ನವದೆಹಲಿ:ಐಪಿಎಲ್​ 2024ರ ಮೊದಲ ತಂಡವಾಗಿ ಮುಂಬೈ ಇಂಡಿಯನ್ಸ್ ಎಲಿಮಿನೇಟ್ ಆಗಿದೆ. 57ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸುತ್ತಿದ್ದಂತೆ 5 ಬಾರಿಯ ಚಾಂಪಿಯನ್ ಮುಂಬೈ, ಅಧಿಕೃತವಾಗಿ ಪ್ಲೇಆಫ್​ ರೇಸ್​​ನಿಂದ ಹೊರಬಿದ್ದಿದೆ.
ಇದನ್ನೂ ಓದಿ:ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದು ರಾತ್ರಿ ಕಳೆದ ರೇವಣ್ಣ: ಹೀಗಿದೆ ರಾಜಕಾರಣಿಯ ಸೆರೆವಾಸ..
ಪ್ರಸ್ತುತ 12 ಪಂದ್ಯಗಳಿಂದ 8 ಅಂಕಗಳನ್ನು ಸಂಪಾದಿಸಿ ಒಂಬತ್ತನೇ ಸ್ಥಾನದಲ್ಲಿರುವ ಎಂಐ, ತನ್ನ ಕೊನೆಯ 2 ಪಂದ್ಯಗಳನ್ನು ಗೆದ್ದರೂ 12 ಅಂಕ ಪಡೆಯಲು ಮಾತ್ರ ಸಾಧ್ಯ. ಈ ಅಂಕಗಳು ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹಾರ್ದಿಕ್ ನೇತೃತ್ವದ ಮುಂಬೈ, ತನ್ನ ಉಳಿದ 2 ಪಂದ್ಯಗಳಲ್ಲಿ ಮೇ 11ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮೇ 17ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಈ ಎರಡೂ ಪಂದ್ಯಗಳು ಸಹ ಎಂಐ ಪಾಲಿಗೆ ಔಪಚಾರಿಕವಷ್ಟೆ.
ಮುಂಬೈ ಹೊರ ಬಿದ್ದಿದ್ದೇಗೆ?:ಪ್ರಸ್ತುತ ಮುಂಬೈ ಜೊತೆಗೆ ಪಂಜಾಬ್, ಆರ್​ಸಿಬಿ, ಜಿಟಿ ತಂಡಗಳು 8 ಅಂಕ ಪಡೆದಿವೆ. ಆದರೆ, ಮುಂಬೈ ಮಾತ್ರವೇ ಪ್ಲೇಆಫ್​ ರೇಸ್​ನಿಂದ ಹೊರ ಬೀಳಲು ಕಾರಣವೇನು ಎಂದು ಮುಂಬೈ ಫ್ಯಾನ್ಸ್​ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎರಡು ತಂಡಗಳು ತಲಾ 16 ಅಂಕ ಸಂಪಾದಿಸಿವೆ. ಇದೀಗ 12 ಪಂದ್ಯಗಳಿಂದ ಎಸ್​ಆರ್​​ಎಚ್ 7ರಲ್ಲಿ ಗೆದ್ದು 14 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. ಆದರೆ ಎಂಐ ಉಳಿದ ಎರಡು ಪಂದ್ಯಗಳಲ್ಲಿ ಗೆದ್ದರೂ 12 ಅಂಕ ಮಾತ್ರ ಪಡೆಯಲಿದೆ.
ತಲಾ 12 ಅಂಕ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ಮೇ 14ರಂದು ಪಂದ್ಯ ನಡೆಯಲಿದೆ. ಈ ಫೈಟ್​​ನಲ್ಲಿ ಯಾವುದೇ ತಂಡ ಗೆದ್ದರೂ 14 ಅಂಕ ಪಡೆಯಲಿದೆ. ಒಂದು ವೇಳೆ ಮಳೆ ಅಡಚಣೆಯಿಂದ ಪಂದ್ಯ ರದ್ದುಗೊಂಡರೂ ತಲಾ 1 ಅಂಕ ಪಡೆಯಲಿವೆ. ಹೀಗಾಗಿ 2 ಗೆದ್ದರೂ ಮುಂಬೈ 12 ಅಂಕಕ್ಕೆ ಸೀಮಿತಗೊಳ್ಳಲಿದ್ದು, ಅಧಿಕೃತವಾಗಿ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿದೆ.
