ನವದೆಹಲಿ:ಫುಡ್​ ಆರ್ಡರ್​ ಮತ್ತು ಅದನ್ನು ಡಿಲಿವರಿ ಮಾಡುವ ಮುಂಚೂಣಿ ಕಂಪನಿಗಳಲ್ಲಿ ಸ್ವಿಗ್ಗಿ ಕೂಡ ಒಂದು. ನಿನ್ನೆ ವಿಶ್ವ ಇಡ್ಲಿ ದಿನದ ಹಿನ್ನೆಲೆಯಲ್ಲಿ ಸ್ವಿಗ್ಗಿ ಕಂಪನಿ ತನ್ನ ಅಂಕಿ-ಅಂಶಗಳ ವಿಶ್ಲೇಷಣೆಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಇಡ್ಲಿಗಿರುವ ಬೇಡಿಕೆಯನ್ನು ನೋಡಿದರೆ ಎಲ್ಲರ ಹುಬ್ಬೇರುವುದು ಗ್ಯಾರೆಂಟಿ.
ವರದಿಯ ಪ್ರಕಾರ ಕಳೆದ ವರ್ಷದಲ್ಲಿ ಭಾರತದಲ್ಲಿ ಬರೋಬ್ಬರಿ 33 ಮಿಲಿಯನ್​ ಪ್ಲೇಟ್ಸ್​ ಇಡ್ಲಿಯನ್ನು ಸ್ವಿಗ್ಗಿಯಲ್ಲಿ ಆರ್ಡರ್​ ಮಾಡಲಾಗಿದೆ. ಇನ್ನೂ ಅಚ್ಚರಿಯ ಸಂಗತಿ ಏನೆಂದರೆ, ಇಡ್ಲಿ ಪ್ರಿಯನೊಬ್ಬ ಕಳೆದ 12 ತಿಂಗಳಲ್ಲಿ ಇಡ್ಲಿಗಾಗಿಯೇ ಬರೋಬ್ಬರಿ 6 ಲಕ್ಷ ರೂ. ಖರ್ಚು ಮಾಡಿದ್ದಾರೆ. ನಂಬಲು ಅಸಾಧ್ಯವಾದರೂ ಇದು ಸತ್ಯ ಸಂಗತಿಯಾಗಿದೆ.
ಇದನ್ನೂ ಓದಿ:ಬಾಲಿವುಡ್​ನಲ್ಲಿ ಮೌಲ್ಯ, ಶಿಸ್ತು ಇಲ್ಲ … ಕಾಜಲ್​ ಅಗರ್​ವಾಲ್ ಅಭಿಪ್ರಾಯ
ಸ್ವಿಗ್ಗಿ ಹಂಚಿಕೊಂಡಿರುವ ಅಂಕಿ-ಅಂಶಗಳ ಪ್ರಕಾರ ಒಂದು ವರ್ಷದಲ್ಲಿ 33 ಮಿಲಿಯನ್​ ಪ್ಲೇಟ್​ ಇಡ್ಲಿ ಮಾರಾಟವಾಗಿರುವುದರಿಂದ ಇಡ್ಲಿಯನ್ನು ಪ್ರಖ್ಯಾತ ಖಾದ್ಯ ಎಂದು ಪರಿಗಣಿಸಲಾಗಿದೆ. ಬೆಂಗಳೂರು, ಹೈದರಾಬಾದ್​ ಮತ್ತು ಚೆನ್ನೈ ಅತಿ ಹೆಚ್ಚು ಇಡ್ಲಿ ಆರ್ಡರ್​ ಮಾಡಿದ ಅಗ್ರ ಮೂರು ನಗರಗಳಾಗಿವೆ. ಮುಂಬೈ, ಕೊಯಮತ್ತೂರು, ಪುಣೆ, ವೈಜಾಗ್​, ದೆಹಲಿ, ಕೊಲ್ಕತ್ತ ಮತ್ತು ಕೊಚ್ಚಿ ನಂತರ ಸ್ಥಾನಗಳಲ್ಲಿವೆ.
ಇಡ್ಲಿಯ ಪ್ರಖ್ಯಾತಿ ಎಷ್ಟರಮಟ್ಟಿಗೆ ಇದೆ ಅಂದರೆ, ಹೈದರಾಬಾದ್​ ಮೂಲದ ಇಡ್ಲಿ ಪ್ರಿಯ ಅದರ ಪ್ರಖ್ಯಾತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹೈದರಾಬಾದ್​ ಮೂಲದ ವ್ಯಕ್ತಿ ಅತಿ ಹೆಚ್ಚು ಆರ್ಡರ್​ ಮಾಡಿದ್ದು, ಕೇವಲ 1 ವರ್ಷದಲ್ಲಿ ಇಡ್ಲಿಗಾಗಿ ಬರೋಬ್ಬರಿ 6 ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದಾರೆ. ತಾನು ಪ್ರಯಾಣಿಸಿದ ವಿವಿಧ ಸ್ಥಳಗಳಲ್ಲೂ ಇಡ್ಲಿಯನ್ನು ಆರ್ಡರ್​ ಮಾಡಿದ್ದು, ಒಟ್ಟು 8,428 ಇಡ್ಲಿ ಪ್ಲೇಟ್​ಗಳನ್ನು ಒಂದು ವರ್ಷದಲ್ಲಿ ಆರ್ಡರ್​ ಮಾಡಿದ್ದಾರೆ. ಬೆಂಗಳೂರು ಮತ್ತು ಚೆನ್ನೈಗೆ ಪ್ರಯಾಣಿಸುವಾಗ ಇಡ್ಲಿಯನ್ನು ಆರ್ಡರ್​ ಮಾಡಿದ್ದು, ಸ್ನೇಹಿತರು ಮತ್ತು ಕುಟುಂಬದವರಿಗೂ ತರಿಸಿಕೊಟ್ಟಿದ್ದಾರೆ.
