ಹೈದರಾಬಾದ್​:ಕುಡಿಯುವ ನೀರನ್ನು ಕಲುಷಿತಗೊಳಿಸಿದ ಆರೋಪದ ಮೇಲೆ ನೀರಿನ ಟ್ಯಾಂಕರ್​ ಚಾಲಕನ ವಿರುದ್ಧ ಹೈದರಾಬಾದ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕುಡಿಯುವ ಉದ್ದೇಶಕ್ಕಾಗಿ ಟ್ಯಾಂಕರ್​ಗೆ ತುಂಬುತ್ತಿದ್ದ ನೀರಿನಲ್ಲೇ ಕಾಲು ತೊಳೆದ ಚಾಲಕನ ವಿಡಿಯೋ ವೈರಲ್​ ಆದ ಬೆನ್ನಲ್ಲೇ ದೂರು ದಾಖಲಿಸಲಾಗಿದೆ. ಘಟನೆಯು ಗುರುವಾರ ಹೈದರಾಬಾದ್​ನ ಮೂಸ್​ಪೇಟ್ ನೀರು ತುಂಬು ಕೇಂದ್ರದಲ್ಲಿ ನಡೆದಿದೆ. ಈ ಏರಿಯಾ ಕುಕಟಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ.
ಇದನ್ನೂ ಓದಿ:21ಸಾವಿರವನ್ನೂ ಮೀರಿತು ರಾಜ್ಯದ ಕರೊನಾ ಸೋಂಕಿತರ ಸಂಖ್ಯೆ; ಬೆಂಗಳೂರಲ್ಲಿ ಇಂದು ಸಾವಿರಕ್ಕೂ ಹೆಚ್ಚು ಕೇಸ್​
ವಿಡಿಯೋದಲ್ಲಿ ಏನಿದೆ?:ನೀರು ತುಂಬುವ ಕೇಂದ್ರದ ಮುಂದೆ ಟ್ಯಾಂಕರ್​ ನಿಲ್ಲಿಸಿ, ಅದಕ್ಕೆ ಪೈಪ್​ ಮೂಲಕ ಕುಡಿಯುವ ನೀರನ್ನು ಭರ್ತಿ ಮಾಡಲಾಗುತ್ತಿರುತ್ತದೆ. ಈ ವೇಳೆ ಟ್ಯಾಂಕರ್​ ಚಾಲಕ ತನ್ನ ಬಲಗಾಲನ್ನು ಮೇಲಕ್ಕೆ ಎತ್ತಿ ತನ್ನ ಪಾದಗಳನ್ನು ನೀರಿನಿಂದ ತೊಳೆದುಕೊಳ್ಳುತ್ತಾನೆ.
Kukatpally police filed a case against a man working with HMWSSB after he was caught contaminating drinking by washing his feet. The offender is absconding. The incident took place at Moosapet water station on Thursday.pic.twitter.com/dMNeGQkGyl
— Bala (@Bala__G)July 4, 2020

ಇದೀಗ ವಿಡಿಯೋ ವೈರಲ್​ ಆಗಿದ್ದು, ಕುಡಿಯುವ ಉದ್ದೇಶಕ್ಕಾಗಿ ಎಂದು ಗೊತ್ತಿದ್ದರೂ ಕಾಲು ತೊಳೆದ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಚಾಲಕನನ್ನು ವಿಜಯ್​ ಎಂದು ಗುರುತಿಸಲಾಗಿದೆ. ಆತ ಗುತ್ತಿಗೆ ನೌಕರನಾಗಿದ್ದು, ಹೈದರಾಬಾದ್​ ಮೆಟ್ರೋಪಾಲಿಟನ್​ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಎಚ್​ಎಂಡಬ್ಲ್ಯುಎಸ್​ಎಸ್​​ಬಿ) ಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಇದನ್ನೂ ಓದಿ:ಆತ್ಮಹತ್ಯೆಗೆ ಶರಣಾದ ಯುವತಿಯ ಡೆತ್​ನೋಟ್​ನಲ್ಲಿತ್ತು ಪ್ರಿಯಕರನ ಹೆಸರು
ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಚ್​ಎಂಡಬ್ಲ್ಯುಎಸ್​ಎಸ್​​ಬಿ, ಚಾಲಕ ವಿಜಯ್​ ಖಾಸಗಿ ನೀರಿನ ಟ್ಯಾಂಕರ್​ಗೆ ನೀರು ತುಂಬುತ್ತಿದ್ದ. ಆ ವಾಹನ ನಮ್ಮ ಇಲಾಖೆ ಸೇರಿದ್ದಲ್ಲ ಎಂದು ಹೇಳಿದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್​ಎಂಡಬ್ಲ್ಯುಎಸ್​ಎಸ್​​ಬಿ ಮ್ಯಾನೇಜರ್​ ಶ್ರೀನಿವಾಸ್​ ರಾವ್​ ಕುಕಟಪಲ್ಲಿ ಪೊಲೀಸ್​ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ. ವಿಡಿಯೋ ಪರಿಶೀಲಿಸಿದ ಬಳಿಕ ವಿಜಯ್​ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 270 (ಜೀವಕ್ಕೆ ಅಪಾಯಕಾರಿಯಾದ ಸೋಂಕು ಹರಡಿಸುವ ರೀತಿಯ ಅಪಾಯಕಾರಿ ವರ್ತನೆ) ಮತ್ತು 427 (ಕಿಡಿಗೇಡಿತನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸುವ ಕೆಲಸ ಪ್ರಗತಿಯಲ್ಲಿದ್ದು, ಆದಷ್ಟು ಬೇಗ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
ಪೊಲೀಸ್​ ಠಾಣೆಗೇ ‘ಬೇಡಿ’ ಹಾಕಿದ್ರು! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
