ಮುಂಬೈ:ಮಹಾರಾಷ್ಟ್ರದಲ್ಲಿ ಆಡಳಿತರೂಢ ಮಹಾರಾಷ್ಟ್ರ ವಿಕಾಸ್ ಅಗಡಿ ಸರ್ಕಾರದ ರಿಮೋಟ್​ ಕಂಟ್ರೋಲ್​ ತಾವಾಗಿಲ್ಲ. ಅಷ್ಟೇ ಅಲ್ಲ, ಹೆಡ್​ಮಾಸ್ಟರ್​ ಕೂಡ ಆಗಿಲ್ಲ ಎಂದು ಎನ್​ಸಿಪಿ ಮುಖಂಡ ಶರದ್​ ಪವಾರ್​ ಹೇಳಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಸಾಮ್ನಾದಲ್ಲಿ ಶಿವಸೇನೆ ಹೊರತಾಗಿ ಬೇರೊಬ್ಬ ರಾಜಕೀಯ ನಾಯಕರ ಸಂದರ್ಶನ ಪ್ರಕಟವಾಗುತ್ತಿರುವುದು ಇದೇ ಮೊದಲಾಗಿದೆ.
ಇದನ್ನೂ ಓದಿ:‘ನಾನು ಕೊವಿಡ್​-19 ತಪಾಸಣೆ ಮಾಡಿಸಿಕೊಂಡೆ…ನೀವೂ ತಪ್ಪದೆ ಟೆಸ್ಟ್​ಗೆ ಒಳಗಾಗಿ!’
ನಾನು ನೇಪಥ್ಯದಲ್ಲಿ ನಿಂತು ಸಿಎಂ ಉದ್ಧವ್​ ಠಾಕ್ರೆ ಅವರನ್ನು ನಿಯಂತ್ರಿಸುತ್ತಿದ್ದೇನೆ ಎಂಬ ಮಾತು ಹಸಿ ಸುಳ್ಳು. ನಾನು ಹೆಡ್​ಮಾಸ್ಟರ್​ ಕೂಡ ಅಲ್ಲ. ​ ಪ್ರಜಾತಂತ್ರ ವ್ಯವಸ್ಥೆ, ಸರ್ಕಾರ ಅಥವಾ ಆಡಳಿತಗಳು ರಿಮೋಟ್​ ಕಂಟ್ರೋಲ್​ ನೆರವಿನಿಂದ ಕಾರ್ಯನಿರ್ವಹಿಸುವುದಿಲ್ಲ. ಆ ರೀತಿ ಆಗುವುದೇನಿದ್ದರೂ ಪ್ರಜಾತಂತ್ರ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಎಂದು ರಷ್ಯಾದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಪರೋಕ್ಷವಾಗಿ ಉದಾಹರಣೆ ನೀಡಿ ಸ್ಪಷ್ಟಪಡಿಸಿದ್ದಾರೆ.
ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್​ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಆಕಸ್ಮಿಕವಲ್ಲ ಎಂದು ಸ್ಪಷ್ಟಪಡಿಸಿರುವ ಪವಾರ್​, 2014ರಿಂದ 2019ರ ನಡುವಿನ ಬಿಜೆಪಿ-ಶಿವಸೇನೆ ಸರ್ಕಾರದ ಬಗ್ಗೆ ಮತದಾರರಲ್ಲಿ ಅಸಮಾಧಾನ ಮೂಡಿತ್ತು. ಹಾಗಾಗಿಯೇ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಕ್ಕೆ ಶಿವಸೇನೆ ಭಾರಿ ಬೆಲೆಯನ್ನೇ ತೆತ್ತಿತು ಎಂದು ಹೇಳಿದ್ದಾರೆ.
ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ಅವರ ಹೆಸರನ್ನು ಪ್ರಸ್ತಾಪಿಸದೆ, ಯಾವುದೇ ರಾಜಕೀಯ ನಾಯಕರಾಗಿರಲಿ. ಮತದಾರರನ್ನು ಎಂದೂ ಹಗುರವಾಗಿ ಪರಿಗಣಿಸಬಾರದು. ಇಂಥದ್ದೇ ತಪ್ಪು ಮಠಡಿದ್ದಕ್ಕಾಗಿ ಇಂದಿರಾ ಗಾಂಧಿ ಮತ್ತು ಅಟಲ್​ ಬಿಹಾರಿ ವಾಜಪೇಯಿ ಅವರು ಸರಿಯಾದ ಬೆಲೆಯನ್ನೇ ತೆತ್ತಿದ್ದರು ಎಂದು ತಿಳಿಸಿದ್ದಾರೆ.
VIDEO | ಆಹಾರವನ್ನು ತೂಕ ಮಾಡಿ ತಿನ್ನುತ್ತಾರೆ ವಿರಾಟ್​ ಕೊಹ್ಲಿ! ಕಾರಣವೇನು ಗೊತ್ತೇ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + twelve =
Remember me
