ಮುಂಬೈ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಮನೆಯಲ್ಲಿ ವಾರಕ್ಕೆ ಒಂದೆರಡು ಬಾರಿಯಾದರೂ ಪಾರ್ಟಿ ನಡೆಯುತ್ತಿತ್ತು. ಆಗೆಲ್ಲ ಸುಶಾಂತ್ ಮದ್ಯ ಅಥವಾ ಮಾದಕ ದ್ರವ್ಯ ಸೇವಿಸುತ್ತಿದ್ದ…!
ಸಾವಿಗೆ ಒಂದೆರಡು ದಿನಗಳ ಮುಂಚೆ ಆತನಿಗಾಗಿ ಗಾಂಜಾವನ್ನು ಸಿಗರೇಟ್​ನಂತೆ ಸುರುಳಿ ಸುತ್ತಿ ಬಾಕ್ಸ್​ನಲ್ಲಿಡಲಾಗಿತ್ತು. ಸಾವಿನ ನಂತರ ನೋಡಿದಾಗ ಅವು ಅಲ್ಲಿರಲಿಲ್ಲ ಎಂದು ಸುಶಾಂತ್​ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ನೀರಜ್​ ಸಿಂಗ್​ ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ;ಬಾಬ್ರಿ ಮಸೀದಿ ಧ್ವಂಸದ ತೀರ್ಪು ಸೆ.30 ರೊಳಗೆ ನೀಡಿ; ಸುಪ್ರೀಂ ಸೂಚನೆ; ಏನಾಗುತ್ತೆ ಅಡ್ವಾಣಿ, ಜೋಶಿ, ಕಲ್ಯಾಣ್​ ಸಿಂಗ್​ ಭವಿಷ್ಯ?
ಸುಶಾಂತ್​ ಮ್ಯಾನೇಜರ್​ ಆಗಿದ್ದ ಸ್ಯಾಮ್ಯುವೆಲ್​ ಮಿರಾಂಡಾ, ರಜತ್​ ಮೇವಾಠಿ, ಸಿದ್ಧಾರ್ಥ್​ ಪೀಠಾಣಿ, ಆಯುಷ್​, ಆನಂದಿ, ಸ್ಯಾಮ್ಯುವೆಲ್​ ಹಾಕೀಫ್​, ಅಶೋಕ್​​ ಖಾಸು ಹಾಗೂ ಕೇಶವ್​ ಮೊದಲಾದವರೆಲ್ಲ ಸುಶಾಂತ್​ಗಾಗಿ ಕೆಲಸ ಮಾಡುತ್ತಿದ್ದರು ಎಂದು ನೀರಜ್​ ಹೇಳಿದ್ದಾನೆ.
ಸುಶಾಂತ್​, ರಿಯಾ, ಆನಂದಿ ಮತ್ತು ಆಯುಷ್​ ಮನೆಯಲ್ಲಿಯೇ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಸುಶಾಂತ್​ ಮದ್ಯ ಹಾಗೂ ಗಾಂಜಾ ಸೇವಿಸುತ್ತಿದ್ದರು. ಸ್ಯಾಮ್ಯುವೆಲ್​ ಜಾಕೋಬ್​ ಅವರಿಗಾಗಿ ಗಾಂಜಾವನ್ನು ಸುರುಳಿ ಸುತ್ತಿ ಕೊಡುತ್ತಿದ್ದ. ಕೆಲವೊಮ್ಮೆ ನಾನೂ ಕೂಡ ಈ ಕೆಲಸ ಮಾಡುತ್ತಿದ್ದೆ. ಸಾವಿಗೆ ಮುನ್ನ ಮೂರು ದಿನಗಳವರೆಗೆ ಗಾಂಜಾ ಸುರುಳಿಗಳನ್ನು ಸುತ್ತಿ ಬಾಕ್ಸ್​ನಲ್ಲಿಟ್ಟಿದೆ. ಆದರೆ, ಸಾವಿನ ನಂತರ ನೋಡಿದಾಗ ಆ ಬಾಕ್ಸ್​ ಖಾಲಿಯಾಗಿತ್ತು ಎಂದು ನೀರಜ್​ ಮುಂಬೈ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಇದನ್ನೂ ಓದಿ;ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?
ಸುಶಾಂತ್​ ಕೆಲ ದಿನಗಳ ಕಾಲ ರಿಯಾ ಮನೆಯಲ್ಲಿದ್ದರು. ಆ ಬಳಿಕ ಕೇಳೀದಾಗ ಸುಶಾಂತ್​ ಸರ್​ ಆಆರೋಗ್ಯ ಸರಿಯಿಲ್ಲ ಎಂದು ತನಗೆ ತಿಳಿಸಲಾಗಿತ್ತು ಎನ್ನುವುದು ನೀರಜ್​ ಹೇಳಿಕೆ.
ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eight =
Remember me
