ಹೈದರಾಬಾದ್​:ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಎಲ್ಲರೂ ಹುಬ್ಬೇರಿಸುವಂತಹ ಘಟನೆಯೊಂದು ನಡೆದಿದೆ. ಒಂದು ರೀತಿಯಲ್ಲಿ ಪವಾಡ ಎಂದೇ ಹೇಳಬಹುದು. ಗಣಪತಿ ಮೂರ್ತಿಗೆ ಅರ್ಪಿಸಿದ್ದ 11 ಕೆಜಿ ಗಾತ್ರದ ಲಡ್ಡು, ಕಣ್ಣು ಮಿಟುಕಿಸುವಷ್ಟರಲ್ಲಿ ಮಾಯವಾಗಿದೆ.
ಈ ಅಪರೂಪದ ವಿದ್ಯಾಮಾನ ಸೆ.20ರಂದು ಹೈದರಾಬಾದ್​ನ ಮಿಯಾಪುರ್​ ಏರಿಯಾದಲ್ಲಿ ಬೆಳಗ್ಗೆ 4.15ರ ವೇಳೆಗೆ ನಡೆದಿದೆ. ಓಂಕಾರ ಸೇವಾ ಸಮಿತಿಯು ಮದಿನಾಗುಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಣಪತಿ ಉತ್ಸವನ್ನು ಅದ್ಧೂರಿಯಾಗಿ ಆಚರಿಸತು. ಈ ವೇಳೆ ಗಣೇಶನ ಮೂರ್ತಿಗೆ 11 ಕೆಜಿ ಗಾತ್ರದ ಲಾಡು ಪ್ರಸಾದವನ್ನು ಅರ್ಪಿಸಲಾಯಿತು. ಭಕ್ತರಿಂದ ದೇವರ ದರ್ಶನ ಮುಗಿದ ಬಳಿಕ ಗಣಪರಿ ಪೆಂಡಾಲ್​ನಲ್ಲಿ ಭದ್ರತೆಗೆಂದು ಸಮಿತಿ ವತಿಯಿಂದ ಇಬ್ಬರನ್ನು ನಿಯೋಜಿಸಲಾಗಿತ್ತು.
ಇಬ್ಬರನ್ನು ಭದ್ರತೆಗೆ ನಿಯೋಜಿಸಿದ್ದರೂ ಅವರು ಕಣ್ಣು ಮಿಟುಕಿಸುವಸ್ಟರಲ್ಲಿ ಬೆಲೆಬಾಳುವ ಲಡ್ಡುವು ಗಣೇಶನ ಮುಂದೆ ಅದರ ಪವಿತ್ರ ಸ್ಥಾನದಿಂದ ಕಣ್ಮರೆಯಾಯಿತು. ಈ ವಿಚಾರ ಗೊತ್ತಾಗಿ ಸ್ಥಳದಲ್ಲಿ ಕೋಲಾಹಲವೇ ಭುಗಿಲೆದ್ದಿತು ಮತ್ತು ಭಕ್ತರು ಉತ್ತರಗಳನ್ನು ಹುಡುಕುತ್ತಾ ಅಲೆದಾಡುತ್ತಿರುವಾಗ, ಓರ್ವ ವ್ಯಕ್ತಿ ಘಟನೆಗೆ ಸಾಕ್ಷಿಯಾಗಿ ಬಂದನು. ಆತನ ಹೇಳಿಕೆಯ ಆಧಾರದ ಮೇಲೆ, ಭಕ್ತರು ಕಳ್ಳತನದ ದೂರನ್ನು ಸಲ್ಲಿಸಿದರು. ಸ್ಥಳೀಯ ಅಧಿಕಾರಿಗಳು ನಿಗೂಢವಾಗಿ ಕಣ್ಮರೆಯಾದ ಲಾಡುವಿನ ಬಗ್ಗೆ ತನಿಖೆ ಆರಂಭಿಸಿದರು.
ಇದನ್ನೂ ಓದಿ:ತಮ್ಮದೇಯಾದ “ನಾನು ನಂದಿನಿ” ವರ್ಷನ್ ಮೂಲಕ ಸ್ಯಾಂಡಲ್​ವುಡ್​ಗೆ ಟಾಂಗ್​ ಕೊಟ್ಟ ಡ್ರಾಮಾ ಬೆಡಗಿ
ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ 4.20ಕ್ಕೆ ಗಣಪತಿ ಪೆಂಡಾಲ್​ ಅನ್ನು ಪ್ರವೇಶಿಸುವ ನೆರಳಿನ ಆಕೃತಿಯ ದೃಶ್ಯ ಸೆರೆಯಾಗಿದೆ. ನೆರಳಿನ ದೃಶ್ಯ ಲಡ್ಡುವಿನೊಂದಿಗೆ ಅವಸರವಾಗಿ ಪೆಂಡಾಲ್​ನಿಂದ ನಿರ್ಗಮಿಸಿತು. ಈ ಆಘಾತಕಾರಿ ದೃಶ್ಯ ಎಲ್ಲರನ್ನೂ ಅಚ್ಚರಿಗೆ ದೂಡಿದೆ.
ಸಮಿತಿಯು ಮಿಯಾಪುರ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದೆ. ಯಾರೋ ಖದೀಮ ಲಾಡನ್ನು ಕದ್ದಿರುವ ಶಂಕೆ ವ್ಯಕ್ತವಾಗಿದೆ. ಆದರೂ, ಈ ಪ್ರಕರಣದ ನಿಗೂಢತೆ ಇನ್ನಷ್ಟು ಹೆಚ್ಚಾಗಿದೆ.(ಏಜೆನ್ಸೀಸ್​)
ಕಾವೇರಿ ಜಲ ವಿವಾದ; ಪ್ರಲ್ಹಾದ ಜೋಶಿ ರಾಜೀನಾಮೆಗೆ ಎಚ್​.ಸಿ. ಮಹದೇವಪ್ಪ ಒತ್ತಾಯ

ಯೋಧ ಹುತಾತ್ಮ; ಕುಟುಂಬದ ಪ್ರತಿಭಟನೆ ಬೆನ್ನಲ್ಲೇ ತನಿಖೆ ಮತ್ತಷ್ಟು ಚುರುಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 3 =
Remember me
