ಹೈದರಾಬಾದ್​:ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಕರೊನಾ ಸೋಂಕು ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಆದರೆ, ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ಕೊಡಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಜತೆಗೆ ನರ್ಸ್​ಗಳ ಕೊರತೆಯೂ ಉಂಟಾಗುತ್ತಿದೆ. ಸೋಂಕಿಗೆ ಹೆದರಿ ಬಹುತೇಕ ನರ್ಸ್​ಗಳು ತವರು ಕೇರಳವನ್ನು ಸೇರಿರುವುದು ಸಮಸ್ಯೆಯನ್ನು ದುಪ್ಪಟ್ಟುಗೊಳಿಸಿದೆ.
ಕರ್ನಾಟಕದಲ್ಲೂ ಕೂಡ ಇದೇ ಪರಿಸ್ಥಿತಿ ಇದ್ದು, ನರ್ಸ್​ಗಳನ್ನು ನೇಮಕ ಮಾಡಿಕೊಳ್ಳಲಾಗದೆ ಆಸ್ಪತ್ರೆಗಳು ಪರಿತಪಿಸುತ್ತಿವೆ. ಆದರೆ, ಈ ಸಮಸ್ಯೆಯನ್ನು ನೀಗಿಸಿಕೊಳ್ಳಲು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗಳ ಮಾಲೀಕರು ವಿನೂತನ ಮಾರ್ಗ ಅನುಸರಿಸಲು ಮುಂದಾಗಿದ್ದಾರೆ.
ಹೆಚ್ಚಿನ ವೇತನದ ಆಮಿಷದ ಜತೆಗೆ ಕೇರಳದಿಂದ ಬಾಡಿಗೆ ವಿಮಾನಗಳಲ್ಲಿ ನರ್ಸ್​ಗಳನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗಳು ಕರೆತರಲಾರಂಭಿಸಿವೆ. ಇತ್ತೀಚೆಗೆ ಬಾಡಿಗೆ ವಿಮಾನದಲ್ಲಿ ತಿರುವನಂತಪುರದಿಂದ 50 ನರ್ಸ್​ಗಳನ್ನು ಕರೆತರಲಾಗಿದೆ.
ಇದನ್ನೂ ಓದಿ:ಕರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ 10 ಸಾವಿರ ಹಾಸಿಗೆ ವ್ಯವಸ್ಥೆ
ತೆಲಂಗಾಣದಲ್ಲಿ ಪ್ರತಿದಿನವೂ 1 ಸಾವಿರದಷ್ಟು ಕರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇವರಲ್ಲಿ ಬಹುತೇಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತಾರೆ. ಪರಿಣಾಮ, ಖಾಸಗಿ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ. ಇವರೆಲ್ಲರಿಗೂ ಸಮರ್ಪಕ ಸೇವೆ ಕೊಡಲು ನರ್ಸ್​ಗಳ ಅಗತ್ಯವಿದೆ. ಹಾಗಾಗಿ, 45ರಿಂದ 50 ಸಾವಿರ ರೂಪಾಯಿ ಸಂಬಳ ಕೊಟ್ಟು ಇವರೆಲ್ಲರನ್ನೂ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ಕಾರ್ಪೋರೇಟ್​ ಆಸ್ಪತ್ರೆಯೊಂದರ ಅಧಿಕಾರಿ ತಿಳಿಸಿದ್ದಾರೆ.
ಅನುಭವದ ಕೊರತೆ:ಐಸಿಯುಗಳಲ್ಲಿ ಕೆಲಸ ಮಾಡುವ ಅನುಭವ ಹೆಚ್ಚಿನ ನರ್ಸ್​ಗಳಿಗೆ ಇಲ್ಲ. ಹಾಗಾಗಿ ಅವರು ಕರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಯಾರಾದರೂ ಒಬ್ಬರು ನರ್ಸ್​ ಸೋಂಕಿಗೆ ತುತ್ತಾದರು ಎಂದರೆ, ಅವರ ಸಹೋದ್ಯೋಗಿಗಳೆಲ್ಲರೂ ಸ್ವಪ್ರೇರಣೆ ಮೇರೆಗೆ ಕ್ವಾರಂಟೈನ್​ಗೆ ಒಳಗಾಗುತ್ತಾರೆ. ಇದು ಕೂಡ ನರ್ಸ್​ಗಳ ಕೊರತೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಆಕಾಶದಲ್ಲಿದ್ದಾಗಲೇ ಎರಡು ವಿಮಾನಗಳ ಡಿಕ್ಕಿ, ಸರೋವರದೊಳಕ್ಕೆ ಬಿದ್ದ ಅವಶೇಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 12 =
Remember me
