ಹೈದರಾಬಾದ್​:ಕಿಡ್ನಿಯಲ್ಲಿ ಒಂದೆರೆಡು ಕಲ್ಲುಗಳು ಇರುವುದನ್ನು ನಾವು ನೋಡಿದ್ದೇವೆ. ಆದರೆ, ಹೈದರಾಬಾದ್​ ಮೂಲದ ವ್ಯಕ್ತಿಯೊಬ್ಬನ ಕಿಡ್ನಿಯಿಂದ ಬರೋಬ್ಬರಿ 418 ಕಲ್ಲುಗಳನ್ನು ಆಪರೇಷನ್​ ಮೂಲಕ ಹೊರತೆಗೆಯಲಾಗಿದ್ದು, ವೈದ್ಯರನ್ನೇ ಅಚ್ಚರಿಗೆ ದೂಡಿದೆ.
ಕೆಲ ದಿನಗಳಿಂದ 60 ವರ್ಷದ ವ್ಯಕ್ತಿಯು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ. ಆತನ ಕಿಡ್ನಿ ಕಾರ್ಯ ತೀವ್ರವಾಗಿ ದುರ್ಬಲವಾಗಿತ್ತು. ಶೇ. 27 ರಷ್ಟು ಕಿಡ್ನಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಆ ವ್ಯಕ್ತಿ ಆಗಾಗ ನೋವಿನಿಂದ ಬಳಲುತ್ತಿದ್ದರು. ನೋವನ್ನು ಸಹಿಸಲಾಗದ ಆತ ಹೈದರಾಬಾದ್‌ನ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಯುರಾಲಜಿ (AINU) ನಲ್ಲಿ ವೈದ್ಯರನ್ನು ಭೇಟಿಯಾದರು.
ವ್ಯಕ್ತಿಯ ಕಿಡ್ನಿ ಕಾರ್ಯವನ್ನು ಪರೀಕ್ಷಿಸಿದ ವೈದ್ಯರು ಒಂದು ಕ್ಷಣ ಶಾಕ್​ ಆದರು. ಕಿಡ್ನಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲುಗಳಿರುವುದನ್ನು ವೈದ್ಯರು ದೃಢಪಡಿಸಿ, ಆಪರೇಷನ್ ಮಾಡಲೇಬೇಕಿದೆ ಎಂದು ಸೂಚಿಸಿದರು. ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ವೈದ್ಯರು ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನ ಬಳಸಿ ರೋಗಿಯ ಕಿಡ್ನಿಯಿಂದ ಕಲ್ಲುಗಳನ್ನು ಹೊರತೆಗೆದಿದ್ದಾರೆ. ಒಂದಲ್ಲ.. ನೂರಲ್ಲ.. ಬರೋಬ್ಬರಿ 418 ಕಲ್ಲುಗಳನ್ನು ಏಕಕಾಲಕ್ಕೆ ಯಶಸ್ವಿಯಾಗಿ ಹೊರತೆಗೆಯಲಾಗಿದೆ.
#Hyderabad– Hyd Hospital removed 418 kidney stones from a patient with only 27% kidney function. It was accomplished through a minimally invasive procedure.
The 60-year-old patient presented a unique challenge with an unprecedented number of kidney stones and severely impaired…pic.twitter.com/Bfkf7r8nU1
— @Coreena Enet Suares (@CoreenaSuares2)March 13, 2024

ಡಾ.ಕೆ.ಪೂರ್ಣಚಂದ್ರ ರೆಡ್ಡಿ, ಡಾ.ಗೋಪಾಲ್ ಮತ್ತು ಡಾ.ದಿನೇಶ್ ನೇತೃತ್ವದ ಮೂತ್ರಶಾಸ್ತ್ರಜ್ಞರ ತಂಡವು ಸುಧಾರಿತ ಶಸ್ತ್ರಚಿಕಿತ್ಸಾ ತಂತ್ರಗಳನ್ನು ಬಳಸಿಕೊಂಡು ಈ ಆಪರೇಷನ್​ ಪೂರ್ಣಗೊಳಿಸುವ ಮೂಲಕ ಅಪರೂಪದ ಸಾಧನೆಯನ್ನು ಮಾಡಿದೆ. ಸುಮಾರು ಎರಡು ಗಂಟೆಗಳ ಕಾಲ ಆಪರೇಷನ್​ ನಡೆಯಿತು.
ಚಿಕ್ಕ ಕ್ಯಾಮೆರಾದೊಂದಿಗೆ ಲೇಸರ್ ಪ್ರೋಬ್‌ಗಳು ಮತ್ತು ವಿಶೇಷ ಉಪಕರಣಗಳನ್ನು ಬಳಸಿಕೊಂಡು ಯಾವುದೇ ಸರ್ಜರಿ ಇಲ್ಲದೆ ಕಿಡ್ನಿ ಕಲ್ಲುಗಳನ್ನು ತೆಗೆದುಹಾಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೆರ್ಕ್ಯುಟೇನಿಯಸ್ ನೆಫ್ರೊಲಿಥೊಟೊಮಿ (ಪಿಸಿಎನ್‌ಎಲ್) ಮೂಲಕ ಕಡಿಮೆ ಹಾನಿಕಾರಕ ರೀತಿಯಲ್ಲಿ ಆಪರೇಷನ್​ ನಡೆಸಲಾಗಿದೆ ಎಂದು ವೈದ್ಯಕೀಯ ತಂಡ ತಿಳಿಸಿದೆ. ಸದ್ಯ ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್​ ಆಗಲಿದ್ದಾರೆ.(ಏಜೆನ್ಸೀಸ್​)
ಕಿಡ್ನಿ ಸ್ಟೋನ್ ಇದೆ ಅಂತ ಗೊತ್ತಾಗುವುದು ಹೇಗೆ? ಅದನ್ನು ಗುಣಪಡಿಸಲು ಇರುವ ಮನೆಮದ್ದು ಏನು?

ಕಿಡ್ನಿ ಕಲ್ಲುಗಳಿಗೆ ಹೋಮಿಯೋಕೇರ್ ಪರಿಹಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 16 =
Remember me
