ಹೈದರಾಬಾದ್​: ಕರೊನಾ ಲಾಕ್​ಡೌನ್​ನಿಂದಾಗಿ ಮಕ್ಕಳ ಶಿಕ್ಷಣದ ಮೇಲೆ ಕೂಡ ಪ್ರಭಾವ ಬಿದ್ದಿದೆ. ವಿದ್ಯಾರ್ಥಿಗಳ ಓದು-ಪಠ್ಯಕ್ರಮಗಳು ನಡೆಯುತ್ತಿಲ್ಲ. ಆದರೆ ಈ 51 ವರ್ಷದ ವ್ಯಕ್ತಿಯ ಪಾಲಿಗೆ ಲಾಕ್​ಡೌನ್​ ವರದಾನವಾಗಿದೆ.ಕಳೆದ 33ವರ್ಷಗಳಿಂದಲೂ ಹತ್ತನೇ ಕ್ಲಾಸ್​ ಪರೀಕ್ಷೆ ಬರೆಯುತ್ತ, ಫೇಲ್​ ಆಗುತ್ತಿದ್ದ 51 ವರ್ಷದ ಹೈದರಾಬಾದ್​ನ ಈ ಮೊಹಮ್ಮದ್​ ನೂರುದ್ದೀನ್​ ಅವರು ಈ ಬಾರಿ ಉತ್ತೀರ್ಣರಾಗಿದ್ದಾರೆ.
ಕಳೆದ 33 ವರ್ಷಗಳಿಂದಲೂ 10ನೇ ಕ್ಲಾಸ್​ ಪರೀಕ್ಷೆ ಬರೆಯುತ್ತಿದ್ದೆ. ಆದರೆ ಉತ್ತೀರ್ಣನಾಗುತ್ತಿರಲಿಲ್ಲ. ಆದರೆ ಈ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಇಲ್ಲಿ ಕೂಡ ಅವರು ನಿಜವಾಗಿಯೂ ಉತ್ತೀರ್ಣರಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಕೊವಿಡ್​-19ನಿಂದ ಶಿಕ್ಷಣ ವ್ಯವಸ್ಥೆ ಕೂಡ ಏರುಪೇರಾಗಿದೆ. ಹಾಗಾಗಿ ತೆಲಂಗಾಣ ಸರ್ಕಾರ ಯಾವ ಮಕ್ಕಳನ್ನೂ ಅನುತ್ತೀರ್ಣ ಮಾಡದೆ, ಸಾಮೂಹಿಕವಾಗಿ ಪಾಸ್​ ಮಾಡಿದೆ.ಇದನ್ನೂ ಓದಿ:ರಾಮಮಂದಿರ ಭೂಮಿಪೂಜೆ ವೀಕ್ಷಿಸಲು ದೆಹಲಿಯಾದ್ಯಂತ ಎಲ್​ಇಡಿ ಸ್ಕ್ರೀನ್​ಗಳ ಅಳವಡಿಕೆಗೆ ಮುಂದಾದ ಬಿಜೆಪಿ
ನನಗೆ ಇಂಗ್ಲಿಷ್​ ಸರಿಯಾಗಿ ಬರುವುದಿಲ್ಲ. ಆದರೆ ಕಲಿಸಲು ಯಾರೂ ಇರಲಿಲ್ಲ. ಟ್ಯೂಷನ್​ಗೂ ಹೋದವನಲ್ಲ. ಆದರೆ ಈ ಬಾರಿ ನಾನು ನನ್ನ ಸಹೋದರ, ಸೋದರಿಯ ನೆರವಿನಿಂದ ಕೈಲಾದಷ್ಟು ಅಭ್ಯಾಸ ಮಾಡಿದ್ದೆ. ನಾನು ಸೆಕ್ಯೂರಿಟಿ ಗಾರ್ಡ್​ ಜಾಬ್​ಗಾಗಿ ಹಲವು ಕಡೆ ಅಪ್ಲೈ ಮಾಡಿದ್ದೆ. ಆದರೆ ಎಲ್ಲ ಕಡೆಗೂ 10ನೇ ಕ್ಲಾಸ್​ ಉತ್ತೀರ್ಣ ಆಗಿರುವ ಅಂಕಪಟ್ಟಿ ಕೇಳುತ್ತಿದ್ದರು. ಆ ಕಾರಣಕ್ಕೇ ನಾನು 33 ವರ್ಷಗಳಿಂದಲೂ ಪರೀಕ್ಷೆ ಬರೆಯಲು ಪ್ರಯತ್ನಿಸಿದ್ದರು ಎಂದು ಮೊಹಮ್ಮದ್​ ತಿಳಿಸಿದ್ದಾರೆ.
ಆದರೂ 1989ರಲ್ಲಿ ಒಂದು ಕಡೆ ಸೆಕ್ಯೂರಿಟಿ ಗಾರ್ಡ್ ಕೆಲಸ ಸಿಕ್ಕಿತು. ನನಗೆ 7000 ರೂ.ಸಂಬಳ ಬರುತ್ತದೆ. ನಾಲ್ವರು ಮಕ್ಕಳು ಇದ್ದಾರೆ. ಆದರೂ ಪರೀಕ್ಷೆ ಬರೆಯುವುದನ್ನು ಬಿಟ್ಟಿರಲಿಲ್ಲ ಎಂದು ತಿಳಿಸಿದರು.
ಇಷ್ಟಕ್ಕೇ ಮುಗಿಯುವುದಿಲ್ಲ. ನಾನು ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತೇನೆ. ಗ್ರಾಜ್ಯುಯೇಶನ್​ ಮಾಡುತ್ತೇನೆ. ಕಾರಣ ಶಿಕ್ಷಣವಂತರಿಗೆ ಎಲ್ಲ ಕಡೆಯೂ ಗೌರವ ಸಿಗುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)
ಪಂಜಾಬ್​​ನಲ್ಲಿ ಮಾರುಕಟ್ಟೆಗೆ ಬಂತು ಹೊಸ ಇಮ್ಯೂನಿಟಿ ಬೂಸ್ಟರ್​ ಹಾಲು…!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:8 − 3 =
Remember me
