ನವದೆಹಲಿ:ಬಿಜೆಪಿಯ 40ನೇ ಸಂಸ್ಥಾಪನಾ ದಿನದ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಕೆಲವು ಕಿವಿಮಾತು ಹೇಳಿದರು ಹಾಗೇ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ದೇಶವಷ್ಟೇ ಅಲ್ಲ, ಇಡೀ ಜಗತ್ತೇ ಅತ್ಯಂತ ಕಷ್ಟದ ಸಮಯದಲ್ಲಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಸಂಸ್ಥಾಪನಾ ದಿನವೂ ಬಂದಿದೆ. ಮಾನವ ಕುಲಕ್ಕೆ ಕಂಟಕ ಎದುರಾಗಿರುವ ಈ ಸವಾಲಿನ ಸಮಯದಲ್ಲಿ ದೇಶಕ್ಕೆ ನಾವು ನೀಡುವ ಭಕ್ತಿಪೂರ್ವಕ ಸೇವೆಯೇ ನಮ್ಮ ಮುಂದಿನ ಹೆಜ್ಜೆಯನ್ನು ನಿರ್ಧರಿಸುತ್ತದೆ ಎಂದು ನರೇಂದ್ರ ಮೋದಿ ಹೇಳಿದರು.
ಕರೊನಾ ವೈರಸ್​ನಿಂದ ಉಂಟಾದ ಈ ಬಿಕ್ಕಟ್ಟಿನ ನಿರ್ವಹಣೆ ಮಾಡಲು ಭಾರತ ಸಮಗ್ರವಾಗಿ ಸಿದ್ಧತೆ ಮಾಡಿಕೊಂಡಿದೆ. ನಾವು ತೆಗೆದುಕೊಳ್ಳುತ್ತಿರುವ ಕ್ರಮದ ಬಗ್ಗೆ ಭಾರತೀಯರಷ್ಟೇ ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ. ಇದು ಎಲ್ಲ ದೇಶಗಳೂ ಒಂದಾಗಿ ಹೋರಾಡುವ ಸಮಯ. ಹಾಗಾಗಿ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಸಾರ್ಕ್​ ದೇಶಗಳ ಹಾಗೂ ಜಿ 20 ನಾಯಕರ ಸಭೆಯಲ್ಲಿ ಭಾರತವೂ ಸಕ್ರಿಯವಾಗಿ ಪಾಲ್ಗೊಂಡಿತ್ತು ಎಂದು ತಿಳಿಸಿದರು.
ಕರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಭಾರತ ತೆಗೆದುಕೊಂಡ ಕ್ರಮಗಳು, ಮಾಡುತ್ತಿರುವ ಪ್ರಯತ್ನಗಳು ವಿಶ್ವದ ಎದುರು ಮಾದರಿಯಾಗುತ್ತಿವೆ. ಈ ರೋಗದ ಗಂಭೀರತೆಯನ್ನು, ಅದರಿಂದ ಉಂಟಾದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಭಾರತ ಯುದ್ಧ ಪ್ರಾರಂಭ ಮಾಡಿದೆ. ದೇಶಕ್ಕೆ ಎದುರಾಗಿರುವ ಕಂಟಕ ತೊಡೆಯಲು ನಾವು ಹಲವು ನಿರ್ಧಾರಗಳನ್ನು ತೆಗೆದುಕೊಂಡೆವು. ಹಾಗೇ ಅದನ್ನು ತಳಮಟ್ಟದಿಂದ ಅನುಷ್ಠಾನಕ್ಕೆ ತರಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದ್ದೇವೆ ಎಂದು ಮೋದಿಯವರು ತಿಳಿಸಿದರು.
ಮಾ.24ರಿಂದ ಮಧ್ಯರಾತ್ರಿ ಲಾಕ್​ಡೌನ್​ ವಿಧಿಸಲಾಯಿತು. ದೇಶದ ಜನರು ಅದಕ್ಕೆ ಸಹಕಾರ ನೀಡಿ ಪ್ರಬುದ್ಧತೆ ಮೆರೆದರು. ದೊಡ್ಡಮಟ್ಟದ ಜನಸಂಖ್ಯೆ ಇರುವ ದೇಶದಲ್ಲಿ ಲಾಕ್​ಡೌನ್​ ಪರಿಪಾಲನೆ ಅಷ್ಟು ಸುಲಭವಲ್ಲ. ಅಂಥದ್ದರಲ್ಲಿ ಜನರು ಇಷ್ಟು ಅಭೂತಪೂರ್ವವಾಗಿ ಸ್ಪಂದಿಸುತ್ತಾರೆ, ಅತ್ಯಂತ ವಿಧೇಯತೆಯಿಂದ ಮತ್ತು ಸೇವಾ ಪ್ರಜ್ಞೆಯಿಂದ ಅದನ್ನು ಪಾಲಿಸುತ್ತಾರೆಂದು ಯಾರೂ ಊಹಿಸಿರಲಿಲ್ಲ ಎಂದು ಹೇಳಿದರು.
ಈಗ ಶುರುವಾಗಿರುವುದು ಕರೊನಾ ವೈರಸ್​ ವಿರುದ್ಧದ ಸುದೀರ್ಘ ಯುದ್ಧ. ಅದರ ಜವಾಬ್ದಾರಿ ಹೊರಲು ಸಿದ್ಧ. ನಾವು ಈ ಹೋರಾಟದಲ್ಲಿ ಆಯಾಸಗೊಳ್ಳಬಾರದು ಮತ್ತು ವಿಶ್ರಾಂತಿ ತೆಗೆದುಕೊಳ್ಳಬಾರದು. ಅವಿರತವಾಗಿ ಶ್ರಮಿಸಿ ಜಯಗಳಿಸಲೇಬೇಕು. ಕರೊನಾ ವಿರುದ್ಧದ ಯುದ್ಧದಲ್ಲಿ ಗೆಲ್ಲುವುದೇ ಸದ್ಯ ನಮ್ಮ ದೇಶಕ್ಕೆ ಇರುವ ಗುರಿ ಮತ್ತು ಸಂಕಷ್ಟಗಳಿಗೆಲ್ಲ ಪರಿಹಾರ ಎಂದರು.
