ಜೋಧ್​ಪುರ:ಮಾಹಿತಿ ಹಕ್ಕು ಕಾನೂನು (ಆರ್​ಟಿಐ) ಅನ್ವಯ ಪತಿಯ ಒಟ್ಟು ವೇತನ ಬಗ್ಗೆ ತಿಳಿಯುವ ಹಕ್ಕು ಪತ್ನಿಗೆ ಇದೆ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಮಹತ್ವದ ತೀರ್ಪು ನೀಡಿದೆ.
ಪತಿಯ ಒಟ್ಟು ಹಾಗೂ ತೆರಿಗೆ ಕಟ್ಟಬೇಕಾದ ಆದಾಯದ ಮಾಹಿತಿ ನೀಡುವಂತೆ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ತೆರಿಗೆ ಇಲಾಖೆ ನಿರಾಕರಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಿಐಸಿ, ದೂರುದಾರ ಮಹಿಳೆಗೆ ಆದೇಶದ 15 ದಿನದೊಳಗೆ ಮಾಹಿತಿ ನೀಡುವಂತೆ ಐಟಿ ಇಲಾಖೆಯ ಜೋಧ್​ಪುರ ಕಚೇರಿಗೆ ನಿರ್ದೇಶಿಸಿದೆ. ಇಂಥ ಮಾಹಿತಿಯು ಮೂರನೇ ವ್ಯಕ್ತಿಗೆ ಸಂಬಂಧಿಸಿದ್ದಾಗಿದ್ದು ಆರ್​ಟಿಐ ಕಾನೂನಿನ ಮಾಹಿತಿ ವ್ಯಾಖ್ಯಾದಡಿ ಅದು ಬರುವುದಿಲ್ಲ ಎಂಬ ಐಟಿ ಇಲಾಖೆ ವಾದವನ್ನು ಸಿಐಸಿ ತಳ್ಳಿ ಹಾಕಿದೆ.
ಇದನ್ನೂ ಓದಿ:ಗಲಭೆ ಕೇಸ್ ಸಂಬಂಧ ಎಸ್‌ಡಿಪಿಐ,ಪಿಎ್ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ
ಐಟಿ ಇಲಾಖೆಯ ನಿರಾಕರಣೆ ವಿರುದ್ಧ ಜೋಧ್​ಪುರದ ರಹಮತ್ ಬಾನೊ ಎಂಬುವವರು ಸಿಐಸಿಗೆ ದೂರು ಸಲ್ಲಿಸಿದ್ದರು. ‘ಮಾಹಿತಿ ವೈಯಕ್ತಿಕವಾದುದು ಎಂದು ಹೇಳಿ ರಹಮತ್ ಬಾನೊ ಅವರ ಪತಿ ವೇತನದ ಮಾಹಿತಿ ನೀಡಲು ನಿರಾಕರಿಸಿದ್ದರು’ ಎಂದು ಬಾನೊ ಅವರ ವಕೀಲ ರಜಾಕ್ ಹೈದರ್ ಹೇಳಿದ್ದಾರೆ.
ಇನ್ಮೇಲೆ ಪ್ರತಿ ತಿಂಗಳೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಅಮಿತ್​ ಷಾ, ಜೆ.ಪಿ.ನಡ್ಡಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + thirteen =
Remember me
