ಹೈದರಾಬಾದ್​:ಸೆಪ್ಟೆಂಬರ್​ 12ರಂದು ಹೈದರಾಬಾದಿನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ ಸೆರಿಲಿಂಗಂಪಲ್ಲಿ ಕಾರ್ಪೋರೇಟರ್​ ಆರ್​. ನಾಗೇಂದರ್​ ಯಾದವ್​ರನ್ನು ಸೈಬರಬಾದ್ ಪೊಲೀಸರು ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಬಂಧಿಸಿದ್ದಾರೆ. ​ ​
53 ವರ್ಷದ ಕಾರ್ಪೋರೇಟರ್​ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಪಕ್ಷಕ್ಕೆ ಸೇರಿದವರು. ಇನ್ನು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತಿ ಸೆಕ್ಷನ್​ 506ರ ಅಡಿಯಲ್ಲಿ ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್​ 19ರಂದು ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕಾಗಿ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಘಟನೆ ಹಿನ್ನೆಲೆ ಏನು?ಸಂತ್ರಸ್ತೆ ಮಹಿಳೆ ಮತ್ತು ಆಕೆಯ ಸಹೋದರಿ ಸೆಪ್ಟೆಂಬರ್​ 14ರಂದು ಹಲ್ಲೆ ಕುರಿತಾದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದರು. ವಿಡಿಯೋ ವೈರಲ್​ ಆಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ತಮ್ಮ ಮನೆಯ ದಾರಿಯಲ್ಲಿ ಅಡ್ಡಲಾಗಿ ನಿಂತಿದ್ದ ಕಾರನ್ನು ತೆಗೆಯುವಂತೆ ಮಹಿಳೆಯು ಕಾರ್ಪೋರೇಟರ್​ನನ್ನು ಕೇಳಿದ ಬಳಿಕ ಇಬ್ಬರ ನಡುವೆ ವಾಗ್ವಾದ ಆರಂಭವಾಗಿತ್ತು. ಬಳಿಕ ಆತ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆ ನಲ್ಲಗಂಡ್ಲದ ಲಕ್ಷ್ಮೀ ವಿಹಾರದಲ್ಲಿ ನಡೆದಿದೆ.
RAGAM NAGENDER YADAV – TRS Corporator Serilingampally Division ASSAULTED MY SISTER IN FRONT OUR OWN HOUSE plz follow the thread@KTRTRS@kcrunofficial@TelanganaCMO@MinisterKTR@TelanganaDGP@TelanganaToday@NtvTeluguLive@TV9Telugu@TV9Telangana@ts_womensafety@SwatiLakra_IPSpic.twitter.com/B1hX7USUh3
— Ipsita Kurikala (@ikurikala)September 12, 2020

ಇದನ್ನೂ ಓದಿ:ನರ್ವಸ್ ಆಗಿದ್ದರೂ ಐಪಿಎಲ್‌ಗೆ ಭರ್ಜರಿ ಎಂಟ್ರಿ ಕೊಟ್ಟ ದೇವದತ್ ಪಡಿಕಲ್; ಗಂಗೂಲಿ ಮೆಚ್ಚುಗೆ
ಇನ್ನು ತಮಗಾದ ನೋವನ್ನು ಮಹಿಳೆಯು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಾವು ರಾತ್ರಿ 10 ಗಂಟೆಗೆ ಮನೆಗೆ ಮರಳಿದೆವು. ಈ ವೇಳೆ ನಾಗೇಂದರ್​ ಯಾದವ್​ ಕಾರು ನಮ್ಮ ದಾರಿಗೆ ಅಡ್ಡಲಾಗಿತ್ತು. ನಮ್ಮ ಕಾರನ್ನು ತಿರುವು ತೆಗೆದುಕೊಳ್ಳು ಆಗುತ್ತಿರಲಿಲ್ಲ. ಈ ವೇಳೆ ಕಾರು ತೆಗೆಯಿರಿ ಎಂದು ಕೇಳಿದೆವು. ಆದರೆ, ಕಿವಿಗೊಡಲಿಲ್ಲ. ಸಾಕಷ್ಟು ವಾಗ್ವಾದದ ಬಳಿಕ ಸುಮಾರು 20 ನಿಮಿಷ ನಾನು ಕಾರಿನಲ್ಲೇ ಉಳಿದಿದ್ದೆ. ಕೊನೆಗೂ ಕಾರನ್ನು ತೆರವುಗೊಳಿಸಿದರು. ಆದರೆ, ಆತ ನಾಗರಿಕನಾಗಿರಲಿಲ್ಲ. ಕೊನೆಯಲ್ಲಿ ನನ್ನ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ. ನಾನು ಸೇಫ್​ ಅಲ್ಲ ಎಂಬ ಭಾವನೆ ಮೂಡಿತು. ತಕ್ಷಣ ಮನೆಯೊಳಗೆ ಓಡಿದೆ ಎಂದು ಬರೆದುಕೊಂಡಿದ್ದಾರೆ.
ಹಲ್ಲೆ ಮಾಡಿದ್ದಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದರು. ಯಾವುದೇ ಕಾರಣವಿಲ್ಲದೇ ನಮ್ಮನ್ನು ಅವಮಾನಿಸಿದರು ಎಂದು ಸಂತ್ರಸ್ತೆ ಮಹಿಳೆ ಹೇಳಿಕೊಂಡಿದ್ದಾಳೆ. ಬಳಿಕ ಸಮೀಪದ ಠಾಣೆಗೆ ಸಹೋದರಿ ಜತೆ ತೆರಳಿ ನೀಡಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
ಅತಿಥಿ ಉಪನ್ಯಾಸಕರಿಗೆ ಗುಡ್​ ನ್ಯೂಸ್ ಕೊಟ್ಟ ಸಿಎಂ ಯಡಿಯೂರಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
