ಹೈದರಾಬಾದ್​:ತೆಲಂಗಾಣದ ಹೈದರಾಬಾದ್​ ಮಹಾನಗರ ಪಾಲಿಕೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಟಿಆರ್​ಎಸ್​ ಮತ್ತು ಬಿಜೆಪಿ ಪಕ್ಷಗಳು ಜನರಿಗೆ ಭಾರಿ ಭರವಸೆಗಳನ್ನು ನೀಡಲಾರಂಭಿಸಿವೆ. ಎರಡೂ ಪ್ರಮುಖ ಪಕ್ಷಗಳ ವತಿಯಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಭರಪೂರ ಕೊಡುಗೆಗಳನ್ನು ಜನರ ಮುಂದಿಡಲಾಗಿದೆ.
ಇದನ್ನೂ ಓದಿ:ಬಾಂಗ್ಲಾದೇಶಿ ಯುವತಿಯರಿಗೆ ಭಾರತದ ವ್ಯಕ್ತಿ ಫ್ರೀ ಡ್ರಗ್ಸ್​ ಕೊಡುತ್ತಿದ್ದದ್ದು ಯಾಕೆ? ಫ್ರೀ ಡ್ರಗ್ಸ್​ ಹಿಂದಿದೆ ದೊಡ್ಡ ಕಥೆ
ಬುಧವಾರದಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಟಿಆರ್​ಎಸ್​ ಪಕ್ಷವು, ನಗರದ ಜನರಿಗೆ ಉಚಿತ ನೀರು ಪೂರೈಕೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಈಗ ಅದಕ್ಕಿಂತ ನಾಲ್ಕು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಉಚಿತ ನೀರು, ಉಚಿತ ವಿದ್ಯುತ್​ ಮತ್ತು ಮಹಿಳೆಯರಿಗೆ ಉಚಿತವಾಗಿ ಸಾರಿಗೆ ಪ್ರಯಾಣವನ್ನು ಕೊಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ.
ನಗರದಲ್ಲಿ 100 ಯುನಿಟ್​ ತನಕ ಉಚಿತ ಕರೆಂಟ್​, ನಗರ ಸಾರಿಗೆ ಮತ್ತು ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಪ್ರಯಾಣ, ಉಚಿತ ನೀರು ಪೂರೈಕೆ ಇದು ಬಿಜೆಪಿ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶ. ಇದರ ಜತೆಯಲ್ಲಿ ಪ್ರವಾಹದಿಂದ ತೊಂದರೆಗೊಳಗಾದ ಕುಟುಂಬಕ್ಕೆ 25 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿಯೂ ಹೇಳಲಾಗಿದೆ. ಪ್ರತಿ ವರ್ಷ ಮೂರು ಹೊಸ ಮಹಿಳಾ ಪೊಲೀಸ್​ ಠಾಣೆ ನಿರ್ಮಾಣ, ಪ್ರತಿ ಕಿಲೋ ಮೀಟರ್​ಗೆ ಒಂದರಂತೆ ಮಹಿಳಾ ಶೌಚಾಲಯ, ಆನ್​ಲೈನ್ ಶಿಕ್ಷಣಕ್ಕೆ ಸಹಾಯವಾಗಲೆಂದು ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಟ್ಯಾಬ್ಲೆಟ್​ ನೀಡುವುದಾಗಿ ಬಿಜೆಪಿ ತಿಳಿಸಿದೆ.
ಇದನ್ನೂ ಓದಿ:ಅಪ್ರಾಪ್ತ ಮಗ ಕೊಲೆ ಮಾಡುತ್ತಿದ್ದರೆ, ಅಮ್ಮ ಹೀಗಾ ಮಾಡೋದು? ಇಷ್ಟೆಲ್ಲ ಆಗಿದ್ದು ಪುಟ್ಟ ಬಾಲಕಿಯಿಂದಾಗಿ
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್‌ ರೆಡ್ಡಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.(ಏಜೆನ್ಸೀಸ್​)
VIDEO| ನಾನು ಸಾಯುವ ಸಾಧ್ಯತೆಯಿದೆ ಎಂದು ಭಾವುಕರಾದ ರಾಣಾ: ಕಣ್ಣೀರಿಟ್ಟ ಸಮಂತಾ, ವೀಕ್ಷಕರು!

ಆರು ಪತ್ನಿಯರನ್ನು ಏಕಕಾಲದಲ್ಲಿ ಗರ್ಭಿಣಿಯರನ್ನಾಗಿ ಮಾಡಿದ ಪತಿರಾಯ; ಮದುವೆಯಲ್ಲಿ ಟ್ರೆಂಡ್​ ಆದ ಕುಟುಂಬ

ಕಾಡಿನ ಗುಡಿಸಲಿನಲ್ಲಿ ಕೂಡಿ 14 ದಿನ ಅತ್ಯಾಚಾರ ಮಾಡಿದ! ಕಾಮುಕನಿಂದ ಬಚಾವಾಗಿದ್ದೇ ಒಂದು ರೋಚಕ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − one =
Remember me
