ಹೈದರಾಬಾದ್​:ಆಘಾತಕಾರಿ ನಡವಳಿಕೆ ಇದು! ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆ ಕಡಿದು, ಆ ತಲೆಯನ್ನು ಅದನ್ನು ಟೂ ವೀಲ್ಹರ್ ಮೇಲೆ ಇಟ್ಟು 5 ಕಿ.ಮೀ. ಪ್ರಯಾಣ ಮಾಡಿದ್ದೆಲ್ಲಿಗೆ?! ಈ ಘಟನೆಯಿಂದಾಗಿ ಊರೇ ಬೆಚ್ಚಿ ಬಿದ್ದಿದೆ.
ಸಂಗಾರೆಡ್ಡಿ ಜಿಲ್ಲೆಯ ಅನಂತಸಾಗರ ಎಂಬ ಗ್ರಾಮದಲ್ಲಿ ಈ ದುರಂತ ಘಟನೆ ಬುಧವಾರ ರಾತ್ರಿ ನಡೆದಿತ್ತು. ಆರೋಪಿಯನ್ನು ಜುರ್ರು ಸಾಯಿಲು ಎಂದು ಗುರುತಿಸಲಾಗಿದೆ. ಆರೋಪಿಯ ಪತ್ನಿ ಅಂಶಮ್ಮಾ (35) ಮೃತ ಮಹಿಳೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸಾಯಿಲು ತನ್ನ ಪತ್ನಿಯ ಶೀಲವನ್ನು ಶಂಕಿಸಿದ್ದ. ಅನೈತಿಕ ಸಂಬಂಧದ ವಿಚಾರವಾಗಿ ಕ್ರುದ್ಧನಾಗಿದ್ದ. ಈ ವಿಚಾರವಾಗಿ ಪದೇಪದೆ ಜಗಳವೂ ಆಗುತ್ತಿತ್ತು. ಹೀಗಾಗಿ ಪತ್ನಿಯ ತಲೆ ಕಡಿದು, ಉಳಿದ ಶರೀರವನ್ನು ಮನೆಯ ಸಮೀಪವೇ ಇದ್ದ ಪೊದೆಗೆ ಎಸೆದಿದ್ದ.
ಇದನ್ನೂ ಓದಿ:ಮನಸು ದೃಢವಾಗಿರಲಿ ಈ ರಾಶಿಯವರಿಗೆ; ಹತ್ತಿರದವರೇ ನೋವುಂಟು ಮಾಡಬಹುದು !
ಬಳಿಕ ತಲೆಯನ್ನು ಟೂ ವೀಲ್ಹರ್ ಮೇಲೆ ಇಟ್ಟುಕೊಂಡು ಗ್ರಾಮದಿಂದ 5 ಕಿ.ಮೀ. ದೂರದ ನಾರಾಯಣಖೇಡ್​ಗೆ ಕೊಂಡೊಯ್ದ. ಅಲ್ಲಿ ತಾನು ಶಂಕಿಸಿದ್ದ ಪತ್ನಿಯ ಗುಪ್ತ ಪ್ರೇಮಿ ಎನ್ನಲಾದವನ ಮನೆಯ ಬಾಗಿಲಿನಲ್ಲಿ ಪತ್ನಿಯ ತಲೆಯನ್ನು ಇಟ್ಟ! ಈ ಘಟನೆಯಿಂದ ಆ ಊರಿನವರೂ ಬೆಚ್ಚಿಬಿದ್ದರು! ಇಷ್ಟಾದ ಬಳಿಕ ಸಮಾಧಾನ ಹೊಂದಿದ ಸಾಯಿಲು ನೇರವಾಗಿ ಹೋದದ್ದು ನಾರಾಯಣಖೇಡ್ ಪೊಲೀಸ್ ಠಾಣೆಗೆ. ಅಲ್ಲಿ ಕೊಲೆಯ ವಿಚಾರ ತಿಳಿಸಿ ಶರಣಾಗಿದ್ದಾನೆ. (ಏಜೆನ್ಸೀಸ್)
ರಫೇಲ್ ಯುದ್ಧ ವಿಮಾನಗಳ ಮತ್ತೊಂದು ಬ್ಯಾಚ್​ನ ನವೆಂಬರ್​ನಲ್ಲಿ ಭಾರತಕ್ಕೆ ಬರಲಿವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
