ನವದೆಹಲಿ:ಭಾರತೀಯ ಮೂಲದ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್ ಅಂಜಲಿ ಚಕ್ರ​ ಹಾಗೂ ಪಾಕಿಸ್ತಾನ ಮೂಲದ ಸೂಫಿ ಮಲಿಕ್​ ಸಲಿಂಗ ಜೋಡಿಯ ಮದುವೆಗೆ ಇನ್ನೂ ಕೆಲವೇ ವಾರಗಳು ಇರುವಾಗಲೇ ತಮ್ಮ ಸಂಬಂಧವನ್ನು ಕಡಿದುಕೊಳ್ಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಈ ಜೋಡಿ ದಕ್ಷಿಣ ಏಷ್ಯಾದ ಸಂಸ್ಕೃತಿ ಆಚರಣೆಯೊಂದಿಗೆ ತಮ್ಮ ಸಲಿಂಗ ಪ್ರೀತಿಯನ್ನು ಬಹಿರಂಗಪಡಿಸುವ ಮೂಲಕ 2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೊದಲ ಬಾರಿಗೆ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ತಮ್ಮ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಇಬ್ಬರು ಸಂಬಂಧವನ್ನು ಕಡಿದುಕೊಂಡಿದ್ದರ ಬಗ್ಗೆ ಘೋಷಣೆ ಮಾಡಿದ್ದಾರೆ. ಪಾಕ್​ ಮೂಲಕ ಸೂಫಿಯ ದಾಂಪತ್ಯ ದ್ರೋಹವೇ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಿದೆ.
A post shared by Anjali (@anjalichakra)

ಅಂಜಲಿ ಮತ್ತು ಸೂಫಿ ಪ್ರೇಮ ಪ್ರಯಾಣ 5 ವರ್ಷಗಳ ಹಿಂದೆಯೇ ಆರಂಭವಾಯಿತು. ಗಡಿಗಳು ಮತ್ತು ಸಾಂಸ್ಕೃತಿಕ ಮಾನದಂಡಗಳನ್ನು ಮೀರಿದ ತಮ್ಮ ಪ್ರೀತಿಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಚರ್ಚೆಯ ಕಿಡಿಯನ್ನು ಹೊತ್ತಿಸಿದ್ದರು. ಒಂದು ವರ್ಷದ ಹಿಂದಷ್ಟೇ ಇಬ್ಬರು ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು. ನ್ಯೂಯಾರ್ಕ್​ನ ಐಕಾನಿಕ್​ ಎಂಪೈರ್​ ಸ್ಟೇಟ್​ ಬಿಲ್ಡಿಂಗ್​ ಬಳಿ ಸೂಫಿ, ಅಂಜಲಿಗೆ ಪ್ರೇಮ ನಿವೇದನೆ ಮಾಡಿದ್ದಳು. ಇದಕ್ಕೆ ಸಂಬಂಧಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.
ಆದರೆ, ಇದೀಗ ಇಬ್ಬರ ಸಂಬಂಧಕ್ಕೆ ಹುಳಿ ಬಿದ್ದಿದೆ. ತಾನು ಅಂಜಲಿಗೆ ಮೋಸ ಮಾಡಿರುವುದಾಗಿ ಸ್ವತಃ ಸೂಫಿ ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವೇ ವಾರಗಳಲ್ಲಿ ಇಬ್ಬರ ಮದುವೆ ನಡೆಯಬೇಕಿತ್ತು.

A post shared by Anjali (@anjalichakra)

