ಹೈದರಾಬಾದ್​:ಮುತ್ತಿನ ನಗರಿ ಹೈದರಾಬಾದ್ ಎಂಬ ಮಹಾನಗರವು ಅನೇಕ ಜನರ ಹಸಿವನ್ನು ನೀಗಿಸುತ್ತಿದೆ. ಆದರೆ, ಅದೇ ಮಹಾನಗರದಲ್ಲಿ ಒಂದೇ ಒಂದು ಮಳೆ ಬಿದ್ದರೆ ಸಾಕು ಮೊಣಕಾಲಿನಷ್ಟು ನೀರು ನಿಂತು ಅನೇಕರು ಬದುಕು ಬೀದಿಗೆ ಬೀಳುತ್ತದೆ. ಆದರೆ, ಇದು ಆ ಮಹಾನಗರದ ತಪ್ಪಲ್ಲ. ಮಳೆ ನೀರು ತುಂಬುತ್ತಿದ್ದ ಕೆರೆಗಳು, ಉದ್ಯಾನವನಗಳು ಹಾಗೂ ಸರಕಾರಿ ಜಾಗವನ್ನು ಮನಬಂದಂತೆ ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ನಿರ್ಮಿಸಿದ ಕರ್ಮದ ಫಲವನ್ನು ಇಂದು ಮುತ್ತಿನ ನಗರಿ ಅನುಭವಿಸುತ್ತಿದೆ.
ಒತ್ತುವರಿ ಪರಿಣಾಮ ಮಳೆ ಬಂದರೆ ಸಾಕು ಮನೆ, ರಸ್ತೆಗಳಿಗೆ ನೀರು ನುಗ್ಗುತ್ತದೆ. ಯಾರೋ ಮಾಡಿದ ತಪ್ಪಿನಿಂದ ಅಮಾಯಕರು ತುಂಬಾ ತೊಂದರೆ ಅನುಭವಿಸುತ್ತಾರೆ. ಇದೀಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಹೈದರಾಬಾದ್ ವಿಪತ್ತು ನಿರ್ವಹಣೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ (HYDRA) ಸಮರ ಸಾರಿದೆ. ಇದರ ನೇತೃತ್ವವನ್ನು ಆಯುಕ್ತ ರಂಗನಾಥ್ ವಹಿಸಿಕೊಂಡಿದ್ದಾರೆ.
ಪೂರ್ಣ ಹೆಸರು ಅವುಲ ವೆಂಕಟ ರಂಗನಾಥ್. ಹುಟ್ಟಿದ ಸ್ಥಳ ನಲ್ಗೊಂಡ. ಸುಬ್ಬಯ್ಯ ಮತ್ತು ವಿಜಯಲಕ್ಷ್ಮಿ ದಂಪತಿ 1970 ಅಕ್ಟೋಬರ್ 22 ರಂದು ಜನಿಸಿದರು. ಹುಜೂರ್ ನಗರ ಮತ್ತಿತರ ಕಡೆ ಪ್ರಾಥಮಿಕ ಶಿಕ್ಷಣ ಪಡೆದ ರಂಗನಾಥ್, 10ನೇ ತರಗತಿವರೆಗೆ ಗುಂಟೂರಿನಲ್ಲಿ ಓದಿದ್ದರು. ಇಂಟರ್, ಇಂಜಿನಿಯರಿಂಗ್ ಮುಗಿಸಿದ್ದು ಹೈದರಾಬಾದ್ ನಲ್ಲಿ. ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಇಂಜಿನಿಯರಿಂಗ್ ಮುಗಿಸಿದ ಬಳಿಕ ಐಡಿಬಿಐ ಬ್ಯಾಂಕ್​ನಲ್ಲಿ ಕೆಲಕಾಲ ಕೆಲಸ ಮಾಡಿದರು. ಆ ನಂತರ ಪೊಲೀಸ್ ಅಧಿಕಾರಿಯಾಗುವ ಗುರಿಯೊಂದಿಗೆ ಗ್ರೂಪ್ 1 ಪರೀಕ್ಷೆಗೆ ತಯಾರಿ ನಡೆಸಿದರು. ಗ್ರೂಪ್ 1 ಪರೀಕ್ಷೆಯಲ್ಲಿ ರಾಜ್ಯಕ್ಕೆ 13ನೇ ರ್ಯಾಂಕ್ ಗಳಿಸಿದರು.
