ಹೈದರಾಬಾದ್​:ಮಲ ತಂದೆಯ ಲ್ಯಾಪ್​ಟಾಪ್​​ನಲ್ಲಿ ತನ್ನ ನಗ್ನ ಚಿತ್ರಗಳನ್ನು ನೋಡಿದ ಯುವತಿಯೊಬ್ಬಳು ಅಘಾತಕ್ಕೊಳಗಾದ ಘಟನೆ ತೆಲಂಗಾಣದ ಮುನ್ಸಿಪಾಲಿಟಿ ನಾಚಾರಾಮ್​ನಿಂದ ವರದಿಯಾಗಿದೆ.
ಆರೋಪಿಯನ್ನು 40 ವರ್ಷದ ರೆಸ್ಟೋರೆಂಟ್​ ಮಾಲೀಕ ರಾಜೇಶ್​ ಎಂದು ಗುರುತಿಸಲಾಗಿದೆ. ತನ್ನ ಮಗಳು ಅಪ್ರಾಪ್ತೆಯಾಗಿದ್ದ ಸಮಯದಲ್ಲಿ ಆರೋಪಿ ನಗ್ನ ಚಿತ್ರಗಳನ್ನು ತೆಗೆದು ಲ್ಯಾಪ್​ಟಾಪ್​ನಲ್ಲಿ ಸೇವ್​ ಮಾಡಿಟ್ಟುಕೊಂಡಿದ್ದ.
ಇದನ್ನೂ ಓದಿ:ಬಾಲಿವುಡ್​ ಇಂಡಸ್ಟ್ರಿಯನ್ನೇ ನಡುಗಿಸಿದ ಟಾಪ್​ 6 ಸೆಕ್ಸ್​ ಸ್ಕ್ಯಾಂಡಲ್​ಗಳು ಯಾವವು ಗೊತ್ತಾ?
ಇದೀಗ ಸಂತ್ರಸ್ತೆಗೆ 20 ವರ್ಷ ವಯಸ್ಸಾಗಿದ್ದು, ಕಾನೂನು ವಿದ್ಯಾರ್ಥಿನಿಯಾಗಿರುವ ಆಕೆ ಜುಲೈನಲ್ಲಿ ಮಲ ತಂದೆಯ ಲ್ಯಾಪ್​ಟಾಪ್​ ಬಳಸುವಾಗ ತನ್ನದೇ ನಗ್ನ ಚಿತ್ರಗಳನ್ನು ನೋಡಿ ಬೆಚ್ಚಿಬಿದ್ದಿದ್ದಾಳೆ. ಫೋಟೋಗಳನ್ನು ತೆಗೆದಾಗ ಸಂತ್ರಸ್ತೆಗೆ 14 ಅಥವಾ 15 ವರ್ಷ ವಯಸ್ಸಾಗಿತ್ತು ಎಂದು ನಾಚಾರಾಮ್​ ಠಾಣೆಯ ಪೊಲೀಸ್​ ಇನ್ಸ್​ಪೆಕ್ಟರ್​ ಕಿರಣ್​ ಕುಮಾರ್​ ತಿಳಿಸಿದ್ದಾರೆ.
ಅಂದಹಾಗೆ ಆರೋಪಿ ರಾಜೇಶ್​ಗೆ ಸಂತ್ರಸ್ತೆ ಯುವತಿಯ ತಾಯಿ ಎರಡನೇ ಪತ್ನಿಯಾಗಿದ್ದಾಳೆ. ಲ್ಯಾಪ್​ಟಾಪ್​ ಫೋಟೋಗಳಿರುವ ಬಗ್ಗೆ ಯುವತಿ ತನ್ನ ತಾಯಿಗೆ ತಿಳಿಸಿದ್ದಾಳೆ. ಬಳಿಕ ಇಬ್ಬರು ತೆರಳಿ ಠಾಣೆಗೆ ದೂರು ನೀಡಿದ್ದು, ಜುಲೈ 29ರಂದು ದೂರು ದಾಖಲಾಗಿದೆ.
ಆರೋಪಿಯನ್ನು ಈ ಮೊದಲೇ ಬಂಧಿಸಿದ್ದೆವು. ಆದರೆ, ಆತನಿಗೆ ಕರೊನಾ ವೈರಸ್​ ಪಾಸಿಟಿವ್​ ಇದೆ. ಗುಣಮುಖವಾದ ಬಳಿಕ ಆತನನ್ನು ಸೋಮವಾರ ವಶಕ್ಕೆ ಪಡೆದುಕೊಂಡಿದ್ದೇವೆಂದು ಮಲ್ಕಜ್​ಗಿರಿ ಎಸಿಪಿ ನರಸಿಂಹ ರೆಡ್ಡಿ ತಿಳಿಸಿದ್ದಾರೆ.
ಆರೋಪಿ ವಿರುದ್ಧ ಪೊಕ್ಸೊ ಸೇರಿದಂತೆ ಇತರೆ ಐಪಿಸಿ ಸೆಕ್ಸನ್​ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳಹಿಸಲಾಗಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಮಗಳು ಬೇರೊಬ್ಬನ ಜತೆ ಹೋದಾಗ, ರಾಮ್​ ಚರಣ್​ ಚಿತ್ರ ಸೋತಾಗ ಆತ್ಮಹತ್ಯೆಗೆ ನಿರ್ಧರಿಸಿದ್ದೆ
ಆಗ್ರಾದಲ್ಲಿ 34 ಪ್ರಯಾಣಿಕರಿದ್ದ ಬಸ್​ ಹೈಜಾಕ್​: ಮಾಲೀಕನ ಸಾವೇ ಇದಕ್ಕೆ ಕಾರಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
