ನವದೆಹಲಿ:ಹೈದರಾಬಾದ್​ ಮೂಲದ ಉದ್ಯಮಿ ನಾಸೀರ್​ ಖಾನ್​ (Businessman Naseer Khan) ಎಂಬುವರು ಭಾರತದ ಅತ್ಯಂತ ದುಬಾರಿ ಕಾರನ್ನು (India’s most expensive supercar) ಖರೀದಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಮೆಕ್ಲಾರೆನ್​ 765 ಎಲ್​ಟಿ ಸ್ಪೈಡರ್ (McLaren 765 LT Spider)​ ಹೆಸರಿನ ಕಾರು ಭಾರತದ ದುಬಾರಿ ಕಾರು ಎಂಬುದು ಅಧಿಕೃತವಾಗಿದೆ. ಇದರ ಬೆಲೆ ಬರೋಬ್ಬರಿ 12 ಕೋಟಿ ರೂಪಾಯಿ. ಇತ್ತೀಚೆಗಷ್ಟೇ ಹೈದರಾಬಾದ್​ನ ತಾಜ್​ ಫಲಕ್ನುಮಾ ಪ್ಯಾಲೇಸ್​ನಲ್ಲಿ ಕಾರನ್ನು ಉದ್ಯಮಿಗೆ ಡೆಲಿವರಿ ಮಾಡಲಾಯಿತು.
ನಾಸೀರ್ ಖಾನ್ ಅವರು ಮೆಕ್ಲಾರೆನ್ 765 ಎಲ್​ಟಿ ಸ್ಪೈಡರ್‌ ಮೇಲೆ ಸುಮಾರು 12 ಕೋಟಿ ರೂಪಾಯಿಗಳನ್ನು ಚೆಲ್ಲಿದ್ದು, ಇದು ಭಾರತದಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರುವ ಅತ್ಯಂತ ದುಬಾರಿ ಸೂಪರ್‌ಕಾರ್‌ಗಳಲ್ಲಿ ಒಂದಾಗಿದೆ. ಬಹುಶಃ ಭಾರತದಲ್ಲಿ 765 ಎಲ್​ಟಿ ಸ್ಪೈಡರ್‌ ಖರೀದಿ ಮಾಡಿದ ಮೊದಲ ಗ್ರಾಹಕರಾಗಿದ್ದಾರೆ.
ಕಾರು ಆಗಮಿಸಿದ ಖುಷಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್​ ಮಾಡಿರುವ ನಾಸೀರ್​ ಖಾನ್​, ಮೆಕ್ಲಾರೆನ್​ 765 ಎಲ್​ಟಿ ಸ್ಪೈಡರ್​ಗೆ ನಮ್ಮ ಮನೆಗೆ ಸುಸ್ವಾಗತ. ಯಾವುದೇ ಕನಸು ಸಾಕಷ್ಟು ದೊಡ್ಡದೇನಲ್ಲ, ಹೀಗಾಗಿ ಯಾವಾಗಲೂ ನಿಮ್ಮ ಮಿತಿಗಳನ್ನು ಮುಂದಕ್ಕೆ ತಳ್ಳಿರಿ ಎಂದು ಇನ್​ಸ್ಟಾಗ್ರಾಂನಲ್ಲಿ ಕಾರಿನ ಫೋಟೋ ಜೊತೆಗೆ ತಮ್ಮ ಸಂತಸವನ್ನು ನಾಸೀರ್​ ಹಂಚಿಕೊಂಡಿದ್ದಾರೆ.
ಅಂದಹಾಗೆ ನಾಸೀರ್​ ಅವರು ಕಾರುಗಳ ಮೇಲಿನ ಕ್ರೇಜ್​ ಜಾಸ್ತಿ ಇದೆ. ಈಗಾಗಲೇ ಅವರ ಬಳಿ ಫೆರಾರಿ 812 ಸೂಪರ್​ಫಾಸ್ಟ್​, ಲ್ಯಾಂಬೋರ್ಗಿನಿ ಅವೆಂಟಡಾರ್​, ಮರ್ಸಿಡೀಸ್​ ಬೆಂಜ್​ ಜಿ350ಡಿ, ರೋಲ್ಸ್​ ರಾಯ್ಸ್​ ಕುಲ್ಲಿನಾನ್​ ಬ್ಲ್ಯಾಕ್​ ಬ್ಯಾಡ್ಜ್​, ಫೋರ್ಡ್​ ಮುಸ್ತಾಂಗ್​ ಮತ್ತು ಲ್ಯಾಂಬೋರ್ಗಿನಿ ಉರುಸ್​ ಸೇರಿದಂತೆ ಅನೇಕ ದುಬಾರಿ ಕಾರುಗಳಿಗೆ ಮಾಲೀಕರಾಗಿದ್ದಾರೆ.(ಏಜೆನ್ಸೀಸ್​)
A post shared by NASEER KHAN (@naseer_khan0054)

ಬ್ರಿಟನ್​ನಲ್ಲಿ ಕೇರಳ ಮೂಲದ ನರ್ಸ್, ಆಕೆಯ ಮಕ್ಕಳಿಬ್ಬರ ದುರಂತ ಸಾವು: ಪತಿಯನ್ನು ವಶಕ್ಕೆ ಪಡೆದ ಪೊಲೀಸರು

ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮನಿಗೆ ಗುಂಡೇಟು: ಅರೋಪಿ ಬಂಧನ

15 ರನ್​ಗೆ ಆಲೌಟ್: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
