ಜೈಪುರ:ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ವಾಕ್ಸಮರ ಮುಗಿಲು ಮುಟ್ಟಿದೆ. ಇನ್ನು ಚುನಾವಣೆಯ ಹೊಸ್ತಿಲಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ.
ರಾಜಸ್ಥಾನದ ಜಲಾವರ್​ಪಟನ್​ನಲ್ಲಿ ನಾಮಪತ್ರ ಸಲ್ಲಿಸಿ ಸಾರ್ವಜನಿಕರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ವಸುಂಧರಾ ರಾಜೇ, ನನ್ನ ಮಗ ಮಾಡಿದ ಭಾಷಣ ಕೇಳಿ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದು ಸೂಕ್ತ ಎನ್ನಿಸುತ್ತಿದೆ. ನನ್ನ ಮಗ ಅನೇಕ ವರ್ಷಗಳಿಂದ ಸಂಸತ್​ ಪ್ರತಿನಿಧಿಯಾಗಿದ್ದು, ಆತ ನನ್ನ ಬಗ್ಗೆ ಆಡಿದ ಮಾತುಗಳನ್ನು ಕೇಳಿ ನಿವೃತ್ತಿಯಾಗುವುದು ಸೂಕ್ತ ಎಂದೆನ್ನಿಸಿದೆ.
ಹಿಂದೆ ಜನ ಜಲಾವರ್​ ಬರನ್​ನಲ್ಲಿ ಬಂದು ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ನಾ ಮುಂದು ತಾ ಮುಂದು ಎಂಬಂತೆ ಇಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ರಾಜ್ಯವನ್ನು ಅಭಿವೃದ್ದಿ ವಿಚಾರದಲ್ಲಿ ಮತ್ತೊಮ್ಮೆ ನಂಬರ್​ ಒನ್​ ಮಾಡಬೇಕಿದ್ದರೆ ಜನತೆ ಬಿಜೆಪಿಗೆ ಮತ ಹಾಕಿ ಭ್ರಷ್ಟ ಕಾಂಗ್ರೆಸ್​ ಸರ್ಕಾರವನ್ನು ತೊಲಗಿಸಬೇಕು ಎಂದು ಹೇಳಿದ್ದಾರೆ.
साढ़े तीन दशक का साथ और 10वीं बार नामांकन !झालावाड़ परिवार के सहयोग और आशीर्वाद से आज भाजपा प्रत्याशी के रूप में झालरापाटन विधानसभा क्षेत्र से अपना नामांकन दाखिल किया है। आज मैं जो कुछ भी हूं, मेरे झालावाड़ परिवार की बदौलत ही हूं।#MeraJhalawar#BJP4Rajasthan#JaiJaiRajasthanpic.twitter.com/4WG96PnbBt
ಇದನ್ನೂ ಓದಿ:ಏಕದಿನ ವಿಶ್ವಕಪ್​ನಲ್ಲಿ ಸ್ಮರಣೀಯ ಶತಕ; ಕ್ರಿಕೆಟ್ ದಿಗ್ಗಜನ ದಾಖಲೆ ಸರಿಗಟ್ಟಿದ್ದ ರಚಿನ್
ಇತ್ತ ಮಾಜಿ ಸಿಎಂ ವಸುಂಧರಾ ರಾಜೇ ಹಾಗೂ ಅವರ ಆಪ್ತರನ್ನು ಬಿಜೆಪಿ ಹೈಕಮಾಂಡ್​ ಕಡೆಗಣಿಸುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಈ ಹೇಳಿಕೆ ಹೊರಬಂದಿದ್ದು, ಬಿಜೆಪಿ ಪಾಲಿಗೆ ವರವಾಗಲಿದೆಯೋ ಅಥವಾ ಮಗ್ಗಲಮುಳ್ಳಾಗಿ ಪರಿಣಮಿಸಲಿದೆಯೋ ಕಾದು ನೋಡಬೇಕಿದೆ.
ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಚುನಾವಣೆ ಮುಂಬರುವ ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + twenty =
Remember me