ಒಗ್ಗಟ್ಟು ಬೆಳಕಿಗೆ ಬಂತುನಮ್ಮ ದೇಶದ 130 ಕೋಟಿ ಜನರಲ್ಲಿ ಒಗ್ಗಟ್ಟು, ಏಕತೆಯ ಭಾವ ಎಷ್ಟಿದೆ ಎಂಬುದು ನಿನ್ನೆ (ಏ.5)ರಾತ್ರಿ 9ಗಂಟೆಗೆ ಜಗತ್ತಿನೆದುರು ಸಾಬೀತಾಯಿತು. ಎಲ್ಲ ಸಮಾಜದ, ಎಲ್ಲ ವಯಸ್ಸಿನ ಜನರೂ ಒಟ್ಟಾಗಿ ದೀಪ ಹಚ್ಚುವ ಮೂಲಕ ಕರೊನಾ ಮಣಿಸಲು ನಾವೆಲ್ಲ ಸಿದ್ಧ ಎಂಬ ಐಕ್ಯತಾ ಬಲವನ್ನು ಪ್ರದರ್ಶಿಸಿದರು ಎಂದು ಮೋದಿಯವರು ಹೇಳಿದರು.
ನಮ್ಮ ಕೇಂದ್ರ ಸರ್ಕಾರ ಆರೋಗ್ಯ ಸೇತು ಆ್ಯಪ್​​ನ್ನು ಅಭಿವೃದ್ಧಿಪಡಿಸಿದೆ. ಅದರ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಬೇಕು. ಈ ಆ್ಯಪ್​ ಬಗ್ಗೆ ತಿಳಿದಿರುವ ಓರ್ವ ವ್ಯಕ್ತಿ 40 ಜನರ ಮೊಬೈಲ್​​ನಲ್ಲಿ ಇನ್​​ಸ್ಟಾಲ್​ ಮಾಡಿಸಬೇಕು. ಆರೋಗ್ಯ ಸೇತು ಆ್ಯಪ್​ನಿಂದ ನಮ್ಮ ಸುತ್ತಮುತ್ತ ಎಷ್ಟು ಜನ ಕರೊನಾ ಸೋಂಕಿತರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ.
ಸ್ವಚ್ಛತೆ, ಶಿಸ್ತು ಮತ್ತು ಸಾಮಾಜಿಕ ಅಂತರವೆಂಬುದು ಸದ್ಯ ಜಗತ್ತಿನ ಮಂತ್ರವಾಗಿದೆ. ನೀವು ಹೊರಗೆ ಹೋಗುವಾಗ ಮುಖವನ್ನು ಹೇಗೆ ಮಾಸ್ಕ್​ನಿಂದ ಮುಚ್ಚಿಕೊಳ್ಳುತ್ತಿರೋ, ಅದೇ ರೀತಿ ಮನೆಯಲ್ಲಿ ಇದ್ದಾಗಲೂ ಮಾಸ್ಕ್​ ಧರಿಸಿಯೇ ಇರಿ ಎಂದು ಸಲಹೆ ನೀಡಿದರು.
ಈಗ ಇರುವ ಪರಿಸ್ಥಿತಿ ಅಕ್ಷರಶಃ ಯುದ್ಧ ಸನ್ನಿವೇಶ. ಆ ಕಾಲದಲ್ಲಿ ನಮ್ಮ ಅದೆಷ್ಟೋ ಸಹೋದರಿ, ತಾಯಂದಿರು ತಮ್ಮ ಒಡವೆಗಳನ್ನು ನೀಡಿ, ಆರ್ಥಿಕ ಸಹಾಯ ಮಾಡುತ್ತಿದ್ದರು. ಪ್ರಸ್ತುತ ಅಂಥದ್ದೇ ಯುದ್ಧದ ಸಮಯ ಬಂದಿದೆ.  ಮನುಕುಲವನ್ನು ಸಂರಕ್ಷಣೆ ಮಾಡಿಕೊಳ್ಳುವ ಸವಾಲು ನಮ್ಮ ಎದುರು ಇದೆ. ಹೋರಾಟಕ್ಕೆ ಹಲವರು ಆರ್ಥಿಕ ನೆರವು ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರತಿ ಬಿಜೆಪಿ ಕಾರ್ಯಕರ್ತನಲ್ಲೂ ಒಂದು ಮನವಿ ಮಾಡಿಕೊಳ್ಳುತ್ತೇನೆ. ಪಿಎಂ ಕೇರ್ಸ್​ ಫಂಡ್​ಗೆ ಪ್ರತಿಯೊಬ್ಬರೂ ನಿಮ್ಮ ಕೈಲಾದಷ್ಟು ಕೊಡುಗೆ ನೀಡಿ. ಹಾಗೇ ಓರ್ವ ಕಾರ್ಯಕರ್ತ 40 ಜನರನ್ನು ದೇಣಿಗೆ ನೀಡಲು ಪ್ರೇರೇಪಿಸಬೇಕು ಎಂದು ಪ್ರಧಾನಿ ಹೇಳಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