ನಮ್ಮ ಮದುವೆಗೆ ಕೆಲವೇ ವಾರಗಳು ಇರುವಾಗ ನಾನು ಅವಳಿಗೆ (ಅಂಜಲಿ) ಮೋಸ ಮಾಡುವ ಮೂಲಕ ದ್ರೋಹವನ್ನು ಎಸಗಿದ್ದೇನೆ. ನನ್ನ ತಿಳುವಳಿಕೆಯನ್ನೂ ಮೀರಿ ಆಕೆಯ ಮನಸ್ಸಿಗೆ ಭಾರಿ ನೋವುಂಟು ಮಾಡಿದ್ದೇನೆ. ನಾನು ತಪ್ಪನ್ನು ಮಾಡಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ. ನಾನು ಗೌರವಿಸುವ ನಮ್ಮ ಸಮುದಾಯ, ನಮ್ಮ ಕುಟುಂಬ ಮತ್ತು ಸ್ನೇಹಿತರು ಸೇರಿದಂತೆ ನಾನು ಹೆಚ್ಚು ಪ್ರೀತಿಸುವ ಮತ್ತು ಕಾಳಜಿವಹಿಸುವ ಜನರನ್ನು ನನ್ನ ತಪ್ಪಿನಿಂದಾಗಿ ನೋಯಿಸಿದ್ದೇನೆ ಎಂದು ಇನ್​ಸ್ಟಾಗ್ರಾಂನಲ್ಲಿ ಸೂಫಿ ಬರೆದುಕೊಂಡಿದ್ದಾರೆ.
A post shared by Sufi Malik (@sufi.sun)

ಸೂಫಿ ಇನ್​ಸ್ಟಾಗ್ರಾಂ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ಅಂಜಲಿ, ನಿಜಕ್ಕೂ ಇದು ಶಾಕಿಂಗ್​ ಸಂಗತಿ ಎಂದು ಹೇಳಿದ್ದಾರೆ. ನಮ್ಮಿಬ್ಬರ ಪ್ರಯಾಣ ಇದೀಗ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದೆ. ಸೂಫಿ ಮಾಡಿರುವ ದಾಂಪತ್ಯ ದ್ರೋಹದ ಕಾರಣದಿಂದ ನಮ್ಮ ಮದುವೆಯನ್ನು ಮುರಿದುಕೊಳ್ಳಲು ಮತ್ತು ನಮ್ಮ ಸಂಬಂಧಕ್ಕೆ ಕೊನೆಯಾಡಲು ನಾವಿಬ್ಬರು ನಿರ್ಧರಿಸಿದ್ದೇವೆ ಎಂದು ಅಂಜಲಿ ಹೇಳಿದ್ದಾರೆ.
A post shared by Anjali (@anjalichakra)

ಅಂದಹಾಗೆ ಭಾರತೀಯ ಮೂಲದ ಅಂಜಲಿ ಮತ್ತು ಪಾಕಿಸ್ತಾನ ಮೂಲದ ಸೂಫಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಹಿಂದು-ಮುಸ್ಲಿಂ ಸಲಿಂಗ ದಂಪತಿ ಎಂಬ ಕಾರಣದಿಂದ ಇಬ್ಬರ ಸಂಬಂಧ 2019ರಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲೂ ಇಬ್ಬರ ಫೋಟೋಶೂಟ್​ಗೆ ಭಾರಿ ಟೀಕೆ ಕೂಡ ವ್ಯಕ್ತವಾಗಿತ್ತು. ಆದರೆ, ವಿರೋಧಗಳನ್ನು ಲೆಕ್ಕಿಸದೇ ಇಬ್ಬರು ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಆದರೆ, ಈಗ ಆ ಸಂಬಂಧ ಅಂತ್ಯಗೊಂಡಿದೆ.(ಏಜೆನ್ಸೀಸ್​)
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗಿಲ್​ ಪಾಂಡಿಯಮ್ಮ! ವಯಸ್ಸು ಕೇಳಿ ದಂಗಾದ ಅಭಿಮಾನಿಗಳು

ಐಪಿಎಲ್​ 2024: ಮುಂಬೈ ಇಂಡಿಯನ್ಸ್​ ಸೇರಿಕೊಳ್ಳಲಿದ್ದಾರೆ ರಶೀದ್​ ಖಾನ್​! ಆಕಾಶ್​ ಅಂಬಾನಿಯಿಂದ ಡೀಲ್​ ಫಿಕ್ಸ್​?

ಮಗಳಿದ್ರೂ ಪರ್ವಾಗಿಲ್ಲ ಮೀನಾ ಓಕೆ ಅಂದ್ರೆ ನಾನು ರೆಡಿ ಎಂದ ಯೂಟ್ಯೂಬರ್! ಈತನ ಅವಾಂತರ ಒಂದೆರಡಲ್ಲ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − 15 =
Remember me
