ನವದೆಹಲಿ:ರಾಜ್ಯಸಭೆಯ ಕಲಾಪದಲ್ಲಿ ಎಸ್‌ಪಿ ಸಂಸದೆ ಜಯಾ ಬಚ್ಚನ್ ಮತ್ತು ಸಭಾಪತಿ ಜಗದೀಪ್ ಧನಕರ್​​​ ನಡುವೆ ಶುಕ್ರವಾರ (ಆಗಸ್ಟ್​​​ 9) ನಡೆದ ವಾಗ್ದಾದ ವಿಕೋಪಕ್ಕೆ ತಿರುಗಿ ವಿಪಕ್ಷ ಸದಸ್ಯರ ವಾಕ್​ಔಟ್​ಗೆ ಕಾರಣವಾಯಿತು. ಸಭಾಪತಿ ತನ್ನನ್ನು ಅವಮಾನಿಸಿದ್ದಾರೆ ಹಾಗೂ ಸ್ವೀಕಾರಾರ್ಹವಲ್ಲದ ಧ್ವನಿಯಲ್ಲಿ ಮಾತನಾಡಿದ್ದಾರೆ ಎಂದು ಜಯಾ ಬಚ್ಚನ್​​ ಆರೋಪಿಸಿದ್ದಾರೆ.
ಇದನ್ನು ಓದಿ:ಅಬಕಾರಿ ನೀತಿ ಪ್ರಕರಣ; ದೆಹಲಿ ಮಾಜಿ ಡಿಸಿಎಂಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂಕೋರ್ಟ್​​​
ಸದನದಲ್ಲಿ ನಟಿ ಜಯಾ ಬಚ್ಚನ್​ ಸಭಾಪತಿ ಅವರಿಗೆ ನೀವು ಮಾತನಾಡುತ್ತಿರುವ ಟೋನ್​ ಸ್ವೀಕಾರ್ಹವಲ್ಲ ಎಂದು ನೇರವಾಗಿ ಹೇಳಿದರು. ನಾನೊಬ್ಬಳು ನಟಿ, ನಾನು ಇತರರ ದೇಹ ಭಾಷೆ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತೇನೆ. ಸರ್, ದಯವಿಟ್ಟು ನನ್ನನ್ನು ಕ್ಷಮಿಸಿ, ನಿಮ್ಮ ಟೋನ್​​ ಸರಿಯಿಲ್ಲ. ನಾವು ನಿಮ್ಮ ಸಹೋದ್ಯೋಗಿಗಳು ಆದರೆ ನಿಮ್ಮ ಮಾತಿನ ಧಾಟಿ ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಜಗದೀಪ್​ ಧನಕರ್​​, ನನಗೆ ಶಾಲಾ ಶಿಕ್ಷಣ ಬೇಡ. ಜಯಾ ಜೀ ನೀವು ಕುಳಿತುಕೊಳ್ಳಿ… ನೀವು ನನ್ನ ಉಚ್ಚಾರಣೆಯ ಬಗ್ಗೆ ಮಾತನಾಡುತ್ತಿದ್ದೀರಾ? ನೀವು ಮಿತಿಗಳನ್ನು ಅರ್ಥಮಾಡಿಕೊಳ್ಳಬೇಕು. ನೀವು ಸೆಲೆಬ್ರಿಟಿ ಆಗಿರಬಹುದು, ನೀವು ಯಾರೇ ಆಗಿರಬಹುದು, ಆದರೆ ಮಿತಿಗಳನ್ನು ಒಪ್ಪಿಕೊಳ್ಳಿ ಎಂದು ಹೇಳಿದರು.
ಈ ಕುರ್ಚಿಯ ಮೇಲೆ ಕುಳಿತು ಹೇಗೆ ವ್ಯವಹರಿಸಬೇಕೆಂದು ನನಗೆ ತಿಳಿದಿದೆ. ನಾನು ಇಲ್ಲಿಂದ ನೋಡುವುದನ್ನು ನೀವು ನೋಡಲಾಗುವುದಿಲ್ಲ. ನನ್ನ ಭಾಷೆ, ನನ್ನ ಉದ್ವೇಗ ಚರ್ಚೆಯಾಗುತ್ತಿದೆ. ಆದರೆ ನಾನು ಬೇರೆಯವರ ಸ್ಕ್ರಿಪ್ಟ್​​​​ ಅನ್ನು ಅನುಸರಿಸುವುದಿಲ್ಲ, ನನ್ನದೇ ಸ್ಕ್ರಿಪ್ಟ್ ಇದೆ. ಹಿರಿಯ ಸಂಸದರು ಅಧ್ಯಕ್ಷರ ಖ್ಯಾತಿಯನ್ನು ಕಡಿಮೆ ಮಾಡಲು ಪರವಾನಗಿ ಹೊಂದಿದ್ದಾರೆಯೇ ಎಂದು ಸಭಾಪತಿ ಧನಕರ್​​ ಪ್ರಶ್ನಿಸಿದರು.
#WATCH| Amid demand of Opposition Rajya Sabha MPs for expunging remarks of BJP MP Ghanshyam Tiwari about LoP, SP MP Jaya Bachchan made remarks about the tone of the remarks made by the Chairman Jagdeep Dhankhar. The Chairman took strong exception to Jaya Bachchan's remarks,…pic.twitter.com/2qNe82eEws
ಕಲಾಪದಿಂದ ಹೊರಬಂದ ಬಳಿಕ ಮಾತನಾಡಿದ ಜಯಾ ಬಚ್ಚನ್​, ಎಲ್​ಒಪಿ ಮಾತನಾಡಲು ನಿಂತಾಗ ಅವರ ಮೈಕ್ ಸ್ವಿಚ್ ಆಫ್ ಆಗಿತ್ತು. ನೀವು ಇದನ್ನು ಹೇಗೆ ಮಾಡಬಹುದು? ಇದು ಸಂಪ್ರದಾಯಕ್ಕೆ ವಿರುದ್ಧವಾಗಿದೆ. ನೀವು ಅವರಿಗೆ ಮಾತನಾಡಲು ಬಿಡದಿದ್ದರೆ ನಾವು ಏನು ಮಾಡಲು ಬಂದಿದ್ದೇವೆ? ಅದಕ್ಕಿಂತ ಹೆಚ್ಚಾಗಿ ಪ್ರತಿ ಬಾರಿಯೂ ಬಳಸುತ್ತಿರುವ ಪದಗಳು ಸ್ವೀಕಾರ್ಹವಲ್ಲ ಎಂದು ಹೇಳೀದರು.(ಏಜೆನ್ಸೀಸ್​​)

“We are not school children. Some of us, if not all, are Senior Citizens. I objected to the tone used by the Chair” : says Smt Jaya Bachchan.pic.twitter.com/ZtQhSDKYrP
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 5 =
Remember me
