ನವದೆಹಲಿ:ಬಾಲಿವುಡ್​ನ ಚೆಲುವೆ, ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್​ ಇದೀಗ 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ಟಿಕೆಟ್ ಪಡೆದಿದ್ದು, ಭರ್ಜರಿ ಮತಬೇಟೆಗೆ ಸಕಲ ತಯಾರಿ ನಡೆಸುತ್ತಿದ್ದಾರೆ. ಇನ್ನು ಈ ಮಧ್ಯೆ ತನ್ನ ವಿರುದ್ಧ ಕೇಳಿಬಂದ ಆರೋಪಕ್ಕೆ ಇದೀಗ ನಟಿ ಟ್ವೀಟ್ (ಇಂದಿನ ಎಕ್ಸ್​) ಮೂಲಕ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಸುಳ್ಳಿನ ಕಥೆ ಹೇಳಿ ಸಿದ್ದು, ಡಿಕೆಶಿಯನ್ನು ಗೇಲಿ ಮಾಡಿದ ಪ್ರಲ್ಹಾದ್​ ಜೋಶಿ
ನಾನು ಗೋಮಾಂಸ ಅಥವಾ ಇತರ ಯಾವುದೇ ಕೆಂಪು ರೀತಿಯ ಮಾಂಸವನ್ನು ಸೇವಿಸುವುದಿಲ್ಲ. ಇದೆಲ್ಲವೂ ನನ್ನ ವಿರುದ್ಧ ಕೇಳಿಬರುತ್ತಿರುವ ಆಧಾರರಹಿತ ವದಂತಿಗಳು. ಈ ರೀತಿ ಅಪಪ್ರಚಾರ ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ದಶಕಗಳಿಂದ ಯೋಗ ಮತ್ತು ಆಯುರ್ವೇದ ಜೀವನ ವಿಧಾನವನ್ನು ಪ್ರತಿಪಾದಿಸುತ್ತಿದ್ದೇನೆ ಮತ್ತು ಪ್ರಚಾರ ಮಾಡುತ್ತಿದ್ದೇನೆ. ಇಂತಹ ತಂತ್ರಗಳು ನನ್ನ ಬದುಕಿಗೆ ಕಳಂಕ ತರಲು ಸಾಧ್ಯವಿಲ್ಲ. ನನ್ನ ಜನರಿಗೆ ನಾನೇನು ಎಂಬುದು ಗೊತ್ತಿದೆ. ನಾನು ಹೆಮ್ಮೆಯ ಹಿಂದೂ, ಜೈ ಶ್ರೀ ರಾಮ್ ಎಂದು ಬರೆದು ಹಂಚಿಕೊಂಡಿದ್ದಾರೆ.
ಸದ್ಯ ನಟಿ ಕಂಗನಾ ಮಾಡಿದ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆಗಳು ಹರಿದುಬಂದಿದ್ದು, ಕೆಲವರು ನಟಿಯ ಪರ ಬ್ಯಾಟ್​ ಬೀಸಿದರೆ, ಇನ್ನು ಕೆಲವರು ಆಕೆಯನ್ನು ಲೇವಡಿ ಮಾಡಿದ್ದಾರೆ. ಇದೇ ಏಪ್ರಿಲ್ 5ರಂದು ಕಂಗನಾ ರಣಾವತ್ ವಿರುದ್ಧ ಆರೋಪ ಎಸಗಿದ್ದ ಕಾಂಗ್ರೆಸ್ ನಾಯಕ ವಿಜಯ್ ವಾಡೆಟ್ಟಿವಾರ್, ಆಕೆ ಗೋಮಾಂಸ ಇಷ್ಟಪಡುತ್ತಾರೆ ಮತ್ತು ತಿನ್ನುತ್ತಾರೆ ಎಂದು ಬರೆದಿದ್ದರು. ಈಗ ಬಿಜೆಪಿ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಿದೆ. ಎಲ್ಲಾ ಭ್ರಷ್ಟ ನಾಯಕರನ್ನು ಕಮಲ ಸ್ವಾಗತಿಸುತ್ತಿದೆ ಎಂದು ವಡೆತ್ತಿವಾರ್ ಸಾರ್ವಜನಿಕ ರ್ಯಾಲಿಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ:ಸಚಿವ ಗುಂಡುರಾವ್ ಕುಟುಂಬ ವಿರುದ್ಧ ಬಸನಗೌಡ ಯತ್ನಾಳ ಹೇಳಿಕೆ ಉಗ್ರವಾಗಿ ಖಂಡಿಸಿದ ಕಾಂಗ್ರೆಸ್ ಯುವನಾಯಕ ಸಂಜೀವ್ ಐರೆಡ್ಡಿ
ಸದ್ಯ ವಿಜಯ್ ವಾಡೆಟ್ಟಿವಾರ್ ಹೇಳಿಕೆಗೆ ಕಂಗನಾ ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಸದ್ಯ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಪೈಪೋಟಿ ಕೊಡಲು ಸಜ್ಜಾಗಿರುವ ಕಂಗನಾ, ತಮ್ಮ ಮೊದಲ ಗೆಲುವಿಗಾಗಿ ಭಾರೀ ಕಸರತ್ತು ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ,(ಏಜೆನ್ಸೀಸ್).
ಐಪಿಎಲ್​ 10 ತಂಡಕ್ಕೂ ರೋಹಿತ್​ ಶರ್ಮಾನೇ ಕ್ಯಾಪ್ಟನ್​; ಸುರೇಶ್​ ರೈನಾ ಹೇಳಿಕೆಯ ಹಿಂದಿದೆ ಈ ಕಾರಣ!

50 ರೂ. ನೋಟ್ನಲ್ಲಿ ಅಡಗಿತ್ತು ಅಳಿಯನ ಕಣ್ಣೀರು! ದೇವರ ಹುಂಡಿಗೆ ಹಾಕುವ ಮುನ್ನ ಆತ ಬರೆದಿದ್ದಿಷ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 2 =
Remember me
