ಲಖನೌ:ಅಕ್ರಮ ಸಂಬಂಧಗಳಿಂದಾಗಿ ಆಗುವ ಅನಾಹುತಗಳ ಬಗ್ಗೆ ಪ್ರತಿನಿತ್ಯ ಹತ್ತಾರು ಸುದ್ದಿಗಳು ಬರುತ್ತಿದ್ದರೂ ಅಂತಹ ತಪ್ಪನ್ನು ಮಾಡುತ್ತಿರುವವರ ಸಂಖ್ಯೆ ಕಡಿಮೆಯಾಗಿಲ್ಲ. ಗಂಡ ಮನೆಯಲ್ಲಿಲ್ಲವೆಂದು ಪ್ರಿಯಕರನನ್ನು ಮನೆಗೇ ಕರೆಸಿಕೊಂಡ ಮಹಿಳೆಯೊಬ್ಬಳಿಂದ ಇದೀಗ ನಾಲ್ಕು ಜನರು ಜೈಲು ಪಾಲಾಗುವಂತಾಗಿದೆ.
ಉತ್ತರ ಪ್ರದೇಶದ ಖಾನ್​ಪುರದ ರಸೂಲಾಬಾದ್ ಕೊಟ್ವಾಲಿ ಪ್ರದೇಶದ ನರ್ ಖಾಸ್ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ರಾಮ್​ಬಾಬು ಹೆಸರಿನ ವ್ಯಕ್ತಿಯ ಹೆಂಡತಿ ಬದನ್​ಸಿಂಗ್​ ಹೆಸರಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ಒಂದು ದಿನ ರಾಮ್​ಬಾಬು ಕೆಲಸದ ನಿಮಿತ್ತ ಹೊರ ಊರಿಗೆ ಹೋಗಿದ್ದಾನೆ. ರಾತ್ರಿ ಮನೆಗೆ ಆತ ಮರಳುವುದಿಲ್ಲ ಎಂದು ತಿಳಿದ ಆತನ ಪತ್ನಿ ಬದನ್​ಸಿಂಗ್​ಗೆ ಕರೆ ಮಾಡಿ ರಾತ್ರಿ ಮನೆಗೆ ಬರಲು ಹೇಳಿದ್ದಾಳೆ. ಅದರಂತೆ ಆತ ಮನೆಗೆ ಬಂದಿದ್ದು, ಇಬ್ಬರು ತಮ್ಮದೇ ಲೋಕದಲ್ಲಿ ಮೈ ಮರೆತಿದ್ದಾರೆ.
ಆದರೆ ಕೆಲಸಕ್ಕೆ ಹೋಗಿದ್ದ ರಾಮ್​ ಬಾಬು ರಾತ್ರಿಯೇ ಮನೆಗೆ ವಾಪಾಸಗಿದ್ದಾನೆ. ಆಗ ಹೆಂಡತಿ ಬೇರೊಬ್ಬ ಗಂಡಸಿನೊಂದಿಗಿರುವುದನ್ನು ಕಂಡು ಸಿಟ್ಟಿಗೆದ್ದು ಮಾಡಬಾರದ ನಿರ್ಧಾರ ಮಾಡಿಬಿಟ್ಟಿದ್ದಾನೆ. ತಮ್ಮ ಶ್ಯಾಮ್​ಬಾಬು ಜತೆ ಸೇರಿ ಬದನ್​ ಸಿಂಗ್​ನ ತಲೆಗೆ ಇಟ್ಟಿಗೆಯಿಂದ ಬಲವಾಗಿ ಕುಟ್ಟಿ ಕೊಲೆ ಮಾಡಿದ್ದಾರೆ. ಆತ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಈ ವಿಚಾರ ಪೊಲೀಸರಿಗೆ ತಲುಪಿದ್ದು, ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

1.1 ಲಕ್ಷ ರೂಪಾಯಿಯ ಆ್ಯಪಲ್​ ಐಫೋನ್​ ಆರ್ಡರ್​ ಮಾಡಿದವಳಿಗೆ ಬಂದಿದ್ದು ಆ್ಯಪಲ್​ ಜ್ಯೂಸ್​!

ವಿದ್ಯಾರ್ಥಿನಿಯೊಂದಿಗೆ ಪುಶ್​ಅಪ್​ ಚಾಲೆಂಜ್​ನಲ್ಲಿ ರಾಹುಲ್​ ಗಾಂಧಿ! ಫಿಟ್​ ರಾಹುಲ್​ ಅದೆಷ್ಟು ಫಾಸ್ಟ್​ ಆಗಿದ್ದಾರೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 14 =
Remember me
