ಹೈದರಾಬಾದ್​:ಅಪ್ರಾಪ್ತ ಮಗನಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಪ್ರಿಯಕರನಿಗೆ ಸಹಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ಸ್ಥಳೀಯ ನ್ಯಾಯಾಲಯ ಸಂತ್ರಸ್ತ ಮಗುವಿನ ಆರೋಪಿ ತಾಯಿಗೆ 13 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಆರೋಪಿ ಮಹಿಳೆಯ ಪ್ರಿಯಕರ ಫೈಯಾಜ್​ ಮೆಹಮೂದ್​ ಅನ್ಸಾರಿ ಎಂಬಾತನಿಗೆ ಎರಡು ಜೀವಾವಧಿ ಶಿಕ್ಷೆ ಮತ್ತು 10 ವರ್ಷಗಳ ಜೈಲು ಶಿಕ್ಷೆಯನ್ನು ಕೋರ್ಟ್​ ವಿಧಿಸಿದೆ.
ಇದನ್ನೂ ಓದಿ:ತಮ್ಮದೇ ನಿರ್ಮಾಣದ “ಲೇಡಿಸ್​ ನಾಟ್​ ಅಲೌಡ್” ಸಿನಿಮಾ ವೀಕ್ಷಿಸದಂತೆ ಶಕೀಲಾ ಎಚ್ಚರಿಕೆ!​
2016ರಲ್ಲಿ ಬೆಳಕಿಗೆ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಂದೆ ಕರಾಳ ಘಟನೆಯನ್ನು ವಿವರಿಸಿದ್ದು, ಮಗನಿಗೆ ಮಾನಸಿಕವಾಗಿ, ಲೈಂಗಿಕವಾಗಿ ಹಾಗೂ ದೈಹಿಕವಾಗಿ ಪತ್ನಿ ಮತ್ತು ಆಕೆಯ ಪ್ರಿಯಕರ ತುಂಬಾ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಪಂಚದಲ್ಲಿ ಕೆಟ್ಟ ಮಗನಿರಬಹುದು ಆದರೆ ಕೆಟ್ಟ ತಾಯಿ ಇರುವುದಿಲ್ಲ ಎನ್ನುತ್ತಾರೆ. ಆದರೆ, ಅದಕ್ಕೆ ಕಳಂಕ ಬರುವ ರೀತಿಯಲ್ಲಿ ಆರೋಪಿ ಮಹಿಳೆ ನಡೆದುಕೊಂಡಿರುವುದು ದುರ್ದೈವದ ಸಂಗತಿಯಾಗಿದೆ.
ಬಾಲಕನ ತಂದೆ ನೀಡಿರುವ ದೂರಿನ ಪ್ರಕಾರ ಪತ್ನಿ ಮತ್ತು ಆಕೆಯ ಪ್ರಿಯಕರನ ನಡುವಿನ ಅಕ್ರಮ ಸಂಬಂಧದ ಬಗ್ಗೆ ಮಗುವಿಗೆ ಗೊತ್ತಾದ ಬಳಿಕ ಇಬ್ಬರು ಸೇರಿ ಮಗುವನ್ನು ಹಿಂಸಿಸಿ, ಕೊಲ್ಲಲು ತಂತ್ರ ರೂಪಿಸಿದ್ದರು ಎಂದಿದ್ದಾರೆ.
ಬಾಲಕನ ತಂದೆ ಕುವೈತ್​ನಲ್ಲಿ ಉದ್ಯೋಗಿಯಾಗಿದ್ದರು. ಈ ವೇಳೆ ಹೈದರಾಬಾದ್​ನಲ್ಲಿ ತಮ್ಮ ಮನೆಯಲ್ಲಿ ಪತ್ನಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನೊಂದಿಗೆ ವಾಸವಿದ್ದರು. ತಂದೆ ಹಬ್ಬಕ್ಕೆಂದು ಮನೆಗೆ ಬಂದಾಗ ಮಗ ವರ್ತನೆ ಕಂಡ ತಂದೆ ಏನಾಯಿತು ಎಂದು ವಿಚಾರಿಸಿದ್ದಾರೆ. ಆಗ ಪತ್ನಿ ಮತ್ತು ಪ್ರಿಯಕರ ನಡುವಿನ ಸಂಬಂಧ ಗೊತ್ತಾಗಿದೆ.
ಇದನ್ನೂ ಓದಿ:ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಿಪಿಇ ಗೌನ್ ತೊಟ್ಟಿದ್ದ ನರ್ಸ್​ಗೆ ಒಲಿಯಿತು ಅದೃಷ್ಟ!
ಅಕ್ರಮ ಸಂಬಂಧದ ಬಗ್ಗೆ ತಾಯಿಯನ್ನು ಪ್ರಶ್ನಿಸಿದಾಗ ಮಗನನ್ನು ಸುಮ್ಮನಿರಿಸಲು ಪ್ರಿಯಕರನ ಜತೆಗೂಡಿ ಹಿಂಸಿಸಿದ್ದಾಳೆ. ಸೂಜಿಯಿಂದ ಚುಚ್ಚುವುದು ಹಗ್ಗದಿಂದ ಕಟ್ಟಿ ಥಳಿಸುವುದು, ವಾಂತಿ ಬೇದಿ ಬರುವಂತೆ ವಿಷಾಹಾರ ನೀಡುವುದು, ಜನನಾಂಗಕ್ಕೆ ಬಿಸಿ ನೀರು ಸುರಿಯುವುದು ಸೇರಿದಂತೆ ಸಾಕಷ್ಟು ಹಿಂಸೆಯನ್ನು ನೀಡಿರುವುದಾಗಿ ಬಾಲಕನ ತಂದೆ ಆರೋಪಿಸಿದ್ದರು. ಅಲ್ಲದೆ, ಬಾಯ್ಬಿಟ್ಟರೆ ಸಹೋದರಿಯರನ್ನು ಕೊಲ್ಲುವುದಾಗಿಯೂ ಬೆದರಿಕೆ ವೊಡ್ಡಿದ್ದರಂತೆ. ಇದಕ್ಕೆ ಸಂಬಂಧಿಸಿದ ವಿಡಿಯೋ ದಾಖಲೆಗಳನ್ನು ಸಹ ನೀಡಿದ್ದರು. ಇದೀಗ ಆರೋಪ ಸಾಬೀತಾಗಿ ಇಬ್ಬರು ಕಂಬಿ ಎಣಿಸುವಂತಾಗಿದೆ.(ಏಜೆನ್ಸೀಸ್​)
‘ಉಗ್ರರು ಮತ್ತೆ ಬಂದರೆ ಅವರನ್ನೂ ಕೊಲ್ಲುತ್ತೇನೆ’; ಅಪ್ಪ-ಅಮ್ಮನನ್ನು ಕೊಂದವರಿಗೆ ಗುಂಡಿಕ್ಕಿದ ಬಾಲಕಿಯ ಖಡಕ್​ ಮಾತು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × three =
Remember me
