ಹೈದರಾಬಾದ್​:ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ಗೇಮಿಂಗ್​ ಗೀಳಿಗೆ ಮಕ್ಕಳು ಹೆಚ್ಚು ಬಲಿಯಾಗುತ್ತಿದ್ದು, ಅವರ ತಂದೆ-ತಾಯಿಗಳ ಬ್ಯಾಂಕ್​ ಖಾತೆಯಿಂದ ಅಪಾರ ಪ್ರಮಾಣದ ಹಣವನ್ನು ಹಾಳು ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಇದೀಗ ಪ್ರಕರಣ ಒಂದರಲ್ಲಿ ಬಾಲಕನೋರ್ವ ಆನ್​ಲೈನ್​ನಲ್ಲಿ ಗೇಮ್​ ಆಡುವ ವೇಳೆ ತನ್ನ ತಾಯಿಯ ಬ್ಯಾಂಕ್​ ಖಾತೆಯಿಂದ 36 ಲಕ್ಷ ರೂ. ಅನ್ನು ಕಳೆದಿರುವುದು ಬೆಳಕಿಗೆ ಬಂದಿದೆ. ಘಟನೆಯೂ ತೆಲಂಗಾಣದ ಹೈದರಾಬಾದಿನ ಅಂಬರ್​ಪೇಟ್​ನಲ್ಲಿ ನಡೆದಿದೆ.
11ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕನೋರ್ವ ತನ್ನ ತಾಯಿಯ ಮೊಬೈಲ್​ ಫೋನ್​ನಲ್ಲಿ ಫ್ರೀಫೈರ್​ ಗೇಮ್​ಅನ್ನು ಡೌನ್​ಲೋಡ್​ ಮಾಡಿ ಆಟ ಆಡಲು ಶುರು ಮಾಡಿದ್ದಾನೆ. ಆಟ ಆಡುವುದರಲ್ಲಿ ತಲ್ಲೀಣನಾಗಿದ್ದ, ಬಳಿಕ ಅಪ್​​ಗ್ರೇಡ್​ ಆಗಲು ಹಣ ಪಾವತಿಸುವಂತೆ ಸೂಚಿಸಿದಾಗ ಆತ ಮೊತ್ತವನ್ನು ಸಂದಾಯ ಮಾಡುತ್ತ ಆಟ ಮುಂದುವರೆಸಿದ್ದಾನೆ. ಕೊನೆಯದಾಗಿ ತನ್ನ ತಾಯಿಯ ಎರಡು ಬ್ಯಾಂಕ್​ ಖಾತೆಗಳಿಂದ 36 ಲಕ್ಷ ರೂಪಾಯಿಯನ್ನು ಕಳೆದಿದ್ದಾನೆ.
ಕೆಲ ದಿನಗಳ ಬಳಿಕ ಬಾಲಕನ ತಾಯಿಯೂ ಖಾತೆಯಿಂದ ಹಣ ಬಿಡಿಸಲು ಹೋದಾಗ ಕೃತ್ಯ ಬೆಳಕಿಗೆ ಬಂದಿದ್ದು, ಈ ಬಗ್ಗೆ ಹೈದರಾಬಾದ್​ ಸೈಬರ್ ಕ್ರೈಂ​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಒಡಿಶಾ ರೈಲು ದುರಂತದ ಬೆನ್ನಲ್ಲೇ ಮತ್ತೊಂದು ಅವಘಡ; ಗೂಡ್ಸ್​ ವ್ಯಾಗನ್​ನಲ್ಲಿ ಬೆಂಕಿ
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್​ ಸೈಬರ್​ ಕ್ರೈಂ ಅಧಿಕಾರಿಯೊಬ್ಬರು ಹುಡುಗ ಮೊದಲಿಗೆ ಫ್ರೀಫೈರ್​ ಗೇಮ್​ಅನ್ನು ತನ್ನ ತಾಯಿಯ ಮೊಬೈಲ್​ನಲ್ಲಿ ಡೌನ್​ಲೋಡ್​ ಮಾಡಿ ಆಟವಾಡಲು ಶುರು ಮಾಡಿದ್ದಾನೆ. ಗೇಮಿಂಗ್​ ಲೆವೆಲ್​ ಹೆಚ್ಚಾಗುತ್ತ ಹೋದಂತೆ ಹಣ ಕಟ್ಟಿ ಅಪ್​ಗ್ರೇಡ್​ ಆಗುವಂತೆ ಆ್ಯಪ್​ನಲ್ಲಿ ಸೂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಟದಲ್ಲಿ ತಲ್ಲೀಣನಾಗಿದ್ದ ಬಾಲಕ ಕೊನೆಯದಾಗಿ 36 ಲಕ್ಷ ರೂಗಳನ್ನು ಗೇಮ್​ ಆಡುವ ಸಲುವಾಗಿ ಕಳೆದಿದ್ದಾನೆ. ಮಹಿಳೆಯ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಈ ರೀತಿಯ ಅಪ್ಲಿಕೇಷನ್​ಗಳನ್ನು ಬ್ಯಾನ್​ ಮಾಡುವಂತೆ ದೂರುದಾರರು ಒತ್ತಾಯಿಸಿದ್ದಾರೆ. ಬಾಲಕನ ತಂದೆ ಪೊಲೀಸ್​ ಅಧಿಕಾರಿಯಾಗಿದ್ದರು ಅವರ ನಿಧನದ ನಂತರ ಬಂದಿದ್ದ ಪರಿಹಾರ ಮೊತ್ತ ಇದಾಗಿದೆ ಎಂದು ಸೈಬರ್​ ಕ್ರೈಂ ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − twelve =
Remember me
