ಹೈದರಾಬಾದ್:ಲಕ್ಕಿ ಡ್ರಾ ಎಂದರೆ ಅದೃಷ್ಟವಂತರಿಗೆ ಮಾತ್ರ ಒಳಿದು ಬರುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಹೈದರಾಬಾದ್ ಮಹಿಳೆಗೆ ಲಾಟರಿ ಮೂಲಕ 2 ಕೋಟಿ ರೂಪಾಯಿ ಹಣ ಸಿಕ್ಕಿದೆ.
ಯುಎಇ ಮೂಲದ ಮಹ್ಝೂಝ್ ಡ್ರಾ ಆಯೋಜಿಸಿದ್ದ ಲಾಟರಿಯಲ್ಲಿ ಹಮೇದಾ ಬೇಗಂ ಹಣ ಗೆದ್ದಿರುವ ಮಹಿಳೆಯಾಗಿದ್ದಾರೆ. ಲಾಟರಿಯ ಲಕ್ಕಿ ಡ್ರಾನಲ್ಲಿ ಅವರು 1 ಮಿಲಿಯನ್ ದಿರ್ಹಮ್ ಹಣ ಗಳಿಸಿದ್ದಾರೆ. ಅಂದರೆ 2, 22, 28,303 ರೂಪಾಯಿ ಗೆದ್ದಿದ್ದಾರೆ. ಏಪ್ರಿಲ್ 1 ರಂದು ನಡೆದ 122 ನೇ ಸಾಪ್ತಾಹಿಕ ಮಹ್ಝೂಜ್ ಡ್ರಾದಲ್ಲಿ ಆರು ವಿಜೇತ ಸಂಖ್ಯೆಗಳಲ್ಲಿ ಹಮೇದಾ ಬೇಗಂರ ಐದು ಸಂಖ್ಯೆ ಹೊಂದಿಕೆಯಾಯಿತು.
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲು; ಈ ತಟ್ಟೆಯಲ್ಲಿ ಎಷ್ಟು ಮೊಟ್ಟೆಗಳಿವೆ?
ಹಮೇದಾ ಬೇಗಂ ಅವರು ಕಳೆದ ಮೂರು ವರ್ಷಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಯಲ್ಲಿ ನೆಲೆಸಿದ್ದಾರೆ. ವೈದ್ಯಕೀಯ ಕೋಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಮೇದಾ ತನ್ನ ಟಿಕೆಟ್‌ಗೆ ಪ್ರಥಮ ಬಹುಮಾನ ಬಂದಿರುವುದನ್ನು ಕೇಳಿದ ನಂತರ ತನ್ನ ಸಂಪಾದನೆಯನ್ನು ತನ್ನ ಕುಟುಂಬದ ಭವಿಷ್ಯಕ್ಕಾಗಿ ಮತ್ತು ತನ್ನ ನಾಲ್ಕು ಮಕ್ಕಳ ಶಿಕ್ಷಣಕ್ಕಾಗಿ ಬಳಸಿಕೊಳ್ಳುವುದಾಗಿ ಹೇಳಿದರು.
ಈಜಲು ಹೋಗಿದ್ದ ನಾಲ್ವರು ಯುವಕರು ಘಟಪ್ರಭಾ ನದಿ ನೀರುಪಾಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + twenty =
Remember me
