ಆಂಧ್ರಪ್ರದೇಶ:ಬಹುಕೋಟಿ ಕೌಶಲಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ಎನ್. ಚಂದ್ರಬಾಬು ನಾಯ್ಡು ಜೈಲು ಪಾಲಾದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸ್ಟಾರ್​ ನಟ ಪವನ್​ ಕಲ್ಯಾಣ್​ ಸೇರಿದಂತೆ ಹಲವರು ಹಲವು ರೀತಿಯಲ್ಲಿ ಪ್ರತಿಭಟನೆಗೆ ನಡೆಸಿದ್ದಾರೆ.
ಇದನ್ನೂ ಓದಿ:ಮನೆಮನೆಗೂ ‘ಮದ್ಯಭಾಗ್ಯ’; ಕರ್ನಾಟಕ ಇನ್ನು ಕುಡುಕರ ತೋಟ’- ಕುಮಾರಸ್ವಾಮಿ ಟೀಕೆ
ಈ ವೇಳೆ ಸಾಫ್ಟ್​ವೇರ್​ ಉದ್ಯೋಗಿಗಳು ಒಗ್ಗೂಡಿ ‘ಚಲೋ ರಾಜಮಂಡ್ರಿ’ ಕಾರು ರ‍್ಯಾಲಿ ನಡೆಸುತ್ತೇವೆ ಎಂದು ಕೇಳಿದ ಅನುಮತಿಗೆ ಇದೀಗ ಹೈದರಾಬಾದ್​​ ಪೊಲೀಸರು ನಿರಾಕರಿಸಿದ್ದಾರೆ.
ಆಂಧ್ರಪ್ರದೇಶದ ರಾಜಮಂಡ್ರಿಗೆ ಹೈದರಾಬಾದ್‌ನಿಂದ ಐಟಿ ಉದ್ಯೋಗಿಗಳು ಇಂದು ಬೃಹತ್​ ಕಾರು ರ‍್ಯಾಲಿಯನ್ನು ನಡೆಸುವ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಸೆಕ್ಷನ್ 144 ಜಾರಿಯಲ್ಲಿರುವ ಕಾರಣ ನಾಲ್ಕಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿದೆ. ಈ ಕಾರಣ ರ‍್ಯಾಲಿಗೆ ಅನುಮತಿ ಕೊಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:World’s 2nd Pig Heart Transplantation; ಮಾನವನಿಗೆ ಹಂದಿ ಹೃದಯ ಕಸಿ ಯಶಸ್ವಿ..ಎರಡು ದಿನಗಳಲ್ಲಿ ಚೇತರಿಸಿಕೊಂಡ ರೋಗಿ!
“ತೆಲುಗು ದೇಶಂ ಪಕ್ಷದ (TDP) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಬಂಧನವಾಗಿದೆ. ಚಂದ್ರಬಾಬು ಅವರನ್ನು ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಐಟಿ ಉದ್ಯೋಗಿಗಳು ಹೈದರಾಬಾದ್‌ನಿಂದ ರಾಜಮಂಡ್ರಿಗೆ ಬೃಹತ್​ ಕಾರು ರ‍್ಯಾಲಿಯನ್ನು ಕೈಗೊಳ್ಳಲು ಚಿಂತನೆ ನಡೆಸಿದ್ದರು. ಈ ಮಾಹಿತಿ ತಿಳಿದ ಬೆನ್ನಲ್ಲೇ ಅವರಿಗೆ ಅನುಮತಿ ನಿರಾಕರಿಸಲಾಗಿದೆ. ವಿಜಯವಾಡ ನಗರದಲ್ಲಿಯೂ ಸೆಕ್ಷನ್ 144 ವಿಧಿಸಲಾಗಿದೆ” ಎಂದು ಜಿಲ್ಲಾ ಎಸಿಪಿ ರಮೇಶ್ ಹೇಳಿದ್ದಾರೆ,(ಏಜೆನ್ಸೀಸ್).
ಈ ಪ್ಲಾಟ್​ಫಾರಂನಲ್ಲಿ ಹೊಸ ದಾಖಲೆ ಬರೆದ ನಟ ವಿಜಯ್ ದೇವರಕೊಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fifteen =
Remember me
