ಶಿರಡಿ:ಪತ್ನಿಯ ಆಸೆಯಂತೆ ಹೈದರಾಬಾದ್‌ನ ಭಕ್ತರೊಬ್ಬರು 33 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಸಾಯಿಬಾಬಾಗೆ ಅರ್ಪಿಸಿದ್ದಾರೆ.
ಹೈದರಾಬಾದ್‌ನ ಸಾಯಿಬಾಬಾ ಭಕ್ತರಾದ 80 ವರ್ಷದ ಡಾ. ರಾಮಕೃಷ್ಣ ಅವರು, ಬಾಬಾಗೆ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದಾರೆ. ಈ ಮೂಲಕ ಅವರ ಮೃತ ಪತ್ನಿ ರತ್ನಮ್ಮ ಅವರ ಆಸೆಯನ್ನು ಈಡೇರಿಸಿದ್ದಾರೆ.
707 ಗ್ರಾಂ ತೂಕದ ಸುಮಾರು 33 ಲಕ್ಷ ರೂಪಾಯಿ ಬೆಲೆಬಾಳುವ ಕಿರೀಟವನ್ನು ಬಾಬಾಗೆ ಅರ್ಪಿಸಿದ್ದು, ಇದರಲ್ಲಿ 35 ಗ್ರಾಂ ತೂಕದ ಅಮೆರಿಕನ್ ಡೈಮೆಂಡ್ ನಿಂದ ಅಲಂಕರಿಸಲಾಗಿದೆ.ದಾನ ಮಾಡಿದ ಕಿರೀಟವು ತುಂಬಾ ಆಕರ್ಷಕವಾಗಿದ್ದು, ಮುಕುಟದ ಮಧ್ಯದಲ್ಲಿ ಓಂ ಎಂದು ಬರೆಸಿದ್ದಾರೆ. ಕಿರೀಟದ ಮೇಲೆ ನವಿಲುಗರಿ ಇಡಲಾಗಿದೆ. ಇಂದು ಮಧ್ಯಾಹ್ನದ ಆರತಿಯ ಸಮಯದಲ್ಲಿ ಸಾಯಿ ಬಾಬಾರವರ ವಿಗ್ರಹಕ್ಕೆ ಈ ಕಿರೀಟವನ್ನು ಇಟ್ಟು ಪೂಜಿಸಲಾಯಿತು.
ಪತ್ನಿಯ ಕೊನೆಯ ಆಸೆ:ಹೈದರಾಬಾದ್​ನ ಸಾಯಿ ಭಕ್ತರಾದ ಡಾ.ರಾಮಕೃಷ್ಣ ಅವರು 1992ರಲ್ಲಿ ತಮ್ಮ ಪತ್ನಿ ಸಾಯಿಬಾಬಾ ದರ್ಶನಕ್ಕಾಗಿ ಶಿರಡಿಗೆ ಬಂದಿದ್ದೆವು. ಅಂದು ಬಂದಾಗ ಬಾಬಾಗೆ ಕಿರೀಟ ಕೊಡುವುದಾಗಿ ಪತ್ನಿ ಹರಸಿಕೊಂಡಿದ್ದಳು. ಆದರೆ, ಆ ಸಂದರ್ಭದಲ್ಲಿ ಹಣದ ಸಮಸ್ಯೆ ಇದ್ದ ಕಾರಣ ಕಿರೀಟ ಮಾಡಿಸಿರಲಿಲ್ಲ. ಅಷ್ಟರಲ್ಲಿ ರತ್ನಮ್ಮ ನಿಧನರಾದರು. ಆದರೆ, ಅವಳ ಆಸೆಯನ್ನು ಈಗ ಈಡೇರಿಸಿದ್ದೇನೆ ಎಂದು ರಾಮಕೃಷ್ಣ ಹೇಳುತ್ತಾರೆ.
‘ಮಿಸೆಸ್​ ಇಂಡಿಯಾ’ 2022 ಪ್ರಶಸ್ತಿ ಮುಡಿಗೇರಿಸಿಕೊಂಡ ನಿವೇದಿತಾ ಗೌಡ

ಆತ್ಮಹತ್ಯೆಗೆ ಶರಣಾದ ಸ್ಟಾಫ್ ನರ್ಸ್​; ಡೆತ್​ ನೋಟ್​​​ನಲ್ಲಿತ್ತು ಸಾವಿಗೆ ಕಾರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
