ನವದೆಹಲಿ:ಪತಿ-ಪತ್ನಿ ನಡುವಿನ ಸಂಬಂಧ ಏಳೇಳು ಜನ್ಮಗಳದ್ದು ಎಂದು ನಮ್ಮ ಪೂರ್ವಿಕರು ಹೇಳಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೆಂಡತಿ ಟೀ ಮಾಡಲಿಲ್ಲ, ಗಂಡ ಚಿಪ್ಸ್​ ತರಲಿಲ್ಲ, ಕೇಳಿದಾಗ ಹಣ ಹಾಕಲಿಲ್ಲ ಎಂಬ ಕ್ಷುಲಕ ಕಾರಣಕ್ಕೆ ದಂಪತಿಗಳ ನಡುವೆ ಜಗಳವಾಗುತ್ತಿದ್ದು, ಡಿವೋರ್ಸ್​ ಮೊರೆ ಹೋಗುತ್ತಿದ್ದಾರೆ. ಆದರೆ, ಇದೀಗ ಅದೇ ರೀತಿಯ ಘಟನೆಯೊಂದರಲ್ಲಿ ಪತಿಯ ಆ ಒಂದು ಕೆಟ್ಟ ಅಭ್ಯಾಸಕ್ಕೆ ಬೇಸತ್ತ ಪತ್ನಿ ಆತನಿಗೆ ಡಿವೋರ್ಸ್ ನೀಡಲು ಮುಂದಾಗಿದ್ದು, ಈ ಸುದ್ದಿ ಸಖತ್ ಸೌಂಡ್​ ಮಾಡುತ್ತಿದೆ.
ಈ ಕುರಿತು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಬರೆದುಕೊಂಡಿದ್ದು, ತನ್ನ ಪತಿಗೆ ಡಿವೋರ್ಸ್ ನೀಡುತ್ತಿರುವ ಬಗ್ಗೆ ಕಾರಣವನ್ನು ಉಲ್ಲೇಖಿಸಿದ್ದಾರೆ. ಈ ಸುದದ್ದಿ ವೈರಲ್​ ಆಗುತ್ತಿದ್ದಂತೆ ಹಲವರು ಕಿಡಿಕಾರಿದ್ದು, ಮಹಿಳೆಯ ನಡೆಗೆ ಆಕ್ರೋಶ ಹೊರಹಾಕಿದ್ದಾರೆ.
ವೈತ್ತಿಯಲ್ಲಿ ನನ್ನ ಪತಿ ಚೆಫ್​ ಆಗಿದ್ದು, ಪ್ರತಿಷ್ಠಿತ ಹೋಟೆಲ್​ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಅವರು ಕೆಲಸ ಮುಗಿಸಿಕೊಂಡು ಬಂದ ಬಳಿಕ ಸೀದಾ ರೂಮಿಗೆ ತೆರಳಿ ಬೆಡ್​ ಮೇಲೆ ಮಲಗುತ್ತಾರೆ. ಅವರು ಡ್ರೆಸ್​ ಕೂಡ ಚೇಂಜ್​ ಮಾಡುವುದಿಲ್ಲ. ಅವರ ಬಟ್ಟೆಯ ಮೇಲೆ ಆಹಾರದ ಕಲೆ, ಗ್ರೀಸ್‌ ಸೇರಿದಂತೆ ಅನೇಕ ಕಲೆಗಳು ಇರುತ್ತವೆ. ಇದರಿಂದ ಬೆಡ್​ಸ್ಪ್ರೆಡ್ ಕೊಳೆಯಾಗುತ್ತಿತ್ತು. ಪ್ರತಿನಿತ್ಯ ನನಗೆ ಬೆಡ್​ಸ್ಪ್ರೆಡ್ ಬದಲಿಸಿ ಬೇಜಾರಾಗಿದೆ.
ಇದನ್ನೂ ಓದಿ:ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆ ವಿಚಾರವಾಗಿ ಪಂಜಾಬ್​ ಕಿಂಗ್ಸ್​ಮಾಲೀಕರೊಂದಿಗೆ ಶಾರುಖ್​ ಕಿತ್ತಾಟ; ಬಳಿಕ ಹೇಳಿದ್ದಿಷ್ಟು
ಈ ವಿಚಾರವಾಗಿ ನಾನು ಆತನಿಗೆ ಅನೇಕ ಬಾರಿ ಹೇಳಿದರೂ ನನ್ನ ಮಾತನ್ನು ಕೇಳುತ್ತಿಲ್ಲ. ಈ ಒಂದು ದುರಭ್ಯಾಸದ ಹೊರತಾಗಿ ಆತನ ಬೇರೆ ದೂರುಗಳಿಲ್ಲ. ಬೆಡ್​ ಮೇಲೆ ಆತ ಮಾಡುವ ಈ ಒಂದು ಕೆಲಸಕ್ಕೆ ಬೇಸತ್ತು ನಾನು ಡಿವೋರ್ಸ್​ ಕೊಡಲು ಮುಂದಾಗಿದ್ದೇನೆ ಎಂದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇತ್ತ ಮಹಿಳೆಯ ಪೋಸ್ಟ್​ಅನ್ನು ಖಂಡಿಸಿ ಹಲವರು ಕಮೆಂಟ್​ ಮಾಡಿದ್ದು, ಈ ರೀತಿಯ ಕಾರಣ ನೀಡಿ ಡಿವೋರ್ಸ್​ ನೀಡುವುದು ಸರಿಯಲ್ಲ. ಮನೆಯಲ್ಲಿ ಬೇರೆ ಕೋಣೆಯಿದ್ದರೆ ಆತನಿಗೆ ಅಲ್ಲಿ ಮಲಗಲು ಹೇಳಿ ಎಂದು ಕೆಲವರು ಸಲಹೆ ನೀಡಿದ್ದಾರೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:three × three =
Remember me
