ಹೈದರಾಬಾದ್​​:ಗಂಡ-ಹೆಂಡತಿಯ ಸಂಬಂಧ ಸುಂದರವಾದ ಬಂಧವಾಗಿದೆ. ಆದರೆ ಈ ಸಂಬಂಧದಲ್ಲಿ ಕೊಂಚ ವ್ಯತ್ಯಾಸವಾದರು ಸಂಸಾರವೇ ಬಿದಿಗೆ ಬರುತ್ತದೆ. ಹೀಗೆ ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಫೇಸ್‌ಬುಕ್​​ ಲೈವ್​​ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಹೈದರಾಬಾದ್ ಮೂಲದ ಸನಾ( 32) ಮೃತ ಮಹಿಳೆ. ಸನಾ ನನ್ನ ಗಂಡನಿಗೆ ವಿವಾಹೇತರ ಸಂಬಂಧವಿದೆ ಎಂದು ಆರೋಪಿಸಿ ಫೇಸ್‌ಬುಕ್ ಲೈವ್‌ನಲ್ಲೇ ಆತ್ಮಹತ್ಯೆಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಟಾಲಿವುಡ್​ ನಿರ್ಮಾಪಕನ ಕಾಲ್​ ಲೀಸ್ಟ್​ ರಹಸ್ಯ: ನಟಿ ಆಶು ರೆಡ್ಡಿಗೆ ಎದುರಾಯ್ತು ಭಾರೀ ಸಂಕಷ್ಟ
ಕಳೆದ 5 ವರ್ಷಗಳ ಹಿಂದೆ ಸನಾ ತನ್ನ ಶಾಲಾ ಸಹಪಾಠಿಯಾಗಿದ್ದ ಹೇಮಂತ್‌ ಎನ್ನುವವರನ್ನು ಪ್ರಿತಿಸಿ ವಿವಾಹವಾಗಿದ್ದರು. ಆ ಸಮಯದಲ್ಲಿ ಹೇಮಂತ್ ನಿರುದ್ಯೋಗಿಯಾಗಿದ್ದರು. ಸನಾ ಆಗ ದೆಹಲಿಯ ಏರ್‌ಲೈನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ವಿವಾಹದ ಬಳಿಕ ಹೇಮಂತ್‌ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದರು. ಇದೇ ಕಾರಣದಿಂದ ಬೇಸತ್ತು ಹೋಗಿದ್ದ ಸನಾ ಫೇಸ್​​​ಬುಕ್‌ ಲೈವ್‌ ನಲ್ಲೇ ಸನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವೇಳೆ ಅವರು ಗಂಡನ ವಿರುದ್ಧ ಕಿರುಕುಳದ ಆರೋಪವನ್ನು ಮಾಡಿದ್ದಾರೆ. ಸನಾ ಮನೆಯವರು ಆಕೆಯ ಆತ್ಮಹತ್ಯೆಗೆ ಹೇಮಂತ್ ಕಾರಣ ಎಂದು ಆರೋಪಿಸಿದ್ದಾರೆ.  ಸಂತ್ರಸ್ತೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೇಸ್​ಬುಕ್​ ಸ್ನೇಹಿತನ ಮುಂದೆ ಬೆತ್ತಲಾದ ಯುವತಿಯ ಬಾಳಲ್ಲಿ ಆವರಿಸಿದ ಕತ್ತಲು! ಸಿಗಲಿಲ್ಲ ಜೂ. 14ರ ಖುಷಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
