ಬ್ರಿಟನ್:ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಪತ್ರಕರ್ತೆ ಯಾನಾ ಮಿರ್ ಅವರು ಬ್ರಿಟಿಷ್ ಸಂಸತ್ತಿನಲ್ಲಿ ಅದ್ಭುತ ಭಾಷಣ ಮಾಡುವ ಮೂಲಕ ಇಡೀ ಜಗತ್ತಿಗೆ ದೊಡ್ಡ ಸಂದೇಶವನ್ನು ನೀಡಿದರು. ಭಾರತವನ್ನು ಮುಕ್ತಕಂಠದಿಂದ ಹೊಗಳಿದರು. ಬ್ರಿಟನ್ ಸಂಸತ್ ಭವನದಲ್ಲಿ ಸಂಕಲ್ಪ್ ದಿವಸ್ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾನಾ ಬ್ರಿಟನ್ ಗೆ ತೆರಳಿದ್ದರು.
ಕಾರ್ಯಕ್ರಮದಲ್ಲಿ ಯಾನಾ ಮಿರ್ ಅವರಿಗೆ ಡೈವರ್ಸಿಟಿ ಅಂಬಾಸಿಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಯಾನಾ ಭಾಷಣ ಮಾಡುವಾಗ “ನಾನು ಕಾಶ್ಮೀರದಿಂದ ಬಂದಿದ್ದೇನೆ, ವಿಶ್ವದ ಸುಂದರ ನಗರಗಳಲ್ಲಿ ಅದು ಒಂದಾಗಿದೆ, ಅಲ್ಲಿ ಪ್ರಪಂಚದಾದ್ಯಂತದ ಪ್ರವಾಸಿಗರು ಹಿಮ ಕಣಿವೆಗಳನ್ನು ನೋಡಲು ಬರುತ್ತಾರೆ, ಆದರೆ ನಾನು ಮಲಾಲಾ ಯೂಸುಫ್‌ಜಾಯ್ ಆಗುವುದಿಲ್ಲ ಅಥವಾ ನಾನು ಮಲಾಲಾ ಆಗುವುದಿಲ್ಲ, ಏಕೆಂದರೆ ನಾನು ಸ್ವತಂತ್ರ. ನನ್ನ ಕಾಶ್ಮೀರದಲ್ಲಿ ನಾನು ಸುರಕ್ಷಿತವಾಗಿದ್ದೇನೆ. ನಾನು ನನ್ನ ದೇಶ ಭಾರತದಲ್ಲಿ, ನನ್ನ ತವರು ಕಾಶ್ಮೀರದಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದೇನೆ, ಅದು ಭಾರತದ ಭಾಗವಾಗಿದೆ. ನಾನು ಭಾರತದಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇನೆ. ಏನೇ ಆಗಲಿ, ನಾನು ನನ್ನ ದೇಶವನ್ನು ಬಿಟ್ಟು ಓಡಿಹೋಗಬೇಕಾಗಿಲ್ಲ” ಎಂದರು.
ಯಾನಾ ಮಿರ್ ಅವರ ಈ ಭಾಷಣಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡರು. ಅಲ್ಲಿದ್ದ ಎಲ್ಲರೂ ಯಾನಾಳನ್ನು ಮೆಚ್ಚಿ ಪ್ರೋತ್ಸಾಹಿಸಿದರು.
ಮಾಧ್ಯಮ ವರದಿಗಳ ಪ್ರಕಾರ, ಬ್ರಿಟನ್ ಸಂಸತ್​​​​ನಲ್ಲಿ ಭಾಷಣ ಮಾಡುವಾಗ, ಯಾನಾ ಮಿರ್ ಭಾರತೀಯ ಸೇನೆಯನ್ನು ಶ್ಲಾಘಿಸಿದರು. ಭಾರತೀಯ ಸೇನೆಯ ಸೈನಿಕರು ಜಮ್ಮು ಮತ್ತು ಕಾಶ್ಮೀರದ ಯುವಕರಿಗೆ ಹಿಂಸಾಚಾರದ ಮಾರ್ಗವನ್ನು ಅಳವಡಿಸಿಕೊಳ್ಳದಂತೆ ಪ್ರೇರೇಪಿಸುತ್ತಾರೆ ಎಂದು ಹೇಳಿದರು. ಶಿಕ್ಷಣ ಮತ್ತು ಕ್ರೀಡೆಯ ಮಹತ್ವವನ್ನು ತಿಳಿಸಿ, ಈ ಕ್ಷೇತ್ರಗಳಲ್ಲಿ ಮುನ್ನಡೆಯುವಂತೆ ಸಲಹೆ ನೀಡುತ್ತಾರೆ. ಅನೇಕ ಸೈನಿಕರು ಕಾಶ್ಮೀರಿ ಯುವಕರಿಗೆ ಹೊಸ ಗುರುತನ್ನು ನೀಡಿದ್ದಾರೆ. ಭಾರತೀಯ ಸೇನೆಯು ಅಭಿಯಾನದ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಪಿಒಕೆ ಕುರಿತು ಚರ್ಚೆಬ್ರಿಟನ್ ಸಂಸತ್ ಭವನದಲ್ಲಿ ನಡೆದ ‘ಸಂಕಲ್ಪ್ ದಿವಸ್’ ಕಾರ್ಯಕ್ರಮಕ್ಕೆ ಬಂದಿದ್ದ ಜನರು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗ ಎಂದು ಬಣ್ಣಿಸಿದರು. ಅದನ್ನು ಮತ್ತೊಮ್ಮೆ ಭಾರತದ ಪೂರ್ಣ ಭಾಗವನ್ನಾಗಿ ಮಾಡುವ ಭಾರತದ ಹಕ್ಕನ್ನು ಒತ್ತಿ ಹೇಳಿದರು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. ಇವರಲ್ಲಿ ಬ್ರಿಟಿಷ್ ಸಂಸತ್ತಿನ ಸದಸ್ಯರು, ಕೌನ್ಸಿಲರ್‌ಗಳು, ಸಮುದಾಯದ ಮುಖಂಡರು ಇತ್ಯಾದಿ ಸೇರಿದ್ದರು.
ಕಾರು ಅಪಘಾತದಲ್ಲಿ ಬಿಆರ್​ಎಸ್ ಶಾಸಕಿ ಲಾಸ್ಯ ನಂದಿತಾ ಸಾವು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:sixteen − fourteen =
Remember me
