ಚೆನ್ನೈ:ನನ್ನನ್ನು ಕ್ಷಮಿಸಿ. ನಾನು ತುಂಬಾ ದಣಿದಿದ್ದೇನೆಂದು ಡೆತ್​ನೋಟ್​ ಬರೆದಿಟ್ಟು ನೀಟ್ ಆಕಾಂಕ್ಷಿ ಜ್ಯೋತಿ ಶ್ರೀ ದುರ್ಗಾ (19) ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಮದುರೈನಲ್ಲಿ ಶನಿವಾರ ನಡೆದಿದೆ.​ಜ್ಯೋತಿ, ಕಳೆದ ಒಂದು ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೂರನೇ ನೀಟ್​ ಆಕಾಂಕ್ಷಿಯಾಗಿದ್ದಾರೆ. ನಾಳೆ (ಭಾನುವಾರ) ನಡೆಯಲಿರುವ ಕಾಮನ್​ ಎಂಟ್ರೆನ್ಸ್​ ಫಾರ್​ ಮೆಡಿಕಲ್​ ಸೀಟ್​ ಪರೀಕ್ಷೆಯನ್ನು ಎದುರಿಸಲಾಗದೇ ಭಯದಿಂದಲೇ ಜ್ಯೋತಿ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ​
ಜ್ಯೋತಿ ಸಹೋದರ ಸೇನೆಯಲ್ಲಿದ್ದು, ಮದುರೈನಲ್ಲಿರುವ ಸಶಸ್ತ್ರ ಪಡೆಗಳ ಕ್ವಾರ್ಟರ್ಸ್​ನಲ್ಲಿ ಸಹೋದರ ಮತ್ತು ಪಾಲಕರೊಂದಿಗೆ ವಾಸವಿದ್ದರು. ತಂದೆ ಮುರುಗದಾಸಂ ಸಹ ಸೈನಿಕರಾಗಿದ್ದು, ಸಶಸ್ತ್ರ ಪಡೆಗಳ 5ನೇ ಬೆಟಾಲಿಯನ್​ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜ್ಯೋತಿ ಕಳೆದ ವರ್ಷವೂ ಸಹ ನೀಟ್​ ಪರೀಕ್ಷೆ ಬರೆದಿದ್ದಳು. ಆದರೆ, ಅಂದುಕೊಂಡಷ್ಟು ಅಂಕ ಬರಲಿಲ್ಲ. ಆದರೂ ತನ್ನ ಛಲ ಬಿಡದೆ ನಾಳೆ ನಡೆಯುವ ನೀಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಆದರೆ, ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ:ಅಯ್ಯೋ, ಮಗಳೇ ನಿಲ್ಲು ಎಂದು ತಾಯಿ ಗೋಗರೆಯುತ್ತಿದ್ದರೂ ಮಗಳು ನೀರಿಗೆ ಹಾರಿ ಪ್ರಾಣ ಬಿಟ್ಲು!
ಚೆನ್ನಾಗಿಯೇ ಇದ್ದಳು. ನಮ್ಮೊಂದಿಗೆ ಖುಷಿಯಾಗೇ ಮಾತನಾಡುತ್ತಿದ್ದಳು. ರಾತ್ರಿ ಊಟ ಮಾಡಿ ನಮ್ಮೊಂದಿಗೆ ಮಾತನಾಡಿ ಎಂದಿನಂತೆಯೇ ಓದಿಕೊಳ್ಳಬೇಕೆಂದು ಹೇಳಿ ಕೋಣೆಗೆ ಹೋದಳು. ಆದರೆ, ಶನಿವಾರ ಬೆಳಗ್ಗೆ ಬಾಗಿಲು ಬಡಿದಾಗ ತೆರೆಯಲಿಲ್ಲ. ಬಳಿಕ ಆಕೆಯ ಫೋನ್​ ನಂಬರ್​ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ನಂತರ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಜ್ಯೋತಿ ಕೋಣೆಯ ಒಳಗೆ ಶವವಾಗಿ ಬಿದ್ದಿದ್ದಳು. ಅದರ ಪಕ್ಕದಲ್ಲೇ ಪತ್ರ ಮತ್ತು ಮೊಬೈಲ್​ನಲ್ಲಿ ವಿಡಿಯೋ ಮಾಡಿ ಇಟ್ಟಿದ್ದಳು. ಪರೀಕ್ಷೆ ಬಗ್ಗೆ ಭಯ ಇರುವುದಾಗಿ ಹೇಳಿದ್ದಳು ಎಂದು ಪಾಲಕರು ತಿಳಿಸಿದ್ದಾರೆ.
ಡೆತ್​ನೋಟ್​ನಲ್ಲಿ ತಂದೆಯನ್ನು ಉದ್ದೇಶಿಸಿ ನಾನು ನಿಮ್ಮ ನಿರೀಕ್ಷೆಗಳನ್ನು ಮುಟ್ಟಲಿಲ್ಲ. ನಿಮಗೆ ನಿರಾಸೆ ಮಾಡುತ್ತೇನೆಂಬ ಭಯ ನನ್ನಲ್ಲಿ ಕಾಡುತ್ತಲೇ ಇತ್ತು. ನನ್ನ ನಿರ್ಧಾರದ ಬಗ್ಗೆ ನಿಮ್ಮನ್ನು ನೀವು ದೂಷಿಸಿಕೊಳ್ಳಬೇಡಿ ಎಂದು ಪದೇಪದೆ ಹೇಳಿದ್ದಾಳೆ. ವಿಡಿಯೋದಲ್ಲೂ ಸಹ ಜ್ಯೋತಿ, ತನ್ನ ನಿರ್ಧಾರದ ಬಗ್ಗೆ ತಂದೆ-ತಾಯಿಯ ಬಳಿ ಕ್ಷಮೆಯಾಚಿಸಿದ್ದಾಳೆ.
ಮಾಧ್ಯಮಗಳ ಜತೆ ಮಾತನಾಡಿದ ಜ್ಯೋತಿ ತಂದೆ, ಅವಳು ಚೆನ್ನಾಗಿಯೇ ಓದುತ್ತಿದ್ದಳು. ಈ ಬಾರಿ ಅವಳು 550 ಅಂಕ ಪಡೆಯಬಹುದಿತ್ತು. ಆದರೆ, ತುಂಬಾ ಖಿನ್ನತೆಗೆ ಒಳಗಾಗಿದ್ದಳು. ನಿನ್ನೆ ರಾತ್ರಿಯಷ್ಟೇ ನಮ್ಮೊಂದಿಗೆ ಮಾತನಾಡಿದ್ದಳು. ಆದರೆ, ಇಂದು ಬೆಳಗ್ಗೆ ಆಕೆ ಶವವಾಗಿ ಪತ್ತೆಯಾಗಿದ್ದಾಳೆಂದು ಕಣ್ಣೀರಾಕಿದರು.(ಏಜೆನ್ಸೀಸ್​)
‘ಡ್ರಗ್ಸ್​ ದಂಧೆಯಲ್ಲಿ 32 ರಾಜಕಾರಣಿಗಳು! ಸಾಕ್ಷಿ ಸಮೇತ ಗೃಹ ಸಚಿವರ ಕೈ ಸೇರಲಿದೆ ಲಿಸ್ಟ್’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
