ಬೆಂಗಳೂರು:ಕೆಲವು ಕ್ಷಣಗಳ ಕಾಲ ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನೇ ಹೋಲುವಂಥ ಯುವತಿಯ ಡೀಪ್ ಫೇಕ್ ಮತ್ತು ಡೀಪ್ ನೆಕ್ ಎನ್ನಬಹುದಾದ​ ವಿಡಿಯೋವೊಂದು ನಿನ್ನೆಯಿಂದ ವೈರಲ್ ಆಗಿತ್ತು. ಅದು ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಗಮನವನ್ನೂ ಸೆಳೆದಿತ್ತು.
ಈ ವಿಡಿಯೋ ವೈರಲ್ ಆದ ಬೆನ್ನಿಗೆ ನಟಿ ರಶ್ಮಿಕಾ ಮಂದಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದರು. ಝರಾ ಪಟೇಲ್ ಎಂಬಾಕೆಯ ವಿಡಿಯೋವರನ್ನು ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಅದು ಕೆಲವ ಕ್ಷಣಗಳ ಕಾಲ ರಶ್ಮಿಕಾ ಥರವೇ ಕಾಣುವಂತೆ ಮಾಡಲಾಗಿತ್ತು. ಈ ವಿಡಿಯೋವನ್ನು ಪತ್ರಕರ್ತರೊಬ್ಬರು ಹಂಚಿಕೊಂಡು ಕಾನೂನುಕ್ರಮದ ಅವಶ್ಯಕತೆ ಇದೆ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ:ಫೇಕ್​ ವಿಡಿಯೋ ವೈರಲ್ ಮಾಡಿರುವುದಕ್ಕೆ ರಶ್ಮಿಕಾ ಪ್ರತಿಕ್ರಿಯೆ; ಟೆಕ್ನಾಲಜಿಗಳ ದುರುಪಯೋಗ ಮಾಡಿಕೊಳ್ಳುತ್ತಿರೋದು ಭಯಾನಕ ಕೃತ್ಯ..!
ಅದನ್ನು ರಿಪೋಸ್ಟ್ ಮಾಡಿಕೊಂಡಿದ್ದ ನಟ ಅಮಿತಾಭ್ ಬಚ್ಚನ್, ಇಂಥವುದರ ವಿರುದ್ಧ ಕಠಿಣ ಕಾನೂನುಕ್ರಮ ಅಗತ್ಯವಿದೆ ಎಂದು ಆಗ್ರಹಿಸಿದ್ದರು. ಬಳಿಕ ಈ ವಿಡಿಯೋ ರಶ್ಮಿಕಾ ಗಮನಕ್ಕೂ ಬಂದಿದ್ದು, ಆಕೆಯೂ ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಲ್ಲದೆ ಬೇಸರವನ್ನೂ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?
ಇದಾದ ಬಳಿಕ ಅಮಿತಾಭ್ ಬಚ್ಚನ್ ಅವರ ಎಕ್ಸ್ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿರುವ ನಟಿ ರಶ್ಮಿಕಾ ಮಂದಣ್ಣ, ನನ್ನ ಪರವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು ಸರ್, ನಿಮ್ಮಂಥ ನಾಯಕರಿರುವ ದೇಶದಲ್ಲಿ ನಾನು ಸುರಕ್ಷಿತ ಎಂಬ ಭಾವನೆ ಬಂದಿದೆ ಎಂದು ಹೇಳಿಕೊಂಡಿದ್ದಾರೆ.
Thankyou for standing up for me sir, I feel safe in a country with leaders like you.https://t.co/rD9umXhKEn
— Rashmika Mandanna (@iamRashmika)November 6, 2023

ಮಾಮೂಲಿಗಿಂತ ಅರ್ಧಕ್ಕೂ ಅಧಿಕ ಕಡಿಮೆ ಖರ್ಚಲ್ಲಿ ಈಗ ಎಕ್ಸ್ ಸಬ್​ಸ್ಕ್ರಿಪ್ಷನ್ ಲಭ್ಯ; ಏನಿದು ಎಲಾನ್ ಮಸ್ಕ್ ಕಮರ್ಷಿಯಲ್ ಪ್ಲ್ಯಾನ್?

ಫ್ರೆಷರ್ಸ್​ಗೆ ಹೋಲಿಸಿದ್ರೆ ಇನ್​ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
