ಹೈದರಾಬಾದ್​:ಹೈದಾರಾಬಾದ್​ ಮೂಲದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಅಮೆರಿಕದ ಚಿಕಾಗೋದಲ್ಲಿ ನಡೆದಿದೆ.
ಮೊಹಮ್ಮದ್​ ಮುಜೀಬುದ್ದೀನ್​ ಎಂಬುವರ ಮೇಲೆ ಸೋಮವಾರ ನಸುಕಿನ ಜಾವವೇ ಗುಂಡಿನ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮ ರಾವ್​ ಅವರಿಗೆ ಗಾಯಾಳು ಮುಜೀಬುದ್ದೀನ್​ ಪತ್ನಿ ಪತ್ರದ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ:ನಾಮಪತ್ರ ಹಿಂಪಡೆಯದಿದ್ದರೆ ನಿನ್ನ ಹೆಂಡತಿಯನ್ನು ಬಿಡೋದಿಲ್ಲ: ಪಿಸ್ತೂಲ್​ ತೋರಿಸಿ ಬೆದರಿಕೆ ಆರೋಪ!
ಮುಜೀಬುದ್ದೀನ್​ ಪತ್ನಿ, ಮಕ್ಕಳು ಮತ್ತು ತಾಯಿ ಹೈದರಾಬಾದ್​ನಲ್ಲೇ ನೆಲೆಸದ್ದಾರೆ. ಮುಜೀಬುದ್ದೀನ್​ ರೂಮ್​ಮೇಟ್​ ಒಬ್ಬರು ಹೈದರಾಬಾದ್​ಗೆ ಕರೆ ಮಾಡಿ ಘಟನೆ ಕುರಿತು ಕುಟುಂಬಕ್ಕೆ ಮಾಹಿತಿ ನೀಡಿದ್ದು, ಇದೀಗ ಮುಜೀಬುದ್ದೀನ್ ನೋಡಿಕೊಳ್ಳಲು ಯಾರು ಇಲ್ಲದಿರುವುದರಿಂದ ಕುಟುಂಬ ತುಂಬಾ ಆತಂಕದಲ್ಲಿದೆ. ಅಲ್ಲದೆ, ಅಗತ್ಯ ನೆರವು ಒದಗಿಸಿ ಕೊಡುವಂತೆ ಮುಜೀಬುದ್ದೀನ್​ ಪತ್ನಿ ಪತ್ರ ಮುಖೇನ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಮಾಡಿದ್ದಾರೆ.
ತಕ್ಷಣ ಅಮೆರಿಕಗೆ ತೆರಳಲು ಕುಟುಂಬದವರಿಗೆ ತುರ್ತು ವೀಸಾಗೆ ಅನುಮತಿ ನೀಡುವಂತೆ ಸಚಿವರಿಗೂ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಮುಜೀಬುದ್ದೀನ್ ರೂಮ್​ಮೇಟ್​ ಮಾಹಿತಿ ಪ್ರಕಾರ ಕಾರು ಚಲಾಯಿಸಿಕೊಂಡು ಹೋಗುವಾಗ ಇಬ್ಬರು ವ್ಯಕ್ತಿಗಳು ಕಾರನ್ನು ತಡೆದು ಕೆಳಗೆ ಇಳಿಯುವಂತೆ ಗನ್​ನಿಂದ ಹೆದರಿಸಿ, ಮುಜೀಬುದ್ದೀನ್ ಬಳಿಯಿರುವ ಹಣವನ್ನು ದೋಚಿ ಗುಂಡು ಹಾರಿಸಿ ಪರಾರಿ ಆದರು ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಕೋಟಿ ರೂ. ಲಂಚಕ್ಕೆ ಸಚಿವ ನಾಗೇಶ್ ಬೇಡಿಕೆ? ಸಚಿವರು ಹೇಳಿದ್ದೇನು?
ಹೊಸ ರೂಪಾಂತರ ಕರೊನಾ ವೈರಸ್​ ನಿಯಂತ್ರಣ ತಪ್ಪಿಲ್ಲ: ಡಬ್ಲ್ಯುಎಚ್​ಒ ಸ್ಪಷ್ಟನೆ

ಶಾಲಾ ಶುಲ್ಕದ್ದೇ ದೊಡ್ಡ ಸಮಸ್ಯೆ: ಪಾಲಕರು, ಖಾಸಗಿ ಶಾಲೆಗಳ ಸಹಕಾರ ಕೋರಿದ ಸುರೇಶ್​ಕುಮಾರ್

ಯಡಿಯೂರಪ್ಪ ಅನುಭವಸ್ಥ, ಸಲಹೆ ಅಗತ್ಯವಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
