ತೆಲಂಗಾಣ:ಪೊಲೀಸರು ಕರೊನಾ ಲಾಕ್​ಡೌನ್​ ವೇಳೆ ತಮ್ಮ ಕರ್ತವ್ಯ ಮಾಡುವುದರ ಜತೆ, ಲಾಕ್​ಡೌನ್​ನಿಂದ ಹೊಟ್ಟೆಬಟ್ಟೆಗಿಲ್ಲದೆ, ಕಷ್ಟಪಡುತ್ತಿರುವವರಿಗೂ ಸಹಾಯ ಮಾಡುತ್ತಿದ್ದಾರೆ. ಕೆಲಸವಿಲ್ಲದೆ, ಕೈಯಲ್ಲಿ ಹಣವೂ ಇಲ್ಲದೆ ಹಸಿವಿನಿಂದ ಕಂಗಾಲಾದ ಎಷ್ಟೋ ಜನರಿಗೆ ಪೊಲೀಸರು ಊಟ ನೀಡುತ್ತಿದ್ದಾರೆ.
ಈ ಮಧ್ಯೆ ತೆಲಂಗಾಣದ ರಾಚಕೊಂಡ ಪೊಲೀಸ್​ ಕಮಿಷನರೇಟ್​ ಕಚೇರಿ ಸುಮಾರು 41 ವೃದ್ಧಾಶ್ರಮಗಳು, ಅನಾಥಾಶ್ರಮಗಳು ಮತ್ತು ಅಂಗವಿಕಲರ ಆಶ್ರಯತಾಣಗಳನ್ನು ದತ್ತುಪಡೆದು, ಲಾಕ್​ಡೌನ್​ ಸಂದರ್ಭದಲ್ಲಿ ಅವರಿಗೆ ಊಟ ಮತ್ತಿತರ ಅಗತ್ಯಗಳನ್ನು ಪೂರೈಕೆ ಮಾಡುತ್ತಿದೆ.
ಪೊಲೀಸ್ ಕಮಿಷನರೇಟ್​ ಕಚೇರಿ ದತ್ತುಪಡೆದ ಎಲ್ಲ ವೃದ್ಧಾಶ್ರಮ, ಅನಾಥಾಶ್ರಮ, ಅಂಗವಿಕಲರ ಆಶ್ರಯ ತಾಣಗಳಿಗೆ ಎಲ್ಲ ರೀತಿಯ ರೇಷನ್​, ಅಲ್ಲಿನವರಿಗೆ ಬೇಕಾದ ಅಗತ್ಯ ವಸ್ತುಗಳು, ಔಷಧಗಳನ್ನು ಒದಗಿಸುತ್ತಿದೆ. ಪೊಲೀಸರ ಈ ಒಳ್ಳೆಯ ಕಾರ್ಯಕ್ಕೆ ಕೆಲವು ಎನ್​ಜಿಒಗಳೂ ಕೈ ಜೋಡಿಸಿವೆ.
ಲಾಕ್​ಡೌನ್​ ಇರುವುದರಿಂದ ಜನರಿಗೆ ಹೊರಗಡೆ ಹೋಗಲು ಆಗುತ್ತಿಲ್ಲ. ಅದರಲ್ಲೂ ವೃದ್ಧರು, ಅಂಗವಿಕಲರು ಮತ್ತೂ ಕಷ್ಟಪಡುವಂತಾಗಿದೆ. ವೃದ್ಧಾಶ್ರಮಗಳು, ಅನಾಥಾಲಯಗಳನ್ನು ನಡೆಸುವವರಿಗೂ ಅಗತ್ಯ ವಸ್ತುಗಳ ಸಂಗ್ರಹ ಕಷ್ಟವಾಗುತ್ತಿದೆ. ಹಾಗಾಗಿ ನಾವು ದತ್ತು ಪಡೆದಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)
ನಿಮ್ಮವರನ್ನು ಕರೆಯಿಸಿಕೊಳ್ಳಿ, ವಲಸೆ ಕಾರ್ಮಿಕರ ರಾಜ್ಯಗಳಿಗೆ ಮೊರೆಯಿಟ್ಟ ಮಹಾರಾಷ್ಟ್ರ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
