ಮುಂಬೈ:ಮಕ್ಕಳ ಮುಂದೆ ಪೋಷಕರು ಲೈಂಗಿಕತೆ ಹಾಗೂ ಮದ್ಯಪಾನ ಸೇವನೆ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ನಮ್ಮ ಮನೆಯಲ್ಲಿ ಹಾಗಿರಲಿಲ್ಲ, ನಮ್ಮ ಪೋಷಕರು ವಿಶಾಲ ಚಿಂತನೆಯುಳ್ಳವರು ಎಲ್ಲಾ ಮಾಹಿತಿಯನ್ನು ನಮ್ಮೊಂದಿಗೆ ಮುಕ್ತವಾಗಿ ಹೇಳುತ್ತಿದ್ದರು ಎಂದು ಬಾಲಿವುಡ್​ ನಟಿ ನುಶ್ರತ್​ ಹೇಳಿಕೊಂಡಿದ್ದಾರೆ.
ಬಾಲ್ಯದಲ್ಲೇ ಮಕ್ಕಳು ತಮ್ಮ ಪೋಷಕರಿಂದ ಮಾಹಿತಿಯನ್ನು ಪಡೆಯುವುದು ಮುಖ್ಯ, ಇದರಿಂದ ಭವಿಷ್ಯದಲ್ಲಿ ಅವರು ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗುತ್ತೆ ಎಂಬುದನ್ನು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮುಕ್ತವಾಗಿ ಚರ್ಚಿಸಿರುವ ನುಶ್ರತ್ ಭರುಚ್ಚ​, ನಮ್ಮ ಮನೆಯಲ್ಲೂ ಸಹ ಯಾವುದೇ ಕಟ್ಟುಪಾಡುಗಳು ಇರಲಿಲ್ಲ, ಇಂದಿನ ಮಕ್ಕಳು ತುಂಬಾ ಕುತೂಹಲದಿಂದ ಎಲ್ಲವನ್ನೂ ಕೇಳುತ್ತಿರುತ್ತಾರೆ. ಅವರಲ್ಲಿ ಅನೇಕ ಪ್ರಶ್ನೆಗಳಿರುತ್ತವೆ. ಅವರಿಗೆ ಅರ್ಥವಾಗುವ ಹಾಗೆ ಉತ್ತರ ನೀಡಬೇಕು. ನಿಮ್ಮ ಮಗು ಏನನ್ನಾದರೂ ನೋಡಿಲ್ಲ ಅಥವಾ ಗಮನಿಸಿಲ್ಲ ಅಂದುಕೊಂಡಿದ್ದರೆ ತಪ್ಪು, ಏಕೆಂದರೆ ಕೆಲವೊಂದು ವಿಷಯಗಳು ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿರುತ್ತವೆ. ಹೀಗೆ ಆಗಲು ಪೋಷಕರೇ ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ.
ನಮ್ಮ ಮನೆಯಲ್ಲೂ ಸಹ ಇದೇ ರೀತಿ ಮುಕ್ತವಾಗಿ ನಮ್ಮ ಪೋಷಕರು ನಮ್ಮ ಸಣ್ಣ ಸಣ್ಣ ಪ್ರಶ್ನೆಗಳಿಗೂ ಅರ್ಥವಾಗುವ ಹಾಗೆ ಉತ್ತರಿಸುತ್ತಿದ್ದರು. ನಮ್ಮ ಮನೆಯಲ್ಲಿ ಇಂತಹ ವಿಷಯಗಳು ಕೂಡ ಸಾಮಾನ್ಯರಂತೆ ಚರ್ಚೆ ಮಾಡಿದ್ದೇವೆ. ಇದರ ಸಂಪೂರ್ಣ ಕ್ರೆಡಿಟ್​ ನನ್ನ, ತಾಯಿ, ತಂದೆ ಹಾಗೂ ನನ್ನ ಅಜ್ಜಿಗೆ ಹೋಗುತ್ತದೆ. ನಮ್ಮ ಕುಟುಂಬ ಯಾವಾಗಲೂ ಮುಕ್ತ ಮತ್ತು ಬೆಂಬಲವನ್ನು ಹೊಂದಿದೆ. ಹಾಗಾಗಿ ನಾನು ಮೊದಲ ಬಾರಿ ನನ್ನ ತಂದೆ-ತಾಯಿ ಹಾಗೂ ಅವರ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.(ಏಜೆನ್ಸೀಸ್​)
ಕಾಂಗ್ರೆಸ್​ ಆಡಳಿತದಲ್ಲಿ ಒಂದೂ ಹಗರಣದ ತನಿಖೆಯಾಗಿಲ್ಲ ಏಕೆ?: ಸಚಿವ ಅಶ್ವತ್ಥ್​ ನಾರಾಯಣ್​

ಸಲ್ಮಾನ್​ ಖಾನ್​ಗೆ ಬೆದರಿಕೆ ಪತ್ರ ಕಳುಹಿಸಿಲ್ಲ ಎಂದ ಗ್ಯಾಂಗ್​​ಸ್ಟರ್: ​ದೆಹಲಿ ಪೊಲೀಸರ ಮುಂದೆ ಹೇಳಿದ್ದು ಹೀಗೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × two =
Remember me
