ಹೈದರಾಬಾದ್​:ಹೈದರಾಬಾದ್​ನಲ್ಲಿ ಪದೇಪದೆ ಯುವತಿಯರ ನಾಪತ್ತೆ ಪ್ರಕರಣಗಳು ದಾಖಲಾಗುತ್ತಿರುವುದು ಪೊಲೀಸರಿಗೆ ತಲೆನೋವಿನ ಸಂಗತಿಯಾಗಿದ್ದು, ಜನಸಾಮಾನ್ಯರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಇದೀಗ ಮತ್ತೆ ಮೂವರು ಯುವತಿಯರು ದಿಢೀರ್​ ಕಾಣೆಯಾಗಿರುವುದಾಗಿ ವರದಿಯಾಗಿದೆ.
ಜುಬಿಲಿ ಹಿಲ್ಸ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದಾಳೆ. ಯುವತಿಯ ಹೆಸರು ಸುನಿತಾ ಭವಾನಿ (21). ಈಕೆ ವೆಂಕಟಗಿರಿ ವಾಟರ್​ ಟ್ಯಾಂಕ್​ ಬಳಿ ವಾಸವಿದ್ದಳು. ಜೂನಿಯರ್​ ಆರ್ಟಿಸ್ಟ್​ ಆಗಿ ಕೆಲಸ ಮಾಡುತ್ತಿದ್ದಳು. ಮೇ 27ರ ರಾತ್ರಿ ಭವಾನಿ ತಾಯಿ ಮಣಿ ಹೊಸ ಬಾಡಿಗೆ ಮನೆಯನ್ನು ಕ್ಲೀನ್​ ಮಾಡಲು ಹೋದಾಗ ತಾಯಿಗೆ ಕರೆ ಮಾಡಿದ ಭವಾನಿ ಜೂನಿಯರ್​ ಆರ್ಟಿಸ್ಟ್​ ಆಗಿ ಒಂದು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಈಗಲೇ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾಳೆ. ಮನೆಗೆ ಹಿಂದಿರುತ್ತೇನೆಂದು ಹೇಳಿದ ಮಗಳು ಬರಲೇ ಇಲ್ಲ ಎಂದು ಆಕೆಯ ತಾಯಿ ಇದೀಗ ಜುಬಿಲಿ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾಳೆ. ಪತ್ತೆಯಾದಲ್ಲಿ ಈ ನಂಬರ್​ಗೆ 9490616589ಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಜುಬಿಲಿ ಹಿಲ್ಸ್​ ಠಾಣಾ ವ್ಯಾಪ್ತಿಯಲ್ಲೇ ಅನುಮಾನಾಸ್ಪದವಾಗಿ ಕಾಣೆಯಾಗಿದ್ದಾಳೆ. ಕಮ್ಮೊಲ್ಲಾ ಸಿರಿಶಾ (21) ಯುವತಿಯ ಹೆಸರು. ಈಕೆ ಅಂಬೇಡ್ಕರ್​ ನಗರದ ನಿವಾಸಿ. 27ರಂದು ದಿನಸಿ ತರಲೆಂದು ಹತ್ತಿರದ ಅಂಗಡಿಗೆ ತೆರಳಿದ ಯುವತಿ ಮರಳಿ ಬಂದಿಲ್ಲ. ಸಾಕಷ್ಟು ಹುಡುಕಾಟ ನಡೆಸಿ, ಸಂಬಂಧಿಕರ ಮನೆಗೂ ಕರೆ ಮಾಡಿ ಪ್ರಶ್ನಿಸಿದರೂ ಯಾವುದೇ ಸುಳಿವು ಸಿಗದಿದ್ದಾಗ ಜುಬಿಲಿ ಹಿಲ್ಸ್​ನಲ್ಲಿ ಯುವತಿಯ ತಂದೆ ಹೋಗಿ ದೂರು ನೀಡಿದ್ದಾರೆ. ಪತ್ತೆಯಾದಲ್ಲಿ ಈ ನಂಬರ್​ಗೆ 9885287323 ಕರೆ ಮಾಡಲು ಮನವಿ ಮಾಡಿದ್ದಾರೆ.
ಸಂಬಂಧಿಕರ ಮನೆಗೆ ಬಂದು ಯುವತಿ ಕಾಣೆಸಂಬಂಧಿಕರ ಮನೆಗೆ ಬಂದ ಯುವತಿಯೊಬ್ಬಳು ದಿಢೀರ್​ ನಾಪತ್ತೆ ಆಗಿರುವ ಘಟನೆ ಮಲ್ಕಜ್​ಗಿರಿಯಲ್ಲಿ ನಡೆದಿದೆ. ಪೊಲೀಸ್​ ಮೂಲಗಳ ಜಯಂತ್​ ಎಂಬಾತ ತನ್ನ ಮಗಳು ಅನುಷ್ಕಾಳನ್ನು (18) ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗಂಗಾಧರ ಗ್ರಾಮದಿಂದ ಪ ಮಲ್ಕಜ್​ಗಿರಿಯ ಮಾರುತಿನಗರದ ಸಂಬಂಧಿಕರ ಮನೆಗೆ ಕರೆತಂದಿದ್ದ. ಮೇ 27ರಂದು ಬೆಳಗ್ಗೆ ಮನೆಯಿಂದ ಹೊರ ಹೋದ ಅನುಷ್ಕಾ ಮರಳಿ ಬಂದಿಲ್ಲ. ಈ ಸಂಬಂಧ ದೂರು ದಾಖಲಾಗಿದೆ.(ಏಜೆನ್ಸೀಸ್​)
ನನ್ನದು ನಿನ್ನ ಬಾಲ್​ಗಳಿಗಿಂತ ದೊಡ್ಡದು! ಅಶ್ಲೀಲ ಪ್ರಶ್ನೆ ಕೇಳಿದವನಿಗೆ ನಟಿಯ ಖಡಕ್​ ಉತ್ತರ

ನಗರವನ್ನೇ ಬೆಚ್ಚಿಬೀಳಿಸಿದ ನಾಲ್ವರು ಮಹಿಳೆಯರ ದಿಢೀರ್ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
