ಹೈದರಾಬಾದ್​:ಹಣಕ್ಕಾಗಿ ಮನುಷ್ಯ ಯಾವ ಮಟ್ಟಕ್ಕಾದರೂ ಇಳಿಯುತ್ತಾನೆ ಎಂಬುದಕ್ಕೆ ಈ ಘಟನೆ ತಾಜಾ ನಿದರ್ಶನವಾಗಿದೆ. ಅಲ್ಲದೆ, ಹಣದ ಮುಂದೆ ಸಂಬಂಧಗಳೆಲ್ಲ ಗೌಣ ಎಂಬುದನ್ನು ಈ ಘಟನೆ ನಿರೂಪಿಸಿದೆ.
ಹಣಕ್ಕಾಗಿ ಸಂಬಂಧಿಕರ ಮಗಳನ್ನೇ ಅಪಹರಿಸಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಕೃಷ್ಣ ಮತ್ತು ಸುಜಾತಾ ದಂಪತಿ ಹಲವು ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದಾರೆ. ದಂಪತಿಗೆ ಶಿರಿಷಾ (12) ಹೆಸರಿನ ಮಗಳಿದ್ದು, 7ನೇ ತರಗತಿ ಓದುತ್ತಿದ್ದಾಳೆ. ಏನಾಯಿತು ಅಂದರೆ, ಈ ತಿಂಗಳ 12ರಂದು ಶಿರಿಷಾ ದಿಢೀರನೇ ನಾಪತ್ತೆಯಾದಳು. ಯಾವಾಗ ಮಗಳು ಇದ್ದಕ್ಕಿದ್ದಂತೆ ಕಾಣೆಯಾದಳೋ ಆಕೆಯ ಬಗ್ಗೆ ಕೃಷ್ಣ ಮತ್ತು ಸುಜಾತಾ ಸಂಬಂಧಿಕರನೆಲ್ಲ ವಿಚಾರಿಸಿದ್ದಾರೆ. ಅಲ್ಲದೆ, ತಾವು ವಾಸವಿದ್ದ ಸುತ್ತಮುತ್ತಲ ಪ್ರದೇಶವನ್ನು ಸಹ ಹುಡುಕಾಡಿದ್ದಾರೆ. ಪರಿಚಿತರ ಮನೆಯಲ್ಲೂ ಶೋಧ ಕಾರ್ಯ ನಡೆಸಿದ್ದಾರೆ. ಸುಮಾರು 10 ದಿನಗಳ ಹುಡುಕಾಡಿದರೂ ಯಾವುದೇ ಪ್ರಯೋಜನ ಆಗದಿದ್ದಾಗ ಕೊನೆಯ ಆಯ್ಕೆ ಎಂಬಂತೆ ಬಂಜಾರ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ವಿಶೇಷ ವರದಿ | ಬೂಟು ಕಾಲಿನಿಂದ ಮಗುವಿಗೆ ಒದ್ದದ್ದು ಯಾಕೆ ಎಂದು ಕೇಳಿದ್ದಕ್ಕೆ ಶಿಕ್ಷಣಾಧಿಕಾರಿಗೆ ದೂರು ನೀಡಿ ಎಂದ ದೈಹಿಕ ಶಿಕ್ಷಕ!
ಪಾಲಕರ ದೂರಿನ ಮೇರೆಗೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಹತ್ತಿರದ ಸಂಬಂಧಿಕರು ತಮ್ಮ ಮಗಳನ್ನು ಅಪಹರಿಸಿದ್ದಾರೆ ಎಂದು ಪಾಲಕರು ಆರೋಪಿಸಿದ್ದು, ಆ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಹಣಕ್ಕಾಗಿ ಪತ್ನಿಯ ಸಂಬಂಧಿಕರು ಮಗಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದ ಸಂಬಂಧಿಕರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಆಧಾರದ ಮೇಲೆ ಬಾಲಕಿ ಎಲ್ಲಿದ್ದಾಳೆಂದು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಹೇಗಾದರೂ ಮಗಳನ್ನು ಪತ್ತೆ ಮಾಡಿ ಒಪ್ಪಿಸುವಂತೆ ಪೋಷಕರು ಮನವಿ ಮಾಡಿದ್ದು, ತಾವು ಆತಂಕದಲ್ಲಿರುವುದಾಗಿ ಹೇಳಿದ್ದಾರೆ. ಆದರೆ, ಸ್ವಂತ ಸಂಬಂಧಿಕರೇ ಹಣಕ್ಕಾಗಿ ಕಿಡ್ನಾಪ್ ಮಾಡಿದ್ದಾರೆ ಎಂಬ ತಂದೆಯ ಆರೋಪ ಇದೀಗ ಭಾರೀ ಸಂಚಲನ ಮೂಡಿಸಿದೆ.
ಹೈದರಾಬಾದ್‌ನಲ್ಲಿ ಇತ್ತೀಚೆಗೆ ಹಲವೆಡೆ ಮಕ್ಕಳ ಅಪಹರಣ ನಡೆಯುತ್ತಿದೆ. ಹಣಕ್ಕಾಗಿ ಮಕ್ಕಳನ್ನು ಅಪಹರಿಸುವ ಘಟನೆಗಳು ನಡೆಯುತ್ತಿವೆ. ಆದರೆ ಈ ಪ್ರಕರಣದಲ್ಲಿ ಸ್ವಂತ ಸಂಬಂಧಿಕರೇ ಮಗಳನ್ನು ಅಪಹರಿಸಲು ಕಾರಣವೇನು? ತಂದೆಯ ಆರೋಪ ನಿಜವೇ? ಇದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.(ಏಜೆನ್ಸೀಸ್​)
ನನ್ನನ್ನು ಶೂರ್ಪನಖಿ ಎಂದ ಮೋದಿ ವಿರುದ್ಧ ಮಾನನಷ್ಟ ಕೇಸ್‌ ಹಾಕ್ತೀನಿ: ರೇಣುಕಾ ಚೌಧರಿ

ಕಾಂಗ್ರೆಸ್ ಶಾಸಕರ ಅಭಿಮಾನಿಗೆ ಸಿದ್ದರಾಮಯ್ಯ ಕಪಾಳಮೋಕ್ಷ ಮಾಡಿದ್ದು ಯಾಕೆ?

ವಿಶೇಷ ವರದಿ | ಬೂಟು ಕಾಲಿನಿಂದ ಮಗುವಿಗೆ ಒದ್ದದ್ದು ಯಾಕೆ ಎಂದು ಕೇಳಿದ್ದಕ್ಕೆ ಶಿಕ್ಷಣಾಧಿಕಾರಿಗೆ ದೂರು ನೀಡಿ ಎಂದ ದೈಹಿಕ ಶಿಕ್ಷಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 17 =
Remember me
