ಹೈದರಾಬಾದ್​:ಸಾಮಾಜಿಕ ಜಾಲತಾಣ ಬಳಸುವವರು ಅದರಲ್ಲೂ ಮಹಿಳೆಯರು ಒಂದೊಂದು ಹೆಜ್ಜೆಯನ್ನು ತುಂಬಾ ಹುಷಾರಾಗಿ ಇಡಬೇಕು. ಯಾವುದನ್ನು ಸತ್ಯ ಎಂದು ನಂಬುತ್ತೇವೆಯೋ ಅದರ ಹಿಂದೆ ಕರಾಳ ಮುಖವೂ ಅಡಗಿರುತ್ತದೆ. ಸ್ವಲ್ಪ ಯಾಮಾರಿದರೆ ಜೀವನವೇ ನರಕವಾಗಿಬಿಡುತ್ತದೆ. ಸೌಂದರ್ಯ ಸೋಗಿನಲ್ಲಿ ವೇಷ ಮರೆಸಿಕೊಂಡು ವಂಚಿಸುವ ವಂಚಕರ ಜಾಲ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದೆ. ಹೀಗಾಗಿ ತುಂಬಾ ಎಚ್ಚರಿಕೆ ವಹಿಸಿ, ಇಲ್ಲವಾದಲ್ಲಿ ಏನಾಗುತ್ತದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾದ ಇಬ್ಬರು ಹುಡುಗಿಯರನ್ನು ಮೇಲೆ ಯುವಕರಿಬ್ಬರು ದಾಳಿ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಸಂತ್ರಸ್ತ ಯುವತಿಯರಿಗೆ ಆರೋಪಿಗಳಿಬ್ಬರು ಫೇಸ್​ಬುಕ್​ನಲ್ಲಿ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸಿದ್ದರು. ಅದನ್ನು ಯುವತಿಯರು ಅನುಮತಿಸಿದ್ದರು. ಬಳಿಕ ಕೆಲವು ಸಮಯದವರೆಗೆ ಅವರುಗಳ ನಡುವೆ ಚಾಟಿಂಗ್​ ಮುಂದುವರಿದಿತ್ತು. ಕೆಲವು ದಿನಗಳ ಬಳಿಕ ವಿಡಿಯೋ ಕಾಲ್​ ಮೂಲಕ ಮಾತನಾಡಲು ಆರಂಭಿಸಿದರು. ಇದನ್ನು ವಿಡಿಯೋ ರೆಕಾರ್ಡ್​ ಮಾಡಿಟ್ಟುಕೊಂಡ ದುಷ್ಕರ್ಮಿಗಳು, ವಿಡಿಯೋವನ್ನು ಅಶ್ಲೀಲವಾಗಿ ತಿರುಚಿ, ಯುವತಿಯರಿಗೆ ಕಳಹಿಸಿ, ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾರೆ. ಈ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದ್ದು, ಆರೋಪಿಗಳಿಬ್ಬರು ಬಂಧಿಸಲಾಗಿದೆ.
ಈ ಘಟನೆ ಸಂಬಂಧ ಶನಿವಾರ ಬಂಜಾರ ಹಿಲ್ಸ್​ ಪೊಲೀಸ್​ ಕಮಾಂಡ್​ ಕಂಟ್ರೋಲ್​ ಸೆಂಟರ್​ನಲ್ಲಿ ಮಾಧ್ಯಮದವರಿಗೆ ಪೊಲೀಸ್​ ಆಯುಕ್ತ ಸಂದೀಪ್​ ಸಂದಿಲ್ಯಾ ಮಾಹಿತಿ ನೀಡಿದರು. ಈ ಘಟನೆಯ ಸಂತ್ರಸ್ತೆಯಲ್ಲಿ ಒಬ್ಬರು ತುಂಬಾ ಖಿನ್ನತೆಗೆ ಜಾರಿದ್ದಳು. ಪರೀಕ್ಷೆಯನ್ನು ಬರೆಯಲು ಹೋಗದೆ, ಮನೆಯಲ್ಲೇ ಮೌನವಾಗಿ, ಒಬ್ಬಂಟಿಯಾಗಿ ಉಳಿದಿದ್ದಳು. ಇದನ್ನು ಗಮನಿಸಿದ ಆಕೆಯ ತಾಯಿ, ಏನಾಯಿತು ಎಂದು ಕೇಳಿದಾಗ ನಡೆದ ಎಲ್ಲ ಘಟನೆಯನ್ನು ಸಂತ್ರಸ್ತೆ ವಿವರಿಸಿದಳು ಎಂದು ಸಂದೀಪ್​ ಸಂದಿಲ್ಯಾ ಹೇಳಿದರು.
ಮಗಳು ತನಗಾದ ಅನ್ಯಾಯವನ್ನು ಬಹಿರಂಗಪಡಿಸಿದ ಬೆನ್ನಲ್ಲೇ ತಾಯಿ ಸಮೀಪದ ಠಾಣೆಗೆ ತೆರಳಿ ದೂರು ದಾಖಲಿಸಿದರು. ಇನ್ನೊಂದೆಡೆ ಮತ್ತೊಬ್ಬ ಸಂತ್ರಸ್ತೆ ಸಹ ದೂರು ದಾಖಲಿಸಿದರು. ಪ್ರಕರಣ ದಾಖಲಿಸಿಕೊಂಡು ಅಖಾಡಕ್ಕೆ ಇಳಿದು ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.(ಏಜೆನ್ಸೀಸ್​)
ಮತ್ತೊಂದು ಅಗ್ನಿ ಅವಘಡ; ಮಧ್ಯರಾತ್ರಿ ಬೆಂಗಳೂರಿನಲ್ಲಿ ಧಗಧಗನೇ ಹೊತ್ತಿ ಉರಿದ 4 ಅಂತಸ್ತಿನ ಕಟ್ಟಡ

VIDEO| ರೋಹಿತ್ ಶರ್ಮ​ ಬೌಲಿಂಗ್​ ಸ್ಟೈಲ್​ಗೆ ಪತ್ನಿ ಕ್ಲೀನ್​ ಬೋಲ್ಡ್​! ವೈರಲ್​ ಆಯ್ತು ರಿತಿಕಾ ರಿಯಾಕ್ಷನ್​

15ರಂದು ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ: 16ರಂದು ಕಾರ್ಯಕರ್ತರ ಸಮಾವೇಶ; 17ಕ್ಕೆ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − four =
Remember me