1996 ಬ್ಯಾಚ್ ಗ್ರೂಪ್ 1 ಅಧಿಕಾರಿಯಾಗಿದ್ದ ಎವಿ ರಂಗನಾಥ್, 2006 ರಲ್ಲಿ ಐಪಿಎಸ್ ಕೇಡರ್‌ಗೆ ಬಡ್ತಿ ಪಡೆದರು. 28 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ, ಎವಿ ರಂಗನಾಥ್ ಹಲವಾರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2000ರಲ್ಲಿ ಗ್ರೇಹೌಂಡ್ಸ್ ಅಸಾಲ್ಟ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. 2004 ರಲ್ಲಿ ಪ್ರಕಾಶಂ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದರು, ವೈಎಸ್ಆರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾವೋವಾದಿಗಳೊಂದಿಗೆ ಮಾತುಕತೆ ನಡೆಸಿದಾಗ, ರಾಮಕೃಷ್ಣ (ಆರ್ಕೆ) ಸೇರಿದಂತೆ ಹಿರಿಯ ಮಾವೋವಾದಿ ನಾಯಕರನ್ನು ವೈಯಕ್ತಿಕವಾಗಿ ರಂಗನಾಥ್​ ಅವರು ಸಾರ್ವಜನಿಕ ಜೀವನಕ್ಕೆ ಸ್ವಾಗತಿಸಿದರು. ಎಡಪಂಥೀಯ ಉಗ್ರವಾದವನ್ನು ನಿಗ್ರಹಿಸಲು ಎವಿ ರಂಗನಾಥ್ ಪಟ್ಟ ಶ್ರಮಕ್ಕೆ 2012 ರಲ್ಲಿ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಸ್ವೀಕರಿಸಿದ್ದಾರೆ. ನಂತರ ಖಮ್ಮಂ ಮತ್ತು ನಲ್ಗೊಂಡ ಜಿಲ್ಲೆಗಳ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ನಲ್ಗೊಂಡದಲ್ಲಿ ಇದ್ದಾಗಲೇ ಡಿಐಜಿಯಾಗಿ ಬಡ್ತಿ ಪಡೆದರು. ಇದಾದ ಬಳಿಕ ಹೈದರಾಬಾದ್ ನಗರದಲ್ಲಿ ಜಂಟಿ ಕಮಿಷನರ್ (ಸಂಚಾರ) ಆಗಿ ಸೇವೆ ಸಲ್ಲಿಸಿದ ಎ.ವಿ.ರಂಗನಾಥ್ ಅವರನ್ನು ವಾರಂಗಲ್ ಪೊಲೀಸ್ ಕಮಿಷನರ್ ಆಗಿ ನೇಮಿಸಲಾಯಿತು.
ಹೈದರಾಬಾದ್ ನಗರದಲ್ಲಿ ಈಗ ‘ಹೈಡ್ರಾ’ ಎಂಬ ಹೆಸರು ಜನಪ್ರಿಯವಾಗಿದೆ. ಇದರ ಅರ್ಥ ಹೈದರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಮತ್ತು ಅಸೆಟ್ ಮಾನಿಟರಿಂಗ್ ಅಂಡ್ ಪ್ರೊಟೆಕ್ಷನ್ ಏಜೆನ್ಸಿ. ತೆಲಂಗಾಣ ರಾಜ್ಯ ಸರ್ಕಾರ ಇದನ್ನು ವಿಶೇಷ ಸಂಸ್ಥೆಯಾಗಿ ರಚಿಸಿದೆ. ರಂಗನಾಥ್ ಅವರನ್ನು ಕಮಿಷನರ್ ಆಗಿ ನೇಮಿಸಿ, ಮುಖ್ಯಮಂತ್ರಿ ರೇವಂತ್ ಸರ್ಕಾರ ಈ ಹೈಡ್ರಾಗೆ ವಿಶೇಷ ಅಧಿಕಾರ ಕೊಟ್ಟರು. ಮಹಾನಗರದಲ್ಲಿ ಅತಿಕ್ರಮಣಗೊಂಡಿರುವ ಕೆರೆ, ಕೊಳ, ರಾಜಕಾಲುವೆ, ಸರ್ಕಾರಿ ಜಮೀನುಗಳನ್ನು ಗುರುತಿಸಿ ಅಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಿ, ಅತಿಕ್ರಮಣದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಇದರ ಉದ್ದೇಶ.
