ಹೈದರಾಬಾದ್​:ಲಾಕ್​ ಆಗಿದ್ದ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆಯಿಂದ ಭಯಗೊಂಡ ಮಾಲೀಕ ಪೊಲೀಸರಿಗೆ ಕರೆ ಮಾಡಿ ತಿಳಿಸಲು, ತಕ್ಷಣ ಮನೆಗೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ಒಳಗೆ ನುಗ್ಗಿದಾಗ ಆಘಾತವೊಂದು ಎದುರಾಯಿತು.
ಮನೆಯ ಫ್ರಿಡ್ಜ್​ನಲ್ಲಿ ಇದ್ದ ಶವವನ್ನು ನೋಡಿ ಒಂದು ಕ್ಷಣ ಪೊಲೀಸರೇ ಬೆಚ್ಚಿಬಿದ್ದರು. ಅಂದಹಾಗೆ ಈ ಘಟನೆ ನಡೆದಿದ್ದು ಹೈದರಾಬಾದಿನ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣಾ ವ್ಯಾಪ್ತಿಯ ಕಾರ್ಮಿಕ ನಗರದಲ್ಲಿ. ಮನೆಯ ಮಾಲೀಕ ತನ್ನ ಒಂದು ಮನೆಯನ್ನು ಲೀಸ್​ಗೆಂದು ನೀಡಿದ್ದ. ಆ ಮನೆ ಕಳೆದ ಕೆಲವು ದಿನಗಳಿಂದ ಲಾಕ್​ ಆಗಿತ್ತು. ದಿನ ಕಳೆದಂತೆ ಆ ಮನೆಯಿಂದ ದುರ್ವಾಸನೆ ಬರುವುದನ್ನು ಗಮನಿಸಿದ ಮಾಲೀಕ ಹೆದರಿಗೆ ಪೊಲೀಸರಿಗೆ ಕರೆ ಮಾಡಿದಾಗ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿರಿ:ಕೆಲ್ಸದಿಂದ ಮನೆಗೆ ಬಂದವನು ಪತ್ನಿಗಾಗಿ ಹುಡುಕಾಡುವಾಗ ಕಾದಿತ್ತು ಶಾಕ್​: ಇದು ಅತಿ ಕೆಟ್ಟ ಅಕ್ರಮ ಸಂಬಂಧವಂತೆ!
ಮೃತನನ್ನು ಸಿದ್ದಿಖ್​ ಅಹ್ಮದ್​ (38) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಟೈಲರ್​. ತನ್ನ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಎರಡು ದಿನಗಳ ಹಿಂದೆ ಸಿದ್ದಿಖ್​ ಪತ್ನಿ ತವರು ಮನೆಗೆ ಹೋಗಿದ್ದಳು. ಇದರ ನಡುವೆ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆ ನೋಡಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದಾಗ, ಬಂದು ಸ್ಥಳ ಪರಿಶೀಲನೆ ಮಾಡಿದ ಪೊಲೀಸರಿಗೆ ಮನೆಯ ಫ್ರಿಡ್ಜ್​ನಲ್ಲಿ ಸಿದ್ದಿಖ್​ ಮೃತದೇಹ ಪತ್ತೆಯಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಮೃತನ ಸಾವಿಗೆ ಕಾರಣ ಪತ್ತೆಗೆ ಪ್ರಯತ್ನಿಸುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ತನಿಖೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಯಾವಾಗ ನಡೆಯಿತು ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ. ಸುಳಿವು ತಂಡ ಸ್ಥಳದಲ್ಲಿ ಕೆಲವು ಆಧಾರಗಳನ್ನು ಸಂಗ್ರಹಿಸಿದ್ದು, ಫ್ರಿಡ್ಜ್​ ಒಳಗೆ ಅರ್ಧ ದೇಹವನ್ನು ಇಡಲಾಗಿತ್ತು ಎಂದು ತಿಳಿದುಬಂದಿದೆ. ಇದು ಕೊಲೆಯೋ? ಅಥವಾ ಏನು ಎಂಬುದನ್ನು ಪತ್ತೆ ಹಚ್ಚುವ ಕೆಲಸಕ್ಕೆ ತನಿಖಾಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿರಿ:ಇಂಥವರೂ ಇರ್ತಾರಾ? ವಿದ್ಯಾರ್ಥಿಗಳ ಹಿತ ಕಾಯಬೇಕಿದ್ದ ಮಹಿಳಾ ಪ್ರಾಂಶುಪಾಲರಿಂದ ತಲೆತಗ್ಗಿಸೋ ಕೃತ್ಯ!
ಗುರುವಾರ ಹೈದರಾಬಾದ್​ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಹಾಡಹಗಲಲ್ಲೇ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಈ ಘಟನೆ ಸೈಬರಬಾದ್​ ಪೊಲೀಸ್​ ಕಮಿಷನರೇಟ್​ ವ್ಯಾಪ್ತಿಯ ಮೈಲಾರದೇವಪಲ್ಲಿಯಲ್ಲೇ ನಡೆದಿದೆ. ಬೈಕ್​ನಲ್ಲಿ ತೆರಳುತ್ತಿದ್ದ ಅಸಾದ್​ ಖಾನ್​ (40) ಎಂಬುವನ ಮೇಲೆ ಕೆಲವು ದುಷ್ಕರ್ಮಿಗಳು ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದರು.(ಏಜೆನ್ಸೀಸ್​)
ನನ್ನ ಈ ಸಮಸ್ಯೆ ಮುದ್ದಿನ ಪತ್ನಿಯನ್ನು ತೀವ್ರ ಕುಗ್ಗಿಸಿಬಿಟ್ಟಿದೆ- ಪ್ಲೀಸ್​ ನನಗೆ ಸಹಾಯ ಮಾಡಿ… ಇದರಿಂದ ಮುಕ್ತಿ ನೀಡಿ…

ಮಗಳು ರೇಪ್​ ಆರೋಪ ಹೊರಿಸಿದ್ದಕ್ಕೆ ಮನನೊಂದು ತಂದೆ ಆತ್ಮಹತ್ಯೆ: ಡೆತ್​ನೋಟ್​ನಲ್ಲಿತ್ತು ನೋವಿನ ಮಾತು!

ಭೀಕರ ಅಪಘಾತ, ಕಾರು ಪಲ್ಟಿ, ಚಾಲಕ ಸ್ಥಳದಲ್ಲೇ ಸಾವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − ten =
Remember me
