‘ಕಾರ್ಗಿಲ್ ರಣಭೂಮಿಯಲ್ಲಿ ಭಾರತ ಪಾಕಿಸ್ತಾನವನ್ನು ಬಗ್ಗುಬಡಿದು ದಿಗ್ವಿಜಯ ಸಾಧಿಸಿದ ಮಹಾದಿನಕ್ಕೆ ಇಂದಿಗೆ ಬರೋಬ್ಬರಿ 21 ವರ್ಷ. ‘ಆಪರೇಷನ್ ವಿಜಯ್’ ಹೆಸರಲ್ಲಿ ಪಾಕಿಸ್ತಾನದ ವಿರುದ್ಧ 1999ರಲ್ಲಿ ಭಾರತೀಯ ಸೇನೆ ಸುಮಾರು 60 ದಿನಗಳ ಕಾರ್ಯಾಚರಣೆ ನಡೆಸಿತ್ತು. ಅದರಲ್ಲಿ ಭಾರತ ವಿಜಯ ಸಾಧಿಸುವುದರೊಂದಿಗೆ ಜುಲೈ 26ರಂದು ಯುದ್ಧ ಕೊನೆಗೊಂಡಿತ್ತು. ಯುದ್ಧದಲ್ಲಿ ಪಾಲ್ಗೊಂಡು ವಿಜಯದುಂದುಭಿ ಮೊಳಗಿಸಿದ ಕರ್ನಾಟಕದ ವೀರಯೋಧರು ತಮ್ಮ ಆ ರಣರೋಚಕ ಅನುಭವಗಳನ್ನು ವಿಜಯವಾಣಿ ಓದುಗರಿಗಾಗಿ ಹಂಚಿಕೊಂಡಿದ್ದಾರೆ.
18ನೇ ವಯಸ್ಸಿಗೆ ಸೇನೆಗೆ ಸೇರಿದ್ದೆ. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೈನಿಕರು ಮಿಸೈಲ್ ಬಾಂಬ್​ನಿಂದ ದಾಳಿ ನಡೆಸಿದಾಗ ಜತೆಗಿದ್ದ ಏಳು ಸೈನಿಕರು ವೀರಮರಣ ಅಪ್ಪಿದರು. ಸೈನಿಕರ ಶವ ತೆಗೆದುಕೊಂಡು ಹೋಗಲು ಬಂದ ಸೇನಾ ಸಿಬ್ಬಂದಿ, 20 ಅಡಿ ಹಿಮ ಕಂದಕದಲ್ಲಿ ಬಿದ್ದಿದ್ದ ನನ್ನನ್ನು ನೋಡಿ ‘ರಂಗಪ್ಪ ಬದುಕಿದ್ದಾನೆ’ ಎಂದು ಕೂಗಿದರು. ತಕ್ಷಣ ಹೆಲಿಕಾಪ್ಟರ್ ಕರೆಸಿ ಪಂಜಾಬ್ ಚಂಡಿಗಡ್ ಆಸ್ಪತ್ರೆಗೆ ಸೇರಿಸಲಾಯಿತು. ಆರು ತಿಂಗಳು ಕೋಮಾ, ಒಂದು ವರ್ಷ ಬೆಡ್​ನಲ್ಲೇ ಇದ್ದೆ. ಬಾಂಬ್​ನಿಂದ 2 ಕಾಲು, 2 ಕೈ ಹಾನಿಯಾಗಿದ್ದವು. ಬಲಗಾಲು ಸಂಪೂರ್ಣವಾಗಿ ಕತ್ತರಿಸಲಾಗಿದೆ.
| ರಂಗಪ್ಪ ಆಲೂರ ಹುಲಸಗೇರಿ, ಬಾದಾಮಿ
ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ಊಟ-ನಿದ್ರೆ ಇಲ್ಲದೆ ಯುದ್ಧ ಮಾಡಿದ್ದೆವು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × four =
Remember me
