ಹೈದರಾಬಾದ್​:ಹೆಚ್ಚಿನ ಕಂಪನಿ ಮಾಲೀಕರು ಕೆಲವು ಹಬ್ಬದ ಸಮಯದಲ್ಲಿ ಉದ್ಯೋಗಿಗಳಿಗೆ ಬೋನಸ್ ಘೋಷಿಸುತ್ತಾರೆ. ಇನ್ನು ಕೆಲವು ಸಂಸ್ಥೆಗಳು ಹಬ್ಬ ಹರಿದಿನಗಳಿಗೆ ಉಡುಗೊರೆ ನೀಡಿ ಉದ್ಯೋಗಿಗಳನ್ನು ಸಂತಸಪಡಿಸುತ್ತಾರೆ. ಈ ಮೂಲಕ ಲಾಭದಲ್ಲಿ ಉದ್ಯೋಗಿಗಳಿಗೂ ಪಾಲು ನೀಡಲಾಗುತ್ತದೆ.
ಇದೀಗ ಸಂಕ್ರಾಂತಿ ಹಿನ್ನೆಲೆಯಲ್ಲಿ ಹೈದರಾಬಾದ್​ ಮೂಲದ ಕಂಪನಿಯೊಂದು ತಮ್ಮ ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಹುಬ್ಬೇರಿಸಿದೆ. ಈ ಮುಂಚಿನಿಂದಲೂ ಸೂರತ್‌ನಲ್ಲಿರುವ ವಜ್ರದ ವ್ಯಾಪಾರಿಗಳು ತಮ್ಮ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ಇದೀಗ ಆ ಟ್ರೆಂಡ್​ ಹೈದರಾಬಾದ್​ಗೂ ಹರಡಿದೆ.
ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಸಂಪಂಗಿ ಗ್ರೂಪ್ ಕಂಪನಿಯು ಸಂಕ್ರಾಂತಿಯ ಸಂದರ್ಭದಲ್ಲಿ ತನ್ನ ಉದ್ಯೋಗಿಗಳಿಗೆ ಆಕರ್ಷಕ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಆಯ್ದ ಹತ್ತು ಉದ್ಯೋಗಿಗಳಿಗೆ ಕಾರಿನ ಕೀ ನೀಡಿ ಅಚ್ಚರಿಯ ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದರು.
ಅಧ್ಯಕ್ಷ ರಮೇಶ ಸಂಪಂಗಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಸಂಸ್ಥೆಯ ಭಾಗವಾಗಿರುವ ಪ್ರತಿಯೊಬ್ಬರಿಗೂ ದೀರ್ಘಾವಧಿಯ ಆರೋಗ್ಯ ಪ್ರಯೋಜನಗಳು ದೊರೆಯಬೇಕೆಂಬುದು ನನ್ನ ಆಶಯವಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಕುಡಿಬೇಡ ಅಂದಿದ್ದೆ ತಪ್ಪಾ? 8 ತಿಂಗಳ ಗರ್ಭಿಣಿ ಅಂತಾನೂ ನೋಡದೆ ಬೈಕ್​ಗೆ ಕಟ್ಟಿ ಪತ್ನಿಯನ್ನು ಎಳೆದೊಯ್ದ ಪತಿ

ಟ್ಯಾಟೂಗೆ Irreplaceable ಪದ ಆರಿಸಿಕೊಂಡಿದ್ದೇಕೆ? ರಶ್ಮಿಕಾ ಕೊಟ್ಟ ಕುತೂಹಲಕಾರಿ ಉತ್ತರ ಹೀಗಿತ್ತು…

ನರೇಶ್​-ಪವಿತ್ರಾ ಲೋಕೇಶ್​ ಮದುವೆ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಟಾಲಿವುಡ್​ನ ಹಿರಿಯ ನಿರ್ಮಾಪಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 5 =
Remember me
