ಹೈದರಾಬಾದ್​:ಮಹಿಳಾ ಬಾಡಿಗೆದಾರರ ಕೋಣೆಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ ಆರೋಪದ ಮೇಲೆ ಮನೆ ಮಾಲೀಕನನ್ನು ಮಂಗಳವಾರ ಬಂಧಿಸಲಾಗಿದೆ.
ಇದನ್ನೂ ಓದಿ:ಹನುಮಾನ್ ಚಾಲೀಸಾ ಪಠಿಸಿದ ಕಳ್ಳ 10 ರೂ.ಕಾಣಿಕೆ ನೀಡಿ ದೇವಸ್ಥಾನದಿಂದ 5000 ರೂ. ದೋಚಿದ!
ಜುಬಿಲಿ ಹಿಲ್ಸ್ ಪ್ರದೇಶದ ಇಬ್ಬರು, ಆರೋಪಿಗಳ ವಿರುದ್ಧ ದೂರು ನೀಡಿದ ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಸೈಯದ್ ಸಲೀಂ ಬಂಧಿತ ಮನೆ ಮಾಲೀಕ. 45 ವರ್ಷದ ಈತ ಜುಬಿಲಿ ಹಿಲ್ಸ್ ಬಳಿಯ ಹೈಲಂ ಕಾಲೋನಿಯಲ್ಲಿ ಐದು ಅಂತಸ್ತಿನ ಕಟ್ಟಡವನ್ನು ಹೊಂದಿದ್ದಾನೆ. ಸೈಯದ್​​ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದಾನೆ. ಉಳಿದ ಫ್ಲ್ಯಾಟ್‌ಗಳನ್ನು ಬಾಡಿಗೆಗೆ ನೀಡಿದ್ದನು.
ಇದನ್ನೂ ಓದಿ:ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…
ಹಿಡನ್ ಕ್ಯಾಮೆರಾಗಳು ಕಂಡುಬಂದಿವೆ :ಕೆಲವು ತಿಂಗಳ ಹಿಂದೆ ಇಬ್ಬರು ಮಹಿಳೆಯರು ಬಾಡಿಗೆಗೆ ಬಂದಿದ್ದಾರೆ. ಪದೇ ಪದೇ ವಿದ್ಯುತ್ ಕಡಿತದಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಬಾಡಿಗೆದಾರರು ತಮ್ಮ ಕೊಠಡಿಯೊಳಗಿನ ವಿದ್ಯುತ್ ಮೀಟರ್ ಬಾಕ್ಸ್ ಅನ್ನು ಪರಿಶೀಲಿಸಲು ಎಲೆಕ್ಟ್ರಿಷಿಯನ್‌ಗೆ ಕರೆ ಮಾಡಿದರು. ಮೀಟರ್ ಬಾಕ್ಸ್ ತೆರೆದು ನೋಡಿದಾಗ ಅದರೊಳಗೆ ಬಚ್ಚಿಟ್ಟಿದ್ದ ಸಿಸಿಟಿವಿ ಕ್ಯಾಮೆರಾ ಪತ್ತೆಯಾಗಿದೆ.
ಇದನ್ನೂ ಓದಿ:ಗಂಡನ ಕುಡಿತದ ಚಟಕ್ಕೆ ಬೇಸತ್ತ ಪತ್ನಿ; ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದಳು
ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ರೆಕಾರ್ಡ್ ಮಾಡಲು ಮನೆಯ ಮಾಲೀಕ ಸಿಸಿಟಿವಿ ಕ್ಯಾಮೆರಾವನ್ನು ಕೊಠಡಿಯೊಳಗೆ ಹಾಕಿದ್ದನು. ಸೈಯದ್ ನಿವಾಸದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಕಂಪ್ಯೂಟರ್‌ಗೆ ಸಂಪರ್ಕ ಕಲ್ಪಿಸಿರುವುದು ಕೂಡ ಪತ್ತೆಯಾಗಿದೆ. ನಂತರ ಮಹಿಳೆಯರು ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಈ ಕುಟುಂಬದ 9 ಜನರದ್ದೂ ಒಂದೇ ದಿನ ಹುಟ್ಟುಹಬ್ಬ! ಇದು ಹೇಗೆ ?
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಾರ್ಡ್ ಡ್ರೈವ್‌ನೊಂದಿಗೆ ಹಿಡನ್ ಕ್ಯಾಮೆರಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಸಾಯುತ್ತೇವೆಂದು ಅಣ್ಣನಿಗೆ ಕರೆ​ ಮಾಡಿ ಪ್ರಾಣ ಬಿಟ್ಟ ತಂಗಿ; 4 ವರ್ಷದ ಕಂದಮ್ಮ ಅನಾಥ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + eleven =
Remember me