ಆರ್ಡರ್ ಮಾಡುವುದರ ಹೊರತಾಗಿ, ಜನರು ಹೆಚ್ಚು ಇಡ್ಲಿಯನ್ನು ಆರ್ಡರ್‌ ಮಾಡಿ ಸಮಯ. ಇಡ್ಲಿಯ ನೆಚ್ಚಿನ ಬಗೆಗಳು ಮತ್ತು ಮುಂತಾದವುಗಳನ್ನು ಸಹ Swggiy ವಿಶ್ಲೇಷಿಸಿದೆ. ವರದಿಯ ಪ್ರಕಾರ ಅತಿ ಹೆಚ್ಚು ಇಡ್ಲಿಯನ್ನು ಆರ್ಡರ್​ ಮಾಡಿದ ಅಗ್ರ ಐದು ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಹೈದರಾಬಾದ್​, ಮೂರನೇ ಸ್ಥಾನದಲ್ಲಿ ಚೆನ್ನೈ, ನಾಲ್ಕು ಮುಂಬೈ ಮತ್ತು ಐದನೇ ಸ್ಥಾನದಲ್ಲಿ ಕೊಯಮತ್ತೂರು ಇದೆ.
ಇದನ್ನೂ ಓದಿ:ಬೆಂಗಳೂರಲ್ಲಿ ನೇಪಾಳಿ ಗ್ಯಾಂಗ್ ಸೆರೆ; 35.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ
ಇಡ್ಲಿಯನ್ನು ಆರ್ಡರ್ ಮಾಡುವ ಅತ್ಯಂತ ಜನಪ್ರಿಯ ಸಮಯ ಯಾವುದೆಂದರೆ ಬೆಳಿಗ್ಗೆ 8 ರಿಂದ 10 ರವರೆಗೆ ಮತ್ತು ಚೆನ್ನೈ, ಹೈದರಾಬಾದ್, ಬೆಂಗಳೂರು, ಕೊಯಮತ್ತೂರು ಮತ್ತು ಮುಂಬೈನ ಜನರು ರಾತ್ರಿಯ ಊಟಕ್ಕೂ ತಮ್ಮ ತಟ್ಟೆಯಲ್ಲಿ ಇಡ್ಲಿಯನ್ನು ಇಷ್ಟಪಡುತ್ತಾರೆ. ಬೆಂಗಳೂರಿಗರಿಗೆ ರವೆ ಇಡ್ಲಿ, ಚೆನ್ನೈ ಮಂದಿಗೆ ಘೀ ಪೋಡಿ ಇಡ್ಲಿ, ಹೈದರಾಬಾದ್​ ಮಂದಿಗೆ ಕರಂಪೋಡಿ ಘೀ ಇಡ್ಲಿ ಮತ್ತು ಮುಂಬೈ ಮಂದಿಗೆ ಇಡ್ಲಿ ವಡಾ ನೆಚ್ಚಿನ ಇಡ್ಲಿ ಬಗೆಗಳಾಗಿವೆ.
ಆದಾಗ್ಯೂ ಇಡ್ಲಿ ಇಷ್ಟೊಂದು ಆರ್ಡರ್‌ಗಳು ಮತ್ತು ಎಲ್ಲರ ಪ್ರೀತಿಯನ್ನು ಗಳಿಸಿದರೂ ಇಡ್ಲಿ ಮಾತ್ರ ಸ್ವಿಗ್ಗಿಯಲ್ಲಿ ಅಗ್ರ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ, ಸ್ವಿಗ್ಗಿಯ ಅಂಕಿ-ಅಂಶಗಳ ಪ್ರಕಾರ, ಮಸಾಲಾ ದೋಸೆಯ ನಂತರ ಇಡ್ಲಿ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಉಪಹಾರವಾಗಿದೆ.(ಏಜೆನ್ಸೀಸ್​)
ಐಶ್ವರ್ಯಾ ಮನೆ ಬಳಿಕ ನಟ ವಿಜಯ್​ ನಿವಾಸದಲ್ಲೂ ಕಳ್ಳತನ: ಮನೆಗೆಲಸದಾಕೆ ವಿರುದ್ಧ ದೂರು

BJPಯಿಂದ ಜೆಡಿಎಸ್​ಗೆ ಮರಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ; ಪಕ್ಷಕ್ಕೆ ಬರಮಾಡಿಕೊಂಡ ಎಚ್​ಡಿಕೆ

ಶ್ರೀ ರಾಮನ ತೊಡೆ ಏರಿ ಹೂಮಾಲೆ ಹಾಕಿದ್ದಕ್ಕೆ ಕ್ಷಮೆಯಾಚಿಸಿದ ಬಿಜೆಪಿ ಶಾಸಕ

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:five × five =
Remember me
