ಚೆನ್ನೈ:ತಮ್ಮ ಆರೋಗ್ಯ ಸ್ಥಿತಿ ಕುರಿತು ಎದ್ದಿರುವ ವದಂತಿಗಳಿಗೆ ತೆರೆ ಎಳೆದಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ನಾನು ಆರಾಮಾಗಿದ್ಧೇನೆ. ಜನರು ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ತಮಿಳುನಾಡು ಜನತೆಗಾಗಿ ದುಡಿಯಲು ನಾನು ಸದಾ ಸಿದ್ಧ ಎಂದು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸ್ಟಾಲಿನ್​, ನನ್ನಿಂದ ಏನು ತಪ್ಪಾಗಿದೆ ಎಂದು ಈ ರೀತಿಯ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನನ್ನ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
நம் தமிழ் உறவுகள் என் வெளிநாட்டுப் பயணங்களின்போது எத்தகைய வரவேற்பை அளிப்பார்களோ, அதே உற்சாகத்தோடு அவர்களைத் தாய்த் தமிழ்நாட்டில் வரவேற்றேன்!அயலகத் தமிழர் நலனுக்காக நமது#DravidianModelஅரசு எடுத்துவரும் நடவடிக்கைகளைப் பற்றி விவரித்தேன்.அயலக உறவுகளே…கீழடி, பொருநை,…pic.twitter.com/poLrlpoSoz
ಇದನ್ನೂ ಓದಿ:ನಟ ದರ್ಶನ್​ರನ್ನು ಟಾರ್ಗೆಟ್​ ಮಾಡಿ ಮಸಿ ಬಳಿಯುವ ಯತ್ನ ನಡಿತಿದೆ: ರಾಕ್​ಲೈನ್​ ವೆಂಕಟೇಶ್ ಆರೋಪ
ನಿನ್ನೆ ಜನಪ್ರಿಯ ಪತ್ರಿಕೆ ಒಂದರಲ್ಲಿ ನನ್ನ ಆರೋಗ್ಯ ಹದಗೆಟ್ಟಿದ್ದು, ನಾನು ಸಂತೋಷದಿಂದ ಕಾಲ ಕಳೆಯುತ್ತಿಲ್ಲ ಎಂದೆಲ್ಲಾ ಬರೆದಿದ್ದಾರೆ. ಆದರೆ, ಆ ರೀತಿ ಬರೆಯಲು ನನ್ನಿಂದ ಏನು ತಪ್ಪಾಗಿದೆ ಎಂದು ತಿಳಿಯಲಿಲ್ಲ. ನಾನು ಎರಡು ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡ ಮಾತ್ರಕ್ಕೆ ನನ್ನ ಆರೋಗ್ಯ ಹದಗೆಟ್ಟಿದೆ ಎಂದು ಭಾವಿಸುವ ಅವಶ್ಯಕತೆಯಿಲ್ಲ. ತಮಿಳುನಾಡಿನ ಜನರು ಸಂತೋಷದಿಂದಿರುವಾಗ ನನಗೆ ಇನ್ನೇನು ಬೇಕು.
ಸಂಕ್ರಾಂತಿ ವೀಶೇಷವಾಗಿ ರಾಜ್ಯ ಸರ್ಕಾರದಿಂದ ಜನತೆಗೆ ವಿಶೇಷ ಉಡುಗೊರೆಯನ್ನು ನೀಡಲಾಗಿದೆ. ನಾನು ಸಂಕ್ರಾಂತಿ ಆಚರಿಸಲು ಯಾರನ್ನೂ ಅವಲಂಬಿಸಬೇಕಾಗಿಲ್ಲ ಎಂದು ಮಹಿಳೆಯೊಬ್ಬರು ಹೇಳುತ್ತಿರುವ ವಿಡಿಯೋ ನೋಡಿ ನನಗೆ ತುಂಬಾ ಖುಷಿಯಾಯಿತು. ಅದೇ ನನ್ನ ಪಾಲಿಗೆ ಔಷಧಿಯಾಗಿದೆ. ನಾನು ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಇಂತಹ ಸುದ್ದಿಗಳು ನನ್ನನ್ನು ಬಾದಿಸುವುದಿಲ್ಲ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 4 =
Remember me
