್ಡಲ್ಲಿ ಠಾಣೆಯೇ ವಿಳಾಸ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − six =
Remember me
