ನವದೆಹಲಿ:ರಾಜಸ್ಥಾನದ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಸೆಟೆದಿರುವ ಸಚಿನ್​ ಪೈಲಟ್​ ತಾವು ಬಿಜೆಪಿ ಸೇರುತ್ತಿಲ್ಲ. ತಾನು ಇನ್ನೂ ಕಾಂಗ್ರೆಸ್​ ಪಕ್ಷದಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಬುಧವಾರ ಮಾತನಾಡಿರುವ ಅವರು, ನಾನು ಖಂಡಿತವಾಗಿ ಬಿಜೆಪಿ ಸೇರುತ್ತಿಲ್ಲ. ಮುಂದಿನ ರಾಜಕೀಯ ನಡೆ ಏನು ಎಂಬುದನ್ನು ಶೀಘ್ರದಲ್ಲೇ ಸ್ಪಷ್ಟಪಡಿಸುವೆ ಎಂದು ಹೇಳಿದರು.
ನನ್ನ ವ್ಯಕ್ತಿಕ್ವಕ್ಕೆ ಮಸಿ ಬಳಿಯುವ ದೃಷ್ಟಿಯಿಂದ ನಾನು ಬಿಜೆಪಿ ಸೇರುತ್ತಿರುವುದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಈಗಲೂ ಕಾಂಗ್ರೆಸ್​ನ ಕಟ್ಟಾಳು ಆಗಿದ್ದೇನೆ ಎಂದು 42 ವರ್ಷದ ಸಚಿನ್​ ಪೈಲಟ್​ ಹೇಳಿದರು.
ಇದನ್ನೂ ಓದಿ:ಸಹೋದರಿ ಬಗ್ಗೆ ಮಾತನಾಡಿದ್ದಕ್ಕೆ ಆಕ್ಷೇಪಿಸಿದ, ತುಂಡು ತುಂಡಾಗಿ ಬೋರ್​ವೆಲ್​ ಸೇರಿದ!
ನಾನು ನನ್ನ ರಾಜಕೀಯ ಜೀವನದುದ್ದಕ್ಕೂ ಬಿಜೆಪಿಯನ್ನು ವಿರೋಧಿಸಿಕೊಂಡು ಬಂದಿದ್ದೇನೆ. ವಿಧಾನಸಭೆ ಚುನಾವಣೆಗಳಲ್ಲೂ ಕೂಡ ಅದರ ವಿರುದ್ಧ ಹೋರಾಟ ಮಾಡಿದ್ದೇನೆ. ಜತೆಗೆ ಆ ಪಕ್ಷವನ್ನು ಸೋಲಿಸಿದ್ದೇನೆ. ಹೀಗಿರುವಾಗ ನಾನೇಕೆ ಬಿಜೆಪಿ ಸೇರಲಿ ಎಂದು ಪ್ರಶ್ನಿಸಿದರು.
ನಾನು ರಾಜಸ್ಥಾನದ ಜನತೆಗೆ ಸೇವೆ ಸಲ್ಲಿಸುವ ಬಯಕೆ ಹೊಂದಿದ್ದೇನೆ. ಆದ್ದರಿಂದ, ಅವರಿಗೆ ಸೇವೆ ಸಲ್ಲಿಸಲು ನನ್ನ ಮುಂದಿನ ರಾಜಕೀಯ ನಡೆ ಏನಾಗಿರಬೇಕು ಎಂಬ ಬಗ್ಗೆ ಚಿಂತನೆ ನಡೆಸಿದ್ದೇನೆ. ಶೀಘ್ರದಲ್ಲೇ ಆ ಬಗ್ಗೆ ಸ್ಪಷ್ಟನೆ ನೀಡುವುದಾಗಿ ಹೇಳಿದರು.
ಶ್ರೀಮಂತಿಕೆಯಲ್ಲಿ ಗೂಗಲ್​ ಸಂಸ್ಥಾಪಕರನ್ನೇ ಹಿಂದಿಕ್ಕಿದ ಮುಖೇಶ್​ ಅಂಬಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 19 =
Remember me
