ಚೆನ್ನೈ:ಸನಾತನ ಧರ್ಮ ನಿರ್ಮೂಲನೆ ಮಾಡುವ ಸಲುವಾಗಿಯೇ I.N.D.I.A ಮೈತ್ರಿಕೂಟವನ್ನು ರಚಿಸಲಾಗಿದೆ. ಒಕ್ಕೂಟದ ಎಲ್ಲಾ 26 ಪಕ್ಷಗಳು ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸಲು ಬದ್ದವಾಗಿದೆ. ಅಧಿಕಾರ ಸಿಗಬೇಕಿದೆ ಎಂದು ಹೇಳುವ ತಮಿಳುನಾಡು ಸರ್ಕಾರದ ಶಿಕ್ಷಣ ಸಚಿವ ಪೊನ್ಮುಡಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಸನಾತನ ಧರ್ಮವನ್ನು ಖಾಯಿಲೆಗೆ ಹೋಲಿಸಿ ತಮಿಳುನಾಡು ಸಿಎಂ ಸ್ಟಾಲಿನ್​ ಪುತ್ರ, ಸಚಿವ ಉದಯನಿಧಿ ವಿವಾದಕ್ಕೆ ಗುರಿಯಾಗಿದ್ದರು. ನಂತರ ಡಿಎಂಕೆ ಸಂಸದ ಎ. ರಾಜಾ ಸನಾತನ ಧರ್ಮವನ್ನು ಏಡ್ಸ್​​ ರೋಗಕ್ಕೆ ಹೋಲಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದರು. ಇದೀಗ ಶಿಕ್ಷಣ ಸಚಿವ ಪೊನ್ಮುಡಿ ಸನಾತನ ಧರ್ಮದ ನಿರ್ಮೂಲನೆಗಾಗಿ I.N.D.I.A ಮೈತ್ರಿಕೂಟವನ್ನು ರಚಿಸಲಾಗಿದೆ ಎಂದು ಹೇಳುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ವೇಳೆ ಸಚಿವ ಪೊನ್ಮುಡಿ ಸನಾತನ ಧರ್ಮದ ತತ್ವ-ಸಿದ್ದಾಂತದ ವಿರುದ್ಧ ಹೋರಾಡಲು I.N.D.I.A ಒಕ್ಕೂಟವನ್ನು ರಚಿಸಲಾಗಿದೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಸನಾತನ ಧರ್ಮದ ವಿರುದ್ಧದ ಹೋರಾಟದಲ್ಲಿ ಮೈತ್ರಿಕೂಟದಲ್ಲಿನ 26 ಪಕ್ಷಗಳು ಒಂದಾಗಿವೆ. ಆದರೆ, ಸನಾತನ ಧರ್ಮವನ್ನು ನಿರ್ಮೂಲನೆ ವಿಷಯಕ್ಕೆ ಬಂದಾಗ ನಾವೆಲ್ಲರೂ ಒಂದು ಅಂಶವನ್ನು ಒಪ್ಪುತ್ತೇವೆ.
"I.N.D.I.A alliance is formed to fight against the principles of Santana Dharma, we may have our differences among us but the 26 parties in the alliance are united in the fight against Santana Dharma but we need political power for that"DMK Minister Ponmudi.pic.twitter.com/tKQTTv1VsZ
ಇದನ್ನೂ ಓದಿ:ಚಂದ್ರಬಾಬು ನಾಯ್ಡು ಬಂಧನ; ಉದ್ದೇಶಪೂರ್ವಕವಾಗಿ ಜೈಲಿಗೆ ಕಳುಗಹಿಸಲಾಗಿದೆ ಎಂದು ಗುಡುಗಿದ ಪುತ್ರ ನಾರಾ ಲೋಕೇಶ್​
I.N.D.I.A ಮೈತ್ರಿಕೂಟಕ್ಕೆ ಸಮಾನತೆ, ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರ ರಕ್ಷಣೆ, ಲಿಂಗ ಸಮಾನತೆ ಇವೆಲ್ಲವೂ ಬೇಕು. ನೀವು ಮತ್ತು ನಾನು ಈ ಬಗ್ಗೆ ಮಾತನಾಡಬಹುದು, ಆದರೆ ನಾವು ರಾಜಕೀಯದಲ್ಲಿ ಗೆದ್ದಾಗ ಮಾತ್ರ, ನಾವು ಬದಲಾವಣೆಗಳನ್ನು ಮಾಡಬಹುದು ಎಂದು ಖಚಿತಪಡಿಸಿಕೊಳ್ಳಬಹುದು” ಎಂದು ಹೇಳುವ ಮೂಲಕ ಡಿಎಂಕೆ ಸಚಿವ ಪೊನ್ಮುಡಿ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.
ಸೆಪ್ಟೆಂಬರ್​ 2ರಂದು ನಡೆದಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಭಾಗಿಯಾಗಿದ್ದ ಸಚಿವ ಉದಯನಿಧಿ ಸ್ಟಾಲಿನ್​ ಪುತ್ರ ಸನಾತನ ಧರ್ಮವನ್ನು ಮಲೇರಿಯಾ, ಕೊರೋನಾ ಮತ್ತು ಡೆಂಗ್ಯೂ ಮುಂತಾದ ಕಾಯಿಲೆಗಳಿಗೆ ಹೋಲಿಸಿದ್ದರು. ಅವುಗಳನ್ನು ನಿರ್ಮೂಲನೆ ಮಾಡುವ ಅಗತ್ಯವಿದೆ ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.
ತಮ್ಮ ಹೇಳಿಕೆ ತೀವ್ರ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಉದಯನಿಧಿ ತಾವು ಸಮಾವೇಶದಲ್ಲಿ ಆಡಿದ ಮಾತುಗಳಿಗೆ ಬದ್ದನಾಗಿದ್ದು, ಯಾವುದೇ ತರಹದ ಕ್ರಮ ಜರುಗಿಸಿದರು ಎದುರಿಸಲು ಸಿದ್ದನಿದ್ದೇನೆ ಎಂದು ಹೇಳುವ ಮೂಲಕ ತಾವು ಆಡಿದ ಮಾತುಗಳನ್ನು ಸಮರ್ಥಿಸಿಕೊಂಡಿದ್ದರು.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:sixteen + 6 =
Remember me