ಪಂಜಾಬ್, ಆರ್​ಸಿಬಿ, ಗುಜರಾತ್ ತಲಾ 8 ಅಂಕ ಪಡೆದರೂ ಹೊರ ಬಿದ್ದಿಲ್ಲ ಏಕೆಂದರೆ, ಮೂರೂ ತಂಡಗಳು ಮುಂಬೈಗಿಂತ ಒಂದು ಕಡಿಮೆ ಪಂದ್ಯಗಳನ್ನಾಡಿವೆ. 11 ಪಂದ್ಯಗಳಲ್ಲಿ ಕಣಕ್ಕಿಳಿದಿವೆ. ಆದರೆ ಮುಂಬೈ 12 ಪಂದ್ಯಗಳನ್ನಾಡಿದೆ. ಪಿಬಿಕೆಎಸ್​, ಆರ್​ಸಿಬಿ, ಜಿಟಿ ಉಳಿದ 3 ಪಂದ್ಯಗಳಲ್ಲಿ ಗೆದ್ದರೆ 14 ಅಂಕ ಪಡೆದು ಪ್ಲೇಆಫ್ ಪ್ರವೇಶಿಸುವ ಅವಕಾಶ ಇದೆ. ಮೇ 9ರಂದು ಜರುಗುವ ಆರ್​ಸಿಬಿ vs ಪಂಜಾಬ್​ ಪಂದ್ಯದಲ್ಲಿ ಯಾವುದೇ ತಂಡ ಸೋತರೂ ಪ್ಲೇಆಫ್​ನಿಂದ ಹೊರಬೀಳಲಿದೆ.
ಅಧಿಕೃತವಾಗಿಲ್ಲ ಪ್ಲೇಆಫ್​ ತಂಡಗಳು:ಮಾರ್ಚ್​22 ರಂದು ಆರಂಭವಾದ ಐಪಿಎಲ್, ಮೇ 8ರ ತನಕ 57 ಪಂದ್ಯಗಳಾಗಿದೆ. ಆದರೆ ಇದುವರೆಗೂ ಯಾವೊಂದು ತಂಡವೂ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಿಲ್ಲ. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಲಾ 16 ಅಂಕ ಪಡೆದಿದ್ದರೂ ಫ್ಲೇಆಫ್​ಗೆ ಅಧಿಕೃತಗೊಂಡಿಲ್ಲ. ಈ ತಂಡಗಳು ಸಹ ಉಳಿದ ಎಲ್ಲಾ ಪಂದ್ಯಗಳಲ್ಲಿ ಸೋತರೆ, ಪ್ಲೇಆಫ್​ರೇಸ್​ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಏಕೆಂದರೆ ಈ ಎರಡು ತಂಡಗಳು ಅಲ್ಲದೆ, ಸಿಎಸ್​ಕೆ, ಚೆನ್ನೈ, ಡೆಲ್ಲಿ, ಲಕ್ನೋ ತಂಡಗಳಿಗೂ 16 ಅಂಕ ಪಡೆಯುವ ಅವಕಾಶ ಇದೆ. ಹಾಗಾಗಿ ಎಚ್ಚರಿಕೆಯಿಂದ ಆಟವಾಡಬೇಕಿದೆ.
ಪಾರದರ್ಶಕ ಟಾಪ್‌, ಸಣ್ಣ ಸ್ಕರ್ಟ್ ತೊಟ್ಟು ಯುವಕರ ನಿದ್ದೆಗೆಡಿಸಿದ ಜಾಹ್ನವಿ.. ಅಪ್ಸರೆಯಂತೆ ಕಂಡ ಶ್ರೀದೇವಿ ಪುತ್ರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