ಈ ಹೈಡ್ರಾ ಇದೀಗ ಹೈದರಾಬಾದ್​ನಲ್ಲಿ ಸಂಚಲನ ಮೂಡಿಸುತ್ತಿದೆ. ಸರ್ಕಾರದಿಂದ ಸಂಪೂರ್ಣ ಬೆಂಬಲವಿದ್ದರೂ ಈ ಸಂಸ್ಥೆ ಇಷ್ಟೊಂದು ಗಟ್ಟಿಯಾಗಿ, ಆಕ್ರಮಣಕಾರಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ರಂಗನಾಥ್ ಅವರೇ ಕಾರಣ. ಅದಕ್ಕಾಗಿಯೇ ಸರ್ಕಾರ ಅವರನ್ನು ಈ ಏಜೆನ್ಸಿಯ ಆಯುಕ್ತರನ್ನಾಗಿ ನೇಮಿಸಿತು. ಇತ್ತೀಚೆಗಷ್ಟೇ ಮಾದಾಪುರದಲ್ಲಿ ಖ್ಯಾತ ಸಿನಿಮಾ ನಟ ಅಕ್ಕಿನೇನಿ ನಾಗಾರ್ಜುನ್​ ಅವರ ‘ಎನ್ ಕನ್ವೆನ್ಷನ್’ ಎಂಬ ಬೃಹತ್ ಕಟ್ಟಡವನ್ನು ಕೆಡವಿದ ಬಳಿಕ ಹೈಡ್ರಾ ಹೆಸರು ಮತ್ತೊಮ್ಮೆ ಸಂಚಲನ ಮೂಡಿಸಿದೆ. ಸ್ಟಾರ್​ ನಟನೆಂಬುದನ್ನು ನೋಡದೇ ಐಷಾರಾಮಿ ಕಟ್ಟಡವನ್ನೇ ನೆಲಸಮ ಮಾಡಲಾಗಿದೆ. ಈ ಮೂಲಕ ಅತಿಕ್ರಮಣದಾರರಿಗೆ ರಂಗನಾಥ್​ ದುಃಸ್ವಪ್ನವಾಗಿದ್ದಾರೆ.
GHMC (ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್) ವ್ಯಾಪ್ತಿಯಲ್ಲಿರುವ ಅತಿಕ್ರಮಿತ ಭೂಮಿಯನ್ನು ಪುನರ್ವಸತಿ ಮಾಡಲು ಮತ್ತು ಅವುಗಳ ಮೇಲೆ ನಿರ್ಮಿಸಲಾದ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲು ಹೈಡ್ರಾ ಗಮನಹರಿಸಿದೆ. ಜಿಎಚ್‌ಎಂಸಿ ವ್ಯಾಪ್ತಿಯಲ್ಲಿ ಅತಿಕ್ರಮಣದಿಂದಾಗಿ ಸುಮಾರು 185 ಕೆರೆಗಳು ಕುಗ್ಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆಯಾ ಕೆರೆಗಳ ‘ಬಫರ್ ಝೋನ್’ಗಳಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ಅಕ್ರಮ ಕಟ್ಟಡಗಳೆಂದು ಗುರುತಿಸಿ ನೆಲಸಮಗೊಳಿಸಲಾಗುತ್ತಿದೆ.(ಏಜೆನ್ಸೀಸ್​)
13 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಸಿಗಲ್ಲ ಆಗಸ್ಟ್​ ತಿಂಗಳ ಸಂಬಳ! ಸರ್ಕಾರದಿಂದ ಬಿಗ್ ಶಾಕ್​

ರೋಹಿತ್​​, ಧೋನಿ​ ಬ್ಯಾಟ್​ಗಿಂತಲೂ ಕೊಹ್ಲಿ ಗ್ಲೌಸ್​ ದುಬಾರಿ! ಹರಾಜಿನಲ್ಲೂ ವಿರಾಟ್​ ಕ್ರೇಜ್​ ಸಾಬೀತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
